Advertisement

ಕಾಬೂಲ್‌ ಟ್ರಕ್‌ ಬಾಂಬ್‌ಗ 80 ಬಲಿ

02:42 AM Jun 01, 2017 | Team Udayavani |

ಕಾಬೂಲ್‌: ಅಫ್ಘಾನಿಸ್ಥಾನ ರಾಜಧಾನಿ ಕಾಬೂಲ್‌ನಲ್ಲಿ ರಕ್ತಪಿಪಾಸು ಉಗ್ರರ ಹೀನ ಕೃತ್ಯವು ಕನಿಷ್ಠ 80 ಮಂದಿಯನ್ನು ಬಲಿತೆಗೆದುಕೊಂಡಿದೆ. ಬುಧವಾರ ಇಲ್ಲಿನ ರಾಜತಾಂತ್ರಿಕ ಪ್ರದೇಶದಲ್ಲಿ ಪ್ರಬಲ ಟ್ರಕ್‌ ಬಾಂಬ್‌ ಸ್ಫೋಟಗೊಂಡ ಪರಿಣಾಮ ಭಾರೀ ಸಾವು ನೋವು ಸಂಭವಿಸಿದ್ದು, ಈ ಘಟನೆಯು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.

Advertisement

ಭಾರತೀಯ ರಾಯಭಾರಿ ಕಚೇರಿ ಸಮೀಪವೇ ಸ್ಫೋಟ ನಡೆದಿದ್ದು, ಅದೃಷ್ಟವಶಾತ್‌ ರಾಯಭಾರ ಕಚೇರಿಯ ಎಲ್ಲ ಸಿಬಂದಿಯೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಮಾಹಿತಿ ನೀಡಿದ್ದಾರೆ. ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಘಟನೆಯನ್ನು ಖಂಡಿಸಿದ್ದು, ಎಲ್ಲ ರೀತಿಯ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ನಾವು ಅಫ್ಘನ್‌ನ ಜತೆಗಿದ್ದೇವೆ ಎಂದಿದ್ದಾರೆ.

ಸ್ಫೋಟದ ತೀವ್ರತೆಗೆ ಹಲವು ಕಟ್ಟಡಗಳಿಗೆ ಹಾನಿಯಾಗಿದೆ, ಇನ್ನಿತರವುಗಳ ಕಿಟಿಕಿ ಗಾಜುಗಳು ಪುಡಿ ಪುಡಿಯಾಗಿವೆ. ಮೃತದೇಹಗಳೆಲ್ಲ ಛಿದ್ರ ಛಿದ್ರವಾಗಿ ರಸ್ತೆಯಲ್ಲಿ ಬಿದ್ದಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. 80 ಮೃತದೇಹಗಳು ಪತ್ತೆಯಾಗಿದ್ದು, 350 ಮಂದಿ ಗಾಯಗೊಂಡಿದ್ದಾರೆ. ಅವಶೇಷಗಳಡಿ ಹಲವರು ಸಿಲುಕಿದ್ದು, ಸಾವಿನ ಸಂಖ್ಯೆ ಏರಿಕೆಯಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೇಗೆ ನಡೆಯಿತು ದಾಳಿ?
ಬೆಳಗ್ಗೆ 8.30ರ ವೇಳೆಗೆ ಭಾರೀ ಸ್ಫೋಟಕಗಳು ತುಂಬಿದ್ದ ದೊಡ್ಡ ಟ್ರಕ್‌ವೊಂದನ್ನು ಚಲಾಯಿಸಿಕೊಂಡು ಬಂದ ಆತ್ಮಾಹುತಿ ಬಾಂಬರ್‌ ಜನ್ಬಾಕ್‌ ಸ್ಕ್ವೇರ್‌ನ ರಾಜತಾಂತ್ರಿಕ ಕಟ್ಟಡಗಳಿರುವ ಪ್ರದೇಶವನ್ನು ಪ್ರವೇಶಿಸುತ್ತಲೇ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ. ಘಟನೆಯಿಂದಾಗಿ 50ಕ್ಕೂ ಅಧಿಕ ವಾಹನಗಳಿಗೆ ಹಾನಿಯಾಗಿದೆೆ. ಇದೇ ವೇಳೆ, ಜಪಾನ್‌, ಫ್ರಾನ್ಸ್‌ ಮತ್ತು ಜರ್ಮನಿಯ ರಾಯಭಾರ ಕಚೇರಿಗಳಿಗೆ ಹೆಚ್ಚಿನ ಹಾನಿ ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next