Advertisement

ಕೊರೊನಾ ಇಲ್ಲದಿದ್ದರೂ ಕೊಡಗಿನಲ್ಲಿ ಮಾಸ್ಕ್ ಗೆ ಭಾರೀ ಬೇಡಿಕೆ

07:37 PM Mar 08, 2020 | Team Udayavani |

ಮಡಿಕೇರಿ: ಮಡಿಕೇರಿ ಮಾ.8: ಕೊಡಗು ಜಿಲ್ಲೆಯಲ್ಲಿ ಕೊರೊನಾ ವೈರಸ್‌ನ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ, ಆದರೂ ಮಾಸ್ಕ್ ಗಳಿಗೆ ಮಾತ್ರ ಭಾರೀ ಬೇಡಿಕೆ ಇದೆ. ಐಎಸ್‌ಐ ಗುಣಮಟ್ಟ ಹೊಂದಿರುವ “”ಎನ್‌.95” ಮಾಸ್ಕ್ ನ ಬೆಲೆ ಇದೀಗ ಮಡಿಕೇರಿಯಲ್ಲಿ 200 ರೂ.ಗೆ ಮತ್ತು ಸಾಮಾನ್ಯ ಮಾಸ್ಕ್ ನ ಬೆಲೆ 3 ರೂ.ಗಳಿಂದ 15 ರೂ.ಗಳಿಗೆ ಏರಿಕೆಯಾಗಿದೆ. ಅದರೊಂದಿಗೆ “”ಸ್ಯಾನಿಟರಿ” ವಸ್ತುಗಳ ಬೆಲೆ ಏರಿಕೆಯೊಂದಿಗೆ ಪೂರೈಕೆಯಲ್ಲಿ ಕೊರತೆಯೂ ಕಂಡು ಬಂದಿದೆ.

Advertisement

ಕೊಡಗು ಜಿಲ್ಲೆಯಲ್ಲಿ ಕೊರೊನಾ ವೈರಸ್‌ನ ಶಂಕಿತ ಪ್ರಕರಣ ಇಂದಿನವರೆಗೂ ಕಂಡು ಬಂದಿಲ್ಲ. ಹೀಗಿದ್ದರೂ ಕೂಡ ರಾಜ್ಯ ಆರೋಗ್ಯ ಇಲಾಖೆಯ ಸ್ಪಷ್ಟ ಸೂಚನೆಯಂತೆ ಮುಂಜಾಗೃತಾ ಕ್ರಮವಾಗಿ ಜಿಲ್ಲಾ ಆರೋಗ್ಯ ಇಲಾಖೆ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ 5 ಹಾಸಿಗೆಗಳ ವಾರ್ಡ್‌ ಒಂದನ್ನು ಶಂಕಿತ ಪ್ರಕರಣದ ಚಿಕಿತ್ಸೆಗಾಗಿ ಮೀಸಲಿಟ್ಟಿದೆ. ಭಿತ್ತಿ ಪತ್ರಗಳು, ಕರ ಪತ್ರಗಳನ್ನು ಜನ ಸಂದಣಿ ಇರುವ ಪ್ರದೇಶಗಳಲ್ಲಿ ಹಂಚಲಾಗುತ್ತಿದೆ. ಕೊಡಗು ಜಿಲ್ಲೆಯ ನೆರೆಯ ಕೇರಳ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ಹಿನ್ನಲೆಯಲ್ಲಿ ಗಡಿ ಗ್ರಾಮಗಳಲ್ಲಿ, ಚೆಕ್‌ಪೋಸ್ಟ್‌ಗಳಲ್ಲಿ ಆರೋಗ್ಯ ಇಲಾಖೆ ವಿಶೇಷ ನಿಗಾ ವ್ಯವಸ್ಥೆ ಮಾಡಿದ್ದು, ಸೋಂಕು ಹರಡದಂತೆ ತಡೆಯುವ ಮಾಹಿತಿಗಳನ್ನು ವ್ಯಾಪಕವಾಗಿ ಪ್ರಚಾರ ಮಾಡುತ್ತಿದೆ.

ಈ ನಡುವೆ ಕೊಡಗು ಜಿಲ್ಲೆಯಲ್ಲಿ ವೈರಸ್‌ ತಡೆಯುವ ಮಾಸ್ಕ್ಗೆ ಭಾರೀ ಬೇಡಿಕೆ ಕಂಡು ಬಂದಿದ್ದು, ಜನರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಗೆ ಮುಂದಾಗುತ್ತಿರುವುದು ಕಂಡು ಬಂದಿದೆ. ಮೆಡಿಕಲ್‌ ಸ್ಟೋರ್‌ಗಳು ಮಾಸ್ಕ್ಗಳಿಗೆ ಬೇಡಿಕೆ ಮುಂದಿಟ್ಟ ಪ್ರಮಾಣದಷ್ಟು ಪೂರೈಕೆಯಾಗುತ್ತಿಲ್ಲ ಎಂದು ಔಷಧಿ ಮಳಿಗೆಗಳ ವರ್ತಕರು ಹೇಳಿದ್ದಾರೆ.

ಐಎಸ್‌ಐ ಗುಣಮಟ್ಟ ಹೊಂದಿರುವ “”ಎನ್‌.95” ಮಾಸ್ಕ್ನ ಬೆಲೆ ಇದೀಗ ಮಡಿಕೇರಿಯಲ್ಲಿ 200 ರೂ.ಗೆ ಏರಿಕೆಯಾಗಿದೆ. ಸಾಮಾನ್ಯ ಮಾಸ್ಕ್ ಬೆಲೆ 3 ರೂ.ಗಳಾಗಿದ್ದು, ಇದರ ಬೆಲೆ ಇದೀಗ 15 ರೂ.ಗಳಿಗೆ ಏರಿಕೆಯಾಗಿದೆ. ಇದು ಮಾಸ್ಕ್ಗಳನ್ನು ಪೂರೈಕೆ ಮಾಡುವ ಸಂಸ್ಥೆಗಳು ಏರಿಕೆ ಮಾಡಿದ ದರವಾಗಿದೆ. ಅದರೊಂದಿಗೆ “”ಸ್ಯಾನಿಟರಿ” ವಸ್ತುಗಳ ಬೆಲೆ ಏರಿಕೆಯೊಂದಿಗೆ ಪೂರೈಕೆಯಲ್ಲಿ ಕೊರತೆಯೂ ಕಂಡು ಬಂದಿದೆ. ಜಿಲ್ಲೆಯಲ್ಲಿ ಕೊರೊನಾ ವೈರಸ್‌ನ ಶಂಕಿತ ಪ್ರಕರಣ ಕೂಡ ಕಂಡು ಬರದಿದ್ದರೂ ಮಾಸ್ಕ್ಗಳಿಗೆ ಭಾರಿ ಬೇಡಿಕೆ ಮತ್ತು ದರವೂ ಏರಿಕೆಯಾಗಿರುವುದು ಅಚ್ಚರಿ ಮೂಡಿಸುತ್ತಿದೆ. ದುಪ್ಪಟ್ಟು ಹಣಕ್ಕೆ ಮಾಸ್ಕ್ ಗಳನ್ನು ಮಾರುವುದಾದರೂ ಹೇಗೆ ಎಂದು ಔಷಧಿ ಮಳಿಗೆಗಳ ವರ್ತಕರು ಅಳಲು ತೋಡಿಕೊಳ್ಳುತ್ತಿದಾರೆ. ಜನರು ಏಕೆ ಕೊರೊನಾ ಸೋಂಕಿನ ಬಗ್ಗೆ ಇಷ್ಟೊಂದು ಭಯಭೀತಿಗೆ ಒಳಗಾಗುತ್ತಿದ್ದಾರೋ ಎಂದು ಮೆಡಿಕಲ್‌ ಸ್ಟೋರ್‌ಗ ವರ್ತಕರು ಪ್ರಶ್ನಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next