Advertisement

ಬೃಹತ್‌ ಪ್ರತಿಭಟನೆ ನಾಳೆ

03:19 PM Nov 20, 2019 | Team Udayavani |

ಯಳಂದೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ವಿರುದ್ಧ ಮುಗ್ಧ ಮಕ್ಕಳಲ್ಲಿ ತಪ್ಪು ಅಭಿಪ್ರಾಯ ಮೂಡಿಸಲು ಹೊರಟಿರುವ ಶಿಕ್ಷಣ ಇಲಾಖೆ ಕ್ರಮ ಹಾಗೂ ಇದಕ್ಕೆ ಕುಮ್ಮಕ್ಕು ನೀಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಪ್ರಗತಿಪರ ಸಂಘಟನೆಗಳ ಸದಸ್ಯರು ನ.21ರಂದು ಪಟ್ಟಣದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲು ತೀರ್ಮಾನಿಸಿವೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಯರಿಯೂರು ರಾಜಣ್ಣ ತಿಳಿಸಿದರು.

Advertisement

ಪಟ್ಟಣದ ಡಾ.ಅಂಬೇಡ್ಕರ್‌ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಭಾಗವಹಿಸಿ ಮಾತನಾಡಿದರು. ಸಿಎಂಸಿ (ಚಿಲ್ಡ್ರನ್‌ ಮೂವ್‌ಮೆಂಟ್‌ ಫಾರ್‌ ಸಿವಿಕ್‌ ಅವೆರ್‌ನೆಸ್‌) ಎಂಬ ಸಂಸ್ಥೆ ಸಿದ್ಧಪಡಿಸಿರುವ ಕೈಪಿಡಿಯಲ್ಲಿ ಅಂಬೇಡ್ಕರ್‌ ಸಂವಿಧಾನ ರಚನೆ ಕುರಿತು ತಪ್ಪು ಮಾಹಿತಿಯಿದೆ. ಇದು ಅವರಿಗೆ ಮಾಡಿರುವ ಅವಮಾನ. ಇಂತಹ ಉನ್ನತ ಹುದ್ದೆಯಲ್ಲಿ ಟ್ಟುಕೊಂಡು ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. ಅವರನ್ನು ಕೂಡಲೇ ಕೆಲಸದಿಂದ ವಜಾಗೊಳಿಸಬೇಕು. ಇದರ ಹಿಂದೆ ಕಾಣದ ಕೈಗಳಿದ್ದು, ಈ ಕುರಿತು ಸಂಪೂರ್ಣ ತನಿಖೆಯಾಗಬೇಕು. ಈ ಪ್ರಕರಣಕ್ಕೆ ಸಂಬಂಧಪಟ್ಟ ವ್ಯಕ್ತಿಗಳನ್ನಾಗಲೀ ಕೂಡಲೇ ಬಂಧಿಸಬೇಕು. ಕಾನೂನು ಪ್ರಕಾರ ಶಿಸ್ತು ಕ್ರಮವಹಿಸಬೇಕು ಎಂದರು.

ದಸಂಸ ಜಿಲ್ಲಾ ಸಂಘಟನೆ ಸಂಚಾಲಕ ಕಂದಹಳ್ಳಿ ನಾರಾಯಣ ಮಾತನಾಡಿ, ಬಿಜೆಪಿ ಸರ್ಕಾರಉದ್ದೇಶ ಪೂರ್ವಕವಾಗಿಯೇ ಡಾ.ಅಂಬೇಡ್ಕರ್‌ರನ್ನು ಅವಮಾನಿಸಲು, ಸಂವಿಧಾನಕ್ಕೆ ಅಗೌರವ ತೋರಿಸುವ ಕೆಲಸವನ್ನು ನಿರಂತರವಾಗಿ ಮಾಡಿ ಕೊಂಡು ಬಂದಿದೆ. ಒಂದು ಸುತ್ತೋಲೆ ಹೊರಡಿಸಲು ಆಯಾ ಇಲಾಖೆ ಸಚಿವರ ಅನುಮತಿ ಬೇಕು. ಆದರೆಇಲ್ಲಿ ನಿಯಮ ಪಾಲನೆಯಾಗಿಲ್ಲ. ಈ ನಿಟ್ಟಿನಲ್ಲಿ ತಾಲೂಕಿನ ಎಲ್ಲಾ ಪ್ರಗತಿಪರ ಸಂಘಟನೆಗಳು ನ.21 ರಂದು ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿವೆ. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಾಲೂಕು ಕಚೇರಿವರೆಗೆ ಮೆರವಣಿಗೆಯ ಮೂಲಕ ಸಾಗಿ ಮನವಿ ಸಲ್ಲಿಸಲಾಗುವುದು ಎಂದರು.

ಮುಖಂಡರಾದ ಅಂಬೇಡ್ಕರ್‌ ಸೇವಾ ಸಮಿತಿ ಅಧ್ಯಕ್ಷ ಹೊನ್ನೂರು ರೇವಣ್ಣ, ಚಕ್ರವರ್ತಿ, ಲಿಂಗರಾಜು ಆಲ್ಕೆರೆ ಅಗ್ರಹಾರ ಜಯಶಂಕರ್‌, ಗುರುವೆಂಕಟರಾಮು, ನಂಜುಂಡಸ್ವಾಮಿ, ಪುಟ್ಟರಾಜು, ಜೈಗುರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next