Advertisement
ಬೆನಕನಹಳ್ಳಿ ರೇವಣಸಿದ್ದಪ್ಪ ಎಂಬವರ ಮೇಲೆ ಸಿ.ಶಿವಮೂರ್ತಿ ಎನ್ನುವವರು ದೂರು ಸಲ್ಲಿಸಿದ್ದು, ಹಣ ವಪಾಸು ಕೊಡುವಂತೆ ಕೇಳಿದಕ್ಕೆ ನನ್ನ ಮೇಲೆ ಇದೀಗ ಜೀವ ಬೆದರಿಕೆ ಹಾಕಿದ್ದು ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕೇಳಿಕೊಂಡಿದ್ದಾರೆ.
Related Articles
Advertisement
2022ರ ಅಕ್ಟೋಬರ್ 10 ರಂದು ರೇವಣಸಿದ್ದಪ್ಪ ಮತ್ತು ಎನ್.ಪಿ.ಶೇಖರ್ ನಮ್ಮ ಮನೆಗೆ ಬಂದು 30 ಲಕ್ಷ ರೂ ನಗದು ಹಣ ಪಡೆದುಕೊಂಡು ತೆರಳಿದ್ದರು. ನಂತರ ದಿನಾಂಕ ಅ.15 ರಂದು ಎನ್.ಪಿ.ಶೇಖರ್ ನನಗೆ ಪೋನ್ ಮಾಡಿ ನೀವು ಚಿತ್ರದುರ್ಗ ಬೈಪಾಸ್ ರಸ್ತೆಗೆ ಬಂದು ರೇವಣಸಿದ್ದಪ್ಪರ ಕಾರ್ರು ಚಾಲಕ ಅರ್ಜುನ್ ಬಿ.ಶೆಟ್ಟಿ ಇವರಿಗೆ 20 ಲಕ್ಷ ರೂ ಹಣ ತಲುಪಿಸುವಂತೆ ಸೂಚಿಸಿದ್ದರ ಹಿನ್ನಲೆಯಲ್ಲಿ ನಾನು 20 ಲಕ್ಷ ರೂ ಗಳ್ನು ನೀಡಿದ್ದೆ ಎಂದು ಶಿವಮೂರ್ತಿ ದೂರಿನಲ್ಲಿ ತಿಳಿಸಿದ್ದಾರೆ.
ಎನ್.ಪಿ.ಶೇಖರ್ 50 ಲಕ್ಷರೂಪಾಯಿಗಳ ಮೊತ್ತಕ್ಕೆ ಭದ್ರತೆಗಾಗಿ ಅರ್ಜುನ್ ಅವರ ಕಡೆಯಿಂದ ಶೇಖರ್ ರವರ ಬ್ಯಾಂಕ್ ಆಫ್ ಬರೋಡದ ಚೆಕ್ ನನಗೆ ನೀಡಿದ್ದರು. ನಂತರ ಬೆಂಗಳೂರಿನಲ್ಲಿ ರೇವಣಸಿದ್ದಪ್ಪ ಚಿಕ್ಕಜೋಗಿಹಳ್ಳಿ ನಾಗಪ್ಪರ ಸಮ್ಮುಖದಲ್ಲಿ15 ಲಕ್ಷರೂಗಳ ಎರಡು ಬಾರಿ ಒಟ್ಟು 30 ಲಕ್ಷರೂಗಳ ಹಣವನ್ನು ಪಡೆದುಕೊಂಡಿದ್ದಾರೆ. ಎನ್.ಪಿ.ಶೇಖರ್ ರವರು ಹೇಳಿದಂತೆಲ್ಲಾ ಕಾರು ಚಾಲಕ ಅರ್ಜುನ್ ಬಿ.ಶೆಟ್ಟಿಯವರ ಬ್ಯಾಂಕ್ ಖಾತೆಗೆ ನವೆಂಬರ್ 20 ರಿಂದ 2023ರ ಫೆಬ್ರವರಿ 22ರ ವರೆಗೆ ಒಟ್ಟು 37 ಲಕ್ಷ 78 ಸಾವಿರ ರೂಪಾಯಿಗಳ ಹಣವನ್ನು ನನ್ನ ಬ್ಯಾಂಕ್ ಖಾತೆಯಿಂದ ನೀಡಿರುತ್ತೇನೆ ಅಲ್ಲದೆ ಬೇರೆಯವರ ಖಾತೆಯಿಂದಲೂ16 ಲಕ್ಷದ 75 ಸಾವಿರ ರೂಪಾಯಿಗಳನ್ನು ಜಮಾ ಮಾಡಿರುತ್ತೇನೆ ಎಂದು ಶಿವಮೂರ್ತಿ ದೂರಿನಲ್ಲಿ ವಿವರಸಿದ್ದಾರೆ.
ಚುನಾವಣೆ ದಿನಾಂಕ ಘೋಷಣೆಯಾದ ನಂತರ ಬಿಜೆಪಿ ಟಿಕೆಟ್ ಕೊಡಿಸಿಲ್ಲದ ಕಾರಣಕ್ಕಾಗಿ ಅವರ ಹಣ ವಪಾಸು ಕೊಡುವಂತೆ 2023 ಎಪ್ರಿಲ್ 30 ರ ಮದ್ಯದ ಅವಧಿಯಲ್ಲಿ ಒಟ್ಟು 2 ಕೋಟಿ 3 ಲಕ್ಷ ರೂ. ಹಣವನ್ನು ನೀಡುವಂತೆ ಅವರಿಗೆ ಕೇಲಿದ್ದೇನೆ. ಹಣ ಕೊಡುವಂತೆ ಪೀಡಿಸಿದರೆ ನಿನ್ನನ್ನು ಉಳಿಸುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ನನ್ನಿಂದ ಕೋಟ್ಯಂತರ ರೂಗಳನ್ನು ಪಡೆದುಕೊಂಡ ಬೆನಕಹಳ್ಳಿ ರೇವಣಸಿದ್ದಪ್ಪ ಮತ್ತು ಪುತ್ತೂರಿನ ಶೇಖರ್ ಟಿಕೆಟ್ ಕೊಡಿಸದ ಹಿನ್ನಲೆಯಲ್ಲಿ ಹಣ ವಾಪಾಸು ನೀಡುವಂತೆ ಕೇಳುತ್ತಾ ಬಂದೆ ಹಣ ನೀಡಿರುವುದಕ್ಕೆ ನನ್ನ ಬಳಿ ಬ್ಯಾಂಕ್ ಚೆಕ್‌ಗಳ ರಸೀದಿ ಮತ್ತಿತರ ದಾಖಲೆಗಳಿವೆ ಈ ಸಂಬಂಧ ಪೊಲೀಸರಿಗೆ ದೂರು ಸಲ್ಲಿಸಿ ಹಣ ಕೊಡಿಸುವುದರ ಜತೆಗೆ ಪ್ರಾಣ ಬೆದರಿಕೆ ಒಡ್ಡಿರುವ ಈ ಇಬ್ಬರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೊಟ್ಟೂರು ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಗೆ ಅಕ್ಟೋಬರ್19 ರಂದು ದೂರು ನೀಡಿರುವೆ. ಎಂದು ಸಿ.ಶಿವಮೂರ್ತಿ ಕೊಟ್ಟೂರು ಹೇಳಿದ್ದಾರೆ.
ಅನಾವಶ್ಯಕವಾಗಿ ಸಿ.ಶಿವಮೂರ್ತಿ ನಮ್ಮ ತೇಜೋವಧೆ ಮಾಡುತ್ತಿದ್ದು. ಈ ಸಂಬಂಧ ಈಗಾಗಲೇ ಅವರ ಮೇಲೆ ಮಾನನಷ್ಟ ಮೊಕದ್ದಮೆಯನ್ನು ಹೂಡಿರುವೆ ಯಾವುದೇ ಬಗೆಯ ವಂಚನೆ ಶಿವಮೂರ್ತಿಗೆ ನಮ್ಮಿಂದ ಆಗಿಲ್ಲ ಎಂದು ರೇವಣಸಿದ್ದಪ್ಪ ಹೇಳಿದ್ದಾರೆ.