Advertisement

ಮುಂಬಯಿ: ರೋಲ್ಟಾ ಟೆಕ್ನಾಲಜಿ ಪಾರ್ಕಿನಲ್ಲಿ ಬೆಂಕಿ ಅವಘಢ

10:13 AM Feb 14, 2020 | Hari Prasad |

ಮುಂಬಯಿ: ಇಲ್ಲಿನ ಪೂರ್ವ ಅಂಧೇರಿಯಲ್ಲಿರುವ ರೋಲ್ಟಾ ಕಂಪೆನಿಯ ಕಛೇರಿ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿರುವ ಕುರಿತು ವರದಿಯಾಗಿದೆ. ಸುಮಾರು 12ಕ್ಕೂ ಹೆಚ್ಚಿನ ಅಗ್ನಿಶಾಮಕ ದಳದ ವಾಹನಗಳು ಘಟನಾ ಸ್ಥಳಕ್ಕೆ ಧಾವಿಸಿದ್ದು ಬೆಂಕಿಯನ್ನು ಹತೋಟಿಗೆ ತರುವ ಕೆಲಸದಲ್ಲಿ ನಿರತವಾಗಿವೆ.

Advertisement

ಇಲ್ಲಿ ಕಾಣಿಸಿಕೊಂಡಿರುವ ಬೆಂಕಿ ಲೆವೆಲ್-3 ಸ್ವರೂಪದ್ದಾಗಿದೆ ಎಂದು ತಿಳಿದುಬಂದಿದೆ. ರೋಲ್ಟಾ ಕಂಪೆನಿಯ ಸರ್ವರ್ ಕೋಣೆ ಹಾಗೂ ಎರಡನೇ ಮಹಡಿಯವರೆಗೆ ಬೆಂಕಿ ವ್ಯಾಪಿಸಿದೆ.

ಈ ಅಗ್ನಿ ಅವಘಡ‍ಲ್ಲಿ ಕಟ್ಟಡದ ಒಳಗೆ ಸಿಲುಕಿಕೊಂಡಿರಬಹುದಾಗಿರುವವರಿಗಾಗಿ ಹುಡುಕಾಟ ಮುಂದುವರೆದಿದೆ. 11 ಅಗ್ನಿಶಾಮಕ ದಳದ ವಾಹನಗಳು ಮತ್ತು 9 ಜೆಟ್ ಟ್ಯಾಂಕರ್ ಗಳು ಸೇರಿದಂತೆ ಬೆಂಕಿಯನ್ನು ನಿಯಂತ್ರಿಸಲು ಒಟ್ಟಾರೆ 27 ವಾಹನಗಳು ಘಟನಾ ಸ್ಥಳಕ್ಕೆ ಧಾವಿಸಿರುವ ಕುರಿತಾಗಿ ಮಾಹಿತಿ ಲಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next