Advertisement

ಲಂಚಾವತಾರಿಯ ನೆನಪಲ್ಲಿ…

09:14 PM Nov 08, 2019 | Lakshmi GovindaRaju |

ಅಂತರಂಗ ರಂಗ ತಂಡವು, ಮಾಸ್ಟರ್‌ ಹಿರಣ್ಣಯ್ಯ ಸ್ಮರಣಾರ್ಥ ಹಾಸ್ಯಮೇಳವನ್ನು ಹಮ್ಮಿಕೊಂಡಿದೆ. ಅಂಕಲ್‌ ಶ್ಯಾಮ್‌ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ, ಹಾಸ್ಯ ದಿಗ್ಗಜರಾದ ಪ್ರೊ. ಕೃಷ್ಣೇಗೌಡ, ರಿಚರ್ಡ್‌ ಲೂಯಿಸ್‌, ಎಸ್‌.ಷಡಕ್ಷರಿ, ಎಂ.ಎಸ್‌. ನರಸಿಂಹಮೂರ್ತಿ, ವೈ.ವಿ.ಗುಂಡೂರಾವ್‌, ಅಸಾದುಲ್ಲಾ ಬೇಗ್‌, ಬಾಬು ಹಿರಣ್ಣಯ್ಯ, ಎನ್‌. ರಾಮನಾಥ್‌, ಬಸವರಾಜ ಬೆಣ್ಣಿ, ಉಮೇಶ್‌ ಗೌಡ, ಅಚ್ಯುತ್‌ರಾವ್‌ ಪದಕಿ, ಪ್ರೊ. ಪುತ್ತೂರಾಯ, ಎಚ್‌.ವಿ. ನಟರಾಜ್‌ ಮೊದಲಾದವರು ಭಾಗವಹಿಸಲಿದ್ದಾರೆ.

Advertisement

ಇದೇ ವೇಳೆ, 70 ವರ್ಷ ತುಂಬಿದ ಷಡಕ್ಷರಿ ಅವರನ್ನು ಗೌರವಿಸಲಾಗುವುದು. ಶಿವಮೊಗ್ಗ ವೇಣುಗೋಪಾಲ್‌ರಿಂದ ಗೀತಗಾಯನ, ಪರಮಶಿವನ್‌ರಿಂದ ರಂಗಗೀತೆ, ರಮೇಶ್‌ ಗುರುರಾಜ್‌ ತಂಡದಿಂದ ನಾಂದಿಗೀತೆ, ಮಾಸ್ಟರ್‌ ಯೋಗಾಕ್ಷನಿಂದ “ಅಷ್ಟೋತ್ತರ ಬಡ್ಜೆಟ್‌ ನಾಮಾವಳಿ’, ಗಾನವಿನೋದಿನಿ ಸುಬ್ಬರಾಮ್‌ರಿಂದ “ಭ್ರಷ್ಟಾಚಾರ ಮತ್ತು ಮಕ್ಮಲ್‌ ಟೋಪಿ’ ದೃಶ್ಯಾವಳಿ ನಡೆಯಲಿದೆ. ಬಾಬು ಹಿರಣ್ಣಯ್ಯ ಅವರ “ಅಪ್ಪ ಹೇಳಿದ ಕಥೆಗಳು’ ಪುಸ್ತಕವೂ ಬಿಡುಗಡೆಗೊಳ್ಳಲಿದೆ.

ಎಲ್ಲಿ?: ಎಚ್‌.ಎನ್‌. ಕಲಾಕ್ಷೇತ್ರ, ಜಯನಗರ ನ್ಯಾಷನಲ್‌ ಕಾಲೇಜು
ಯಾವಾಗ?: ನ.10, ಭಾನುವಾರ ಬೆಳಗ್ಗೆ 10.30-7.30

Advertisement

Udayavani is now on Telegram. Click here to join our channel and stay updated with the latest news.

Next