ಧನ್ ಬಾದ್: ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿ ಇಬ್ಬರು ವೈದ್ಯರು ಸೇರಿ ಕನಿಷ್ಠ ಆರು ಮಂದಿ ಸಾವನ್ನಪ್ಪಿದ ಘಟನೆ ಜಾರ್ಖಂಡ್ ನ ಧನ್ ಬಾದ್ ನಲ್ಲಿ ನಡೆದಿದೆ.
ಧನ್ ಬಾದ್ ನ ಪುರಾನಾ ಬಜಾರ್ ನ ಹಜ್ರಾ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಬೆಂಕಿಯ ಹೊಗೆಯಿಂದ ಉಸಿರುಗಟ್ಟಿ ಸಾವಿಗೆ ಕಾರಣವಾಗಿದೆ ಎಂದು ವರದಿಯಾಗಿದೆ.
ಮೃತರನ್ನು ಡಾ. ವಿಕಾಸ್ ಹಜ್ರಾ ಮತ್ತು ಅವರ ಪತ್ನಿ ಡಾ ಪ್ರೇಮಾ ಹಜ್ರಾ ಮತ್ತು ಆಸ್ಪತ್ರೆಯ ಇತರ ಉದ್ಯೋಗಿಗಳು ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ಇವನಂತಹ ಆಟಗಾರನನ್ನು ನೋಡಿಲ್ಲ..: ಭಾರತೀಯನನ್ನು ಹಾಡಿ ಹೊಗಳಿದ ರಿಕಿ ಪಾಂಟಿಂಗ್
Related Articles
ಶಾರ್ಟ್ ಸರ್ಕ್ಯೂಟ್‌ನಿಂದ ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕ್ರಮೇಣ ಇದು ಮೊದಲನೇ ಮಹಡಿಯನ್ನು ಆವರಿಸಿತು. ಅಲ್ಲಿ ಮಲಗಿದ್ದ ಜನರು ತಮ್ಮನ್ನು ರಕ್ಷಿಸಿಕೊಳ್ಳಲು ಅವಕಾಶವೇ ಸಿಗಲಿಲ್ಲ ಎಂದು ವರದಿ ತಿಳಿಸಿದೆ.
ಬೆಂಕಿಯನ್ನು ನಂದಿಸಲು ಯಾವುದೇ ವ್ಯವಸ್ಥೆಗಳಿಲ್ಲದೆ, ಕೊಠಡಿಯು ಹೊಗೆಯಿಂದ ತುಂಬಿತ್ತು, ಇದರಿಂದಾಗಿ ವೈದ್ಯ ದಂಪತಿಗಳು ಸೇರಿದಂತೆ ಆರು ಜನರು ಉಸಿರುಗಟ್ಟಿ ಸಾವನ್ನಪ್ಪಿದರು.
ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಎರಡು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಆಸ್ಪತ್ರೆಯಲ್ಲಿ ಒಟ್ಟು 9 ಜನರನ್ನು ರಕ್ಷಿಸಿವೆ. ಇವರೆಲ್ಲರನ್ನು ಸಮೀಪದ ಪಾಟಲಿಪುತ್ರ ನರ್ಸಿಂಗ್ ಹೋಂಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.