Advertisement

ದೆಹಲಿ: ಬಟ್ಟೆ ಶೋರಂನಲ್ಲಿ ಭಾರೀ ಅಗ್ನಿ ಅವಘಡ, ಸ್ಥಳಕ್ಕೆ 30 ಅಗ್ನಿಶಾಮಕದಳ ದೌಡು

05:34 PM Jun 12, 2021 | Team Udayavani |

ನವದೆಹಲಿ: ದೆಹಲಿಯ ಸೆಂಟ್ರಲ್ ಮಾರ್ಕೆಟ್ ನ ಲಜಪತ್ ನಗರ ಪ್ರದೇಶದ ಬಟ್ಟೆ ಶೋರೂಂನಲ್ಲಿ ಬೆಂಕಿ ದುರಂತ ಸಂಭವಿಸಿರುವ ಘಟನೆ ಶನಿವಾರ(ಜೂನ್ 12) ನಡೆದಿದ್ದು, ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಇಲಾಖೆಯ ಒಟ್ಟು 30 ಅಗ್ನಿಶಾಮಕ ದಳ ಆಗಮಿಸಿತ್ತು ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಮಾಸ್ತಿಗುಡಿ ದುರಂತ: ದಿ.ನಟ ಅನಿಲ್-ಉದಯ್ ಕುಟುಂಬಕ್ಕೆ ನೆರವಾದ ನಿರ್ದೇಶಕ ರವಿ ವರ್ಮಾ

ಬೆಳಗ್ಗೆ 10.20ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಪ್ರಾಥಮಿಕ ತನಿಖೆಯ ಪ್ರಕಾರ, ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಲು ಕಾರಣ ಎಂದು ತಿಳಿಸಿದೆ. ಶೋ ರೂಂ ಸಮೀಪ ಅಂಗಡಿಗಳಿದ್ದು, ಬೆಂಕಿ ಹೊತ್ತಿಕೊಂಡ ನಂತರ ಅಂಗಡಿಗಳನ್ನು ಮುಚ್ಚಲಾಯಿತು ಎಂದು ವರದಿ ಹೇಳಿದೆ.

ಬೆಂಕಿ ಅವಘಡದ ಘಟನೆ ಬಗ್ಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟರ್ ನಲ್ಲಿ ಸುದ್ದಿ ಹಂಚಿಕೊಂಡಿದ್ದು, ಅಗ್ನಿಶಾಮಕ ದಳ ಸ್ಥಳಕ್ಕೆ ತಲುಪಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ. ನಾನು ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿದ್ದು, ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ತಿಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next