Advertisement

ಸಿಎಎ ವಿರೋಧಿಸಿ ಬೃಹತ್‌ ಪ್ರತಿಭಟನೆ

02:30 PM Jan 07, 2020 | Team Udayavani |

ತಿ.ನರಸೀಪುರ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೊಂದಣಿ (ಎನ್‌ಆರ್‌ಸಿ) ವಿರೋಧಿಸಿ ಪಟ್ಟಣದಲ್ಲಿ ದಲಿತ ಪರ ಸಂಘಟನೆಗಳ ಕಾರ್ಯಕರ್ತರು, ಪ್ರಗತಿಪರರು ಹಾಗೂ ಮುಸ್ಲಿಮರು ಸೋಮವಾರ ಬೃಹತ್‌ ಪ್ರತಿಭಟನೆ ನಡೆಸಿದರು.

Advertisement

ತಾಲೂಕು ಕಚೇರಿ ಮಿನಿ ವಿಧಾನಸೌಧದ ಮುಂಭಾಗ ಜಮಾವಣೆಗೊಂಡಿದ್ದ ಹತ್ತಕ್ಕೂ ಹೆಚ್ಚು ದಲಿತ ಸಂಘಟನೆಗಳು, ಹಿಂದುಳಿದ ವರ್ಗ ಗಳ ಚುನಾಯಿತ ಜನಪ್ರತಿನಿಧಿಗಳು ಹಾಗೂ ಮುಸ್ಲಿಮರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಷ್ಟ್ರಧ್ವಜಗಳನ್ನು ಹಿಡಿದಿದ್ದ ಪ್ರತಿಭಟನಾಕಾರರು, ಸತತ ಮೂರು ತಾಸುಗಳಿಗೂ ಹೆಚ್ಚಾ ಕಾಲ ಧರಣಿ ನಡೆಸಿದರು.

ಹೋರಾಟವನ್ನು ಬೆಂಬಲಿಸಿ ಶಾಸಕದ್ವಯರಾದ ಡಾ.ಎಸ್‌.ಯತೀಂದ್ರ ಹಾಗೂ ಎಂ.ಅಶ್ವಿ‌ನ್‌ಕುಮಾರ್‌ ಭಾಗವಹಿಸಿದ್ದರು. ನಂತರ ತಹಶೀಲ್ದಾರ್‌ ಡಿ.ನಾಗೇಶ್‌ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಶಾಸಕ ಡಾ.ಎಸ್‌.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಕೇಂದ್ರ ಸರ್ಕಾರದ ಕುಮ್ಮಕ್ಕಿಗೆ ದೇಶದ ಸುಪ್ರೀಂ ಕೋರ್ಟ್‌ ಕೂಡ ಸಾಥ್‌ ನೀಡುತ್ತಿರುವುದು ದುರಂತ ಎಂದು ತಿಳಿಸಿದರು.

ಈ ವೇಳೆ ಎನ್‌ಕೆಎಫ್ ಫೌಂಡೇಷನ್‌ ಟ್ರಸ್ಟ್‌ನ ಅಧ್ಯಕ್ಷ ಎನ್‌.ಕೆ.ಫ‌ರೀದ್‌, ಪುರಸಭೆ ಸದಸ್ಯರಾದ ಟಿ.ಎಂ.ನಂಜುಂಡಸ್ವಾಮಿ, ಬಾದಾಮಿ ಮಂಜು, ತಾಪಂ ಸದಸ್ಯರಾದ ಬಿ.ಸಾಜಿದ್‌ ಅಹಮ್ಮದ್‌, ಎಂ.ರಮೇಶ್‌, ಮಾಜಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಸ್ವಾಮಿ, ಮುಖಂಡರಾದ ಕೆ.ಎನ್‌.ಪ್ರಭುಸ್ವಾಮಿ, ಎಸ್‌.ಆರ್‌.ಶಶಿಕಾಂತ್‌, ಡಿ.ಆರ್‌.ಮೂರ್ತಿ, ಆಲ ಗೂಡು ಎಸ್‌.ಚಂದ್ರಶೇಖರ್‌, ಬನ್ನಹಳ್ಳಿ ಸೋಮಣ್ಣ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next