Advertisement

ಮಸೀದಿಗಳಲ್ಲಿ ಸಾಮೂಹಿಕ ನಮಾಜ್‌ ಶುರು

03:41 PM Jun 10, 2020 | Suhan S |

ಭಟ್ಕಳ: ತಾಲೂಕಿನಲ್ಲಿ ಮಸೀದಿಗಳಲ್ಲಿ ನಮಾಜ್‌ ಆರಂಭವಾಗಿದ್ದು ಮುಸ್ಲಿಂಮರು ಮಸೀದಿಗೆ ತೆರಳಿ ಮಾಸ್ಕ್ ಧರಿಸುವುದರ ಜತೆಗೆ ಅಂತರ ಕಾಯ್ದುಕೊಂಡು ನಮಾಜ್‌ ಮಾಡಿದರು.

Advertisement

ಮಸೀದಿಯಲ್ಲಿ ಪ್ರವೇಶಿಸುವ ಪೂರ್ವ ದ್ವಾರದಲ್ಲಿ ನೀರು ಮತ್ತು ಸೋಪ್‌ನ್ನು ಇಡಲಾಗಿದ್ದು ಜನರು ಕೈ ತೊಳೆದುಕೊಂಡು ಮಸೀದಿ ಪ್ರವೇಶಿಸಿದರು. ಕೆಲ ಮಸೀದಿಗಳಲ್ಲಿ ಥರ್ಮಲ್‌ ಸ್ಕ್ಯಾನಿಂಗ್‌ ಕೂಡ ಮಾಡಲಾಯಿತು. ಈ ಕುರಿತಂತೆ ಸುದ್ದಿಗಾರರ ಜತೆ ಮಾತನಾಡಿದ ಖಲಿಫಾ ಜಾಮಿಯಾ ಮಸೀದಿ ಇಮಾಮ್‌ ಮತ್ತು ಖತೀಬ್‌ ಮೌಲಾನ ಕ್ವಾಜಾ ಮೊಹಿನುದ್ದೀನ್‌ ನದ್ವಿ ಮದನಿ ಮಸೀದಿಗಳು ಪುನರ್‌ ಆರಂಭಗೊಂಡಿದ್ದಕ್ಕೆ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸಿದರು. ಮುಸ್ಲಿಂಮರು ತಮ್ಮ ಮನೆಗಳಿಂದ ಬೇಕಾದರೆ ದೂರ ಇರಬಹುದು, ಆದರೆ ಮಸೀದಿಗಳಿಂದ ದೂರ ಇರಲು ಸಾಧ್ಯವಿಲ್ಲ ಎಂದರು.

ಅಹ್ಮದ್‌ ಸಯೀದ್‌ ಜಾಮಿಯಾ ಮಸೀದಿಯ ಇಮಾಮ್‌ ಮತ್ತು ಖತೀಬ್‌ ಮೌಲಾನ ಮುಹಮ್ಮದ್‌ ಜಾಫರ್‌ ಫಕ್ಕಿಭಾವ್‌ ಮಾತನಾಡಿ ಲಾಕೌಡೌನ್‌ ಸಂದರ್ಭ ಮುಸ್ಲಿಮರು ತಪ್ಪದೆ ತಮ್ಮ ತಮ್ಮ ಮನೆಗಳಲ್ಲಿ ಐದು ಹೊತ್ತಿನ ನಮಾಜ್‌ ನಿರ್ವಹಿಸಿದರು. ಈಗ ಮಸೀದಿಗಳು ಆರಂಭಗೊಂಡಿವೆ. ಮಸೀದಿಗಳು ಮುಸ್ಲಿಂಮರಿಗೆ ಅತ್ಯಂತ ಪವಿತ್ರ ಸ್ಥಳಗಳಾಗಿವೆ. ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಕೇಂದ್ರವೂ ಆಗಿವೆ ಎಂದು ಹೇಳಿದರು.

ತಂಝೀಮ್‌ ಸಂಸ್ಥೆ ಅಧ್ಯಕ್ಷ ಎಸ್‌.ಎಂ. ಪರ್ವೇಝ್ ಭಟ್ಕಳದ ಎಲ್ಲ ಮಸೀದಿಗಳಲ್ಲಿ ಸರಕಾರದ ಮಾರ್ಗದರ್ಶಿ ನಿಯಮಗಳನ್ನು ಪಾಲಿಸುವಂತೆ ಆಡಳಿತ ಮಂಡಳಿಗೆ ನಿರ್ದೇಶನ ನೀಡಲಾಗಿದ್ದು ಎಲ್ಲ ಮಸೀದಿಗಳಲ್ಲಿ ದೈಹಿಕ ಅಂತರ ಕಾಪಾಡುತ್ತ ವೃದ್ಧರು ಹಾಗೂ ಮಕ್ಕಳನ್ನು ಮಸೀದಿಗಳಿಗೆ ಕಳುಹಿಸದಂತೆ ತಿಳಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next