Advertisement

ಕುಷ್ಟಗಿ: ತರಗತಿ ಬಹಿಷ್ಕರಿಸಿ ಬೃಹತ್ ಪ್ರತಿಭಟನೆ ನಡೆಸಿದ ವಿದ್ಯಾರ್ಥಿ ಸಮೂಹ

12:56 PM Dec 15, 2021 | Team Udayavani |

ಕುಷ್ಟಗಿ: ವಿದ್ಯಾರ್ಥಿಗಳು ಗುಡುಗಿದರೆ ವಿಧಾನಸೌಧ ನಡಗುವುದು ಎಂದು ಗುಡುಗು ಹಾಕಿದ ಕುಷ್ಟಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು, ಸೋಮವಾರ ತರಗತಿ ಬಹಿಷ್ಕರಿಸಿ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರ ಸೇವಾ ಭದ್ರತೆ, ಹುದ್ದೆ ಖಾಯಂಮಾತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಡಿ.10 ರಿಂದ ಅನಿರ್ದಿಷ್ಟವಾಧಿ ಧರಣಿ ಸತ್ಯಾಗ್ರಹ ನಿರತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ 1700ಕ್ಕೂ ಬಿಎ, ಬಿಕಾಂ ವಿದ್ಯಾರ್ಥಿಗಳ ಕಾಲೇಜಿನಲ್ಲಿ 53 ಅತಿಥಿ ಉಪನ್ಯಾಸಕರು ಕಾಲೇಜಿಗೆ ಸತತ ಗೈರು ಆಗಿದ್ದು ತರಗತಿಗಳು ನಡೆಯುತ್ತಿಲ್ಲ‌ ಆಕ್ಷೇಪಿಸಿರು. ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ಹಾದಿ ಹಿಡಿದರು.

ಕಾಲೇಜಿನಲ್ಲಿ ಬೆಳಗ್ಗೆ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ತರಗತಿ ಕೋಣೆಯಲ್ಲಿ ಲಭ್ಯವಿರುವ ಉಪನ್ಯಾಸಕರಿಂದ ತರಗತಿ ಆರಂಬಿಸಿದಾಗ್ಯೂ ತರಗತಿ ವಂಚಿತ ವಿದ್ಯಾರ್ಥಿಗಳು ಸೋಮವಾರ ನಿರ್ಧರಿಸಿದಂತೆ ಬಸವೇಶ್ವರ ವೃತ್ತದ ಮೂಲಕ ಪ್ರತಿಭಟನೆಗೆ ಮುಂದಾದರು. ಆದರೆ ಪೊಲೀಸರು, 1700 ಸಂಖ್ಯೆಯಲ್ಲಿರುವ ವಿದ್ಯಾರ್ಥಿಗಳ ಪ್ರತಿಭಟನೆ ಬಂದೋಬಸ್ತಗೆ ಪೋಲೀಸರು ಇಲ್ಲ. ಅಂಜನಾದ್ರಿಗೆ ಪೊಲೀಸರು ಬಂದೀಬಸ್ತಗೆ ಹೋಗಿದ್ದರಿಂದ ತಹಶೀಲ್ದಾರ ಕಛೇರಿಗೆ ಮಾತ್ರ ಅವಕಾಶ ಕಲ್ಪಿಸಲಾಯಿತು. ನಂತರ ತಹಶೀಲ್ದಾರ ಕಛೇರಿಗೆ ಪ್ರತಿಭಟನಾ ಮೆರವಣಿಗರ ಸಂಚರಿಸಿ ತಹಶೀಲ್ದಾರ ಎಂ.ಸಿದ್ದೇಶ ಅವರಿಗೆ ಮನವಿ ಸಲ್ಲಿಸಲಾಯಿತು.

ಇದೇ ಮಾತನಾಡಿದ ನಾಗರಾಜ್ ಹಜಾಳ, 1700 ವಿದ್ಯಾರ್ಥಿಗಳಿರುವ ಕುಷ್ಟಗಿ ಕಾಲೇಜಿನ ವಿದ್ಯಾರ್ಥಿಳನ್ನು ಕುಷ್ಟಗಿ ತಾಲೂಕಾಡಳಿತ ಸಂಬಾಳಿಸಿಲ್ಲ. ಇನ್ನೂ ರಾಜ್ಯಾದ್ಯಂತ ನಡೆದ ಈ‌ಮುಷ್ಕರಕ್ಕೆ ಸರ್ಕಾರ ಹೇಗೆ ಸಂಭಾಳಿಸಲು ಸಾದ್ಯವಿದೆ. ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಸರ್ಕಾರ ಕೆಳಗಿಳಿಸುವ ಶಕ್ತಿ ಇದೆ ಎಂದರು.

Advertisement

ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಮುಖಂಡ ನವೀನ್ ಕೆಂಗಾರಿ, ಭೀಮಣ್ಣ ಮಾದರ ಮತ್ತೀತರಿದ್ದರು.

ಕಳೆದ ಡಿಸೆಂಬರ್ 10 ರಿಂದ ಉಪನ್ಯಾಸಕರಿಲ್ಲದೇ ಕಾಲೇಜಿಗೆ ಬಂದು ಹೋಗುವಂತಾಗಿದೆ. ಬೆಳಗಾವಿ ಅಧಿವೇಶನದಲ್ಲಿ ಸರ್ಕಾರ ಈ ವಿಷಯ ಗಂಭಿರವಾಗಿ ಪರಿಗಣಿಸಿಲ್ಲ. ಶೈಕ್ಷಣಿಕ ಭವಿಷ್ಯ ಪ್ರಶ್ನೆಯಾಗಿದ್ದು ಸರ್ಕಾರ ಕಾಯಂ ಉಪನ್ಯಾಸಕರು ನೇಮಿಸಿ, ಸಾದ್ಯವಾಗದೇ ಇದ್ದಲ್ಲಿ ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಿ ಎಂದು ವಿದ್ಯಾರ್ಥಿಗಳು ಹಕ್ಕೋತ್ತಾಯ ಮಂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next