Advertisement

ಬನಹಟ್ಟಿ ಈದ್ಗಾ ಮೈದಾನದಲ್ಲಿ ಮಳೆಗಾಗಿ ಮುಸ್ಲಿಮರಿಂದ ಸಾಮೂಹಿಕ ಪ್ರಾರ್ಥನೆ

09:09 PM Jun 25, 2023 | Team Udayavani |

ರಬಕವಿ-ಬನಹಟ್ಟಿ: ಬನಹಟ್ಟಿಯ ಮದರಸಾ ಈದ್ಗಾ ಮೈದಾನದಲ್ಲಿ ಮಳೆಗಾಗಿ ಸಾವಿರಾರು ಮುಸ್ಲಿಂ ಬಾಂಧವರು ಭಾನುವಾರ ಸಾಮೂಹಿಕವಾಗಿ ಪ್ರಾರ್ಥನೆಯನ್ನು ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಧರ್ಮ ಗುರುಗಳಾದ ಮೌಲಾನ ಆಸಿಫ್ ಕುರಾನ್ ಪಠಣ ಮಾಡಿದರು ಮತ್ತು ಮೌಲಾನ ತುಫೇಲ ರವರು ದುವಾವನ್ನು ಭೋದಿಸಿದರು.

ಈ ಸಂದರ್ಭದಲ್ಲಿ ಊರಿನ ಮುಖಂಡರು ಹಾರುನರಶಿದ ಸಾಂಗ್ಲಿಕರ, ಅಯುಬ್ ಅತ್ತಾರ, ರಿಯಾಜ್ ಅತ್ತಾರ, ಲಾಲಸಾಬ ಅತ್ತಾರ, ಮೌಲಾನ ರಿಯಾಜ್, ಮಲಿಕ್ ಮುಜಾವರ್, ಸುಲತ್ತಾನ ಆಲಮೇಲ, ಬಂದು ಡಾಂಗೆ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next