ಮಹಾನಗರ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರ ಘಟನೆ ಬಳಿಕ ಮೊದಲ ಬಾರಿಗೆ ಸಮಾನ ಮನಸ್ಕ ಸಂಘಟನೆಗಳು ಹಾಗೂ ಜಾತ್ಯತೀತ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು ಒಂದಾಗಿ ಗುರುವಾರ ನಗರದ ಪುರಭವನ ಎದುರು ಸಾಮೂಹಿಕ ಧರಣಿ ನಡೆಸಿದರು.
ಮಾಜಿ ಸಚಿವ ರಮಾನಾಥ ರೈ ಅವರು ಸಂವಿಧಾನ ಶಿಲ್ಪಿ ಡಾ| ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು “ನಾನು ದಿನಪೂರ್ತಿ ಧರಣಿಯಲ್ಲಿ ಭಾಗವಹಿಸುತ್ತೇನೆ. ಇಂತಹ ಸಂದರ್ಭದಲ್ಲಿ ಧರಣಿ ಮುಖ್ಯವೇ ಹೊರತು ಬೇರೆ ಯಾವುದೇ ಕಾರ್ಯಕ್ರಮವಲ್ಲ’ ಎಂ ದು ಅವರು ಹೇಳಿದರು.
ಧರಣಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್ ಮತ್ತು ಐವನ್ ಡಿ’ಸೋಜಾ, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ಜೆ.ಆರ್. ಲೋಬೋ, ಖ್ಯಾತ ವೈದ್ಯ ಡಾ| ಶ್ರೀನಿವಾಸ ಕಕ್ಕಿಲಾಯ, ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು, ಜೆಡಿಎಸ್ ಮುಖಂಡರಾದ ಮಹಮ್ಮದ್ ಕುಂಞಿ, ಸುಶೀಲ್ ನೊರೋನ್ಹಾ, ಸಿಪಿಎಂನ ಕೆ.ಆರ್. ಶ್ರೀಯಾನ್, ಸುನಿಲ್ ಕುಮಾರ್ ಬಜಾಲ್, ಸಂತೋಷ್ ಬಜಾಲ್, ವಸಂತ ಆಚಾರಿ, ಡಿವೈಎಫ್ಐ ರಾಜ್ಯ ಅಧ್ಯಕ್ಷ ಮುನಿರ್ ಕಾಟಿಪಳ್ಳ, ಜಿಲ್ಲಾಧ್ಯಕ್ಷ ಬಿ.ಕೆ. ಇಮಿ¤ಯಾಝ್, ಸಂತೋಷ್ ಕುಮಾರ್, ಜಯಂತಿ ಶೆಟ್ಟಿ, ದಲಿತ ನಾಯಕರಾದ ಎಂ. ದೇವದಾಸ್, ರಘು ಎಕ್ಕಾರು, ರೈತ ನಾಯಕ ರವಿ ಕಿರಣ ಪುಣಚ, ವಿವಿಧ ಪಕ್ಷ ಹಾಗೂ ಸಂಘಟನೆಗಳ ನಾಯಕರಾದ ಆಲ್ವಿನ್ ಮಿನೇಜಸ್, ಪ್ರೇಮನಾಥ ಶೆಟ್ಟಿ, ಯು.ಬಿ. ಲೋಕಯ್ಯ, ಬಾಲಕೃಷ್ಣ ಶೆಟ್ಟಿ, ವಿಶ್ವಾಸ್ ಕುಮಾರ್ ದಾಸ್, ಪ್ರವೀಣ್ ಚಂದ್ರ ಆಳ್ವ, ಕರೀಂ, ಕುಕ್ಯಾನ್, ಎ.ಸಿ. ವಿನಯರಾಜ್, ಲತೀಫ್ ಕಂದಕ್, ಭಾಸ್ಕರ್, ಸಂತೋಷ್ ಶೆಟ್ಟಿ, ಅಝೀಝ್ ಕುದ್ರೋಳಿ, ಸಂಶುದ್ದೀನ್, ಅಕ್ಷಿತ್ ಸುವರ್ಣ, ವಾಸುದೇವ ಉಚ್ಚಿಲ್, ಫಾರೂಕ್ ಉಳ್ಳಾಲ್, ಹರಿನಾಥ್, ಶಶಿಧರ ಹೆಗ್ಡೆ, ಪಿ.ವಿ. ಮೋಹನ್, ಅಹ್ಮದ್ ಬಾವಾ, ಸುಮತಿ ಹೆಗ್ಡೆ, ನಝೀರ್ ಉಳ್ಳಾಲ್, ಇಬ್ರಾಹಿಂ ಕೋಡಿಜಾಲ್, ಲ್ಯಾನ್ಸ್‌ಲೊಟ್ ಪಿಂಟೋ, ಸುರೇಶ್ ಬಲ್ಲಾಳ್, ಮಮತಾ ಗಟ್ಟಿ, ಶ್ಯಾಲೆಟ್ ಪಿಂಟೋ, ಕವಿತಾ ಸನಿಲ್, ಎ.ಜೆ. ಸಲೀಂ, ನವೀನ್ ಆರ್. ಡಿ’ಸೋಜಾ, ಸದಾಶಿವ ಶೆಟ್ಟಿ, ಟಿ.ಕೆ. ಸುಧೀರ್, ಯಾದವ ಶೆಟ್ಟಿ, ಟಿ. ಹೊನ್ನಯ್ಯ ಮೊದಲಾದವರು ಭಾಗವಹಿಸಿದ್ದರು.
ಧರಣಿ ಕಾರ್ಯಕ್ರಮ ಆರಂಭಕ್ಕೂ ಮುನ್ನ ಪ್ರತಿಭಟನಾಕಾರರು ಜಿಂದಾಬಾದ್, ರಾಜ್ಯ, ರಾಜ್ಯ ಸರಕಾರದ ಪೊಲೀಸ್ ನೀತಿಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಧರಣಿ ನಿರತರು ಪೊಲೀಸ್ ದೌರ್ಜನ್ಯ ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರದ ಪೌರತ್ವ ತಿದ್ದುಪಡಿ ಧೋರಣೆ ವಿರೋಧಿಸಿ ಫಲಕಗಳನ್ನು ಪ್ರದರ್ಶಿಸಿದರು.
ಸ್ವತಂತ್ರ ತನಿಖೆ ನಡೆಯಲಿ
ಗೋಲಿಬಾರ್ ಘಟನೆ ಕುರಿತು ಸಿಐಡಿ ಅಥವಾ ಮೆಜಿಸ್ಟ್ರೀರಿಯಲ್ ತನಿಖೆಯನ್ನು ನಾವು ಒಪ್ಪುವುದಿಲ್ಲ. ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರಿಂದ ಸ್ವತಂತ್ರ ತನಿಖೆ ನಡೆಯಬೇಕು. ಸಾವನ್ನಪ್ಪಿದವರಿಗೆ ಪರಿಹಾರ ಘೋಷಿಸಿ ಬಳಿಕ ನಿರ್ಧಾರ ಬದಲಿಸಿರುವ ಕ್ರಮ ಸರಿಯಲ್ಲ. ಬಂಧಿತರ ಪೈಕಿ ಕೆಲವು ಮಂದಿ ಅಮಾಯಕರಾಗಿದ್ದು, ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ನಡೆದ ಧರಣಿಯಲ್ಲಿ ಕಾಂಗ್ರೆಸ್, ಜೆಡಿಎಸ್, ಸಿಪಿಎಂ, ಸಿಪಿಐ, ರೈತ ಸಂಘ ಹಸಿರು ಸೇನೆ, ದಲಿತ ಸಂಘರ್ಷ ಸಮಿತಿ ಸಹಿತ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.