Advertisement
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದ.ಕ. ಜಿಲ್ಲಾ ಧರ್ಮಾದಾಯ ದತ್ತಿಗಳ ಇಲಾಖೆ ವತಿಯಿಂದ ರಾಜ್ಯಾದ್ಯಂತ ನಡೆಯಲಿರುವ “ಸಪ್ತಪದಿ’ ಸಾಮೂಹಿಕ ವಿವಾಹದ ಹಿನ್ನೆಲೆಯಲ್ಲಿ ರವಿವಾರ ಮಂಗಳೂರು ಮತ್ತು ಮತ್ತು ಉಡುಪಿಯ ಪುರಭವನದಲ್ಲಿ ನಡೆದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮಾತನಾಡಿ, “ಧಾರ್ಮಿಕ ದತ್ತಿ ಇಲಾಖೆಯಿಂದ ಈಗ ಸಮಾಜಮುಖೀ ಚಟುವಟಿಕೆಗಳು ನಡೆಯುತ್ತಿವೆ. ಡಾ| ವಿ.ಎಸ್. ಆಚಾರ್ಯ ಅವರು ಸಾಮಾನ್ಯ ದೇವಸ್ಥಾನಗಳಿಗೂ ಅನುದಾನ ಕೊಡುವ ನಿಯಮ ತಂದು ಮೊದಲ ಪರಿವರ್ತನೆ ಮಾಡಿದರು. ಶ್ರೀನಿವಾಸ ಪೂಜಾರಿ ಅವರು ದೈವಸ್ಥಾನಗಳಿಗೂ ಅನುದಾನ ದೊರೆಯುವಂತೆ ಮಾಡಿದರಲ್ಲದೇ ಸರಳ ಸಾಮೂಹಿಕ ವಿವಾಹದ ಮೂಲಕ ಮತ್ತೂಂದು ಕ್ರಾಂತಿಕಾರಿ ಪರಿವರ್ತನೆಯಾಗುತ್ತಿದೆ ಎಂದರು.