Advertisement

ಮುಜರಾಯಿ ಇಲಾಖೆಯ ಆಯ್ದ ದೇವಾಲಯಗಳಲ್ಲಿ ಸಾಮೂಹಿಕ ವಿವಾಹ: ಕೋಟ ಶ್ರೀನಿವಾಸ ಪೂಜಾರಿ

12:50 PM Oct 31, 2019 | Team Udayavani |

ಬೆಂಗಳೂರು: ಮುಜರಾಯಿ ಇಲಾಖೆಯ ಆಯ್ದ 90-100 ‘ಎ’ ದರ್ಜೆ ದೇವಾಲಯಗಳಲ್ಲಿ ಏ.26 ಹಾಗೂ ಮೇ 24ರಂದು ಸಾಮೂಹಿಕ ವಿವಾಹ ಆಯೋಜಿಸಲಾಗುವುದು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ವಿಧಾನಸೌಧದಲ್ಲಿ ಮಾತನಾಡಿದ ಅವರು,ಈ  ಬಾರಿ 1000 ವಿವಾಹ ನಡೆಸಲು ಉದ್ದೇಶಿಸಲಾಗಿದೆ. ವಧುವಿಗೆ 40000 ರೂ. ಮೌಲ್ಯದ ತಾಳಿ, ವಧುವಿನ ಧಾರೆ ಸೀರೆಗೆ 10000ರೂ ಹಾಗೂ ವರನಿಗೆ 5000ರೂ. ನಂತೆ ಒಟ್ಟು 55,000 ರೂ. ನೀಡಿ ಸಾಮೂಹಿಕ ವಿವಾಹ ನಡೆಸಲಾಗುವುದು. ಸ್ಥಳದಲ್ಲೇ ವಿವಾಹ ನೋಂದಣಿ ಮಾಡಲಾಗುವುದು ಎಂದು ತಿಳಿಸಿದರು.

ದೇವಾಲಯಗಳಲ್ಲಿ ನಡೆಯುವ ಯಕ್ಷಗಾನ ಮೇಳದಲ್ಲಿ‌ ಪಾಲ್ಗೊಳ್ಳುವ ಕಲಾವಿದರಿಗೆ ವೇತನ ಹೆಚ್ಚಳ ಮಾಡಲು ಎಂ.ಎನ್. ಹೆಗಡೆ ನೇತೃತ್ವ ಸಮಿತಿಯಿಂದ ಮೂರು ತಿಂಗಳಲ್ಲಿ ವರದಿ ಪಡೆದು ವೇತನ‌ ಪರಿಷ್ಕರಿಸಲಾಗುವುದು. ಹರಾಡಿ ರಾಮ ಗಾಣಿಗ ಪ್ರಶಸ್ತಿ ಪ್ರಧಾನಕ್ಕೆ ಮರು ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next