Advertisement

ಸಾಮೂಹಿಕ ವಿವಾಹ ಬಡವರಿಗೆ ವರ

05:25 PM Mar 23, 2018 | |

ಸಿರವಾರ: ಸಮಾಜದಲ್ಲಿ ಇತ್ತೀಚೆಗೆ ಮಠಮಾನ್ಯಗಳು, ಸಂಘ-ಸಂಸ್ಥೆಗಳಿಂದ ಸಾಮೂಹಿಕ ವಿವಾಹ ಆಯೋಜನೆ ಹೆಚ್ಚುತ್ತಿದ್ದು, ಇದು ಉತ್ತಮ ಕೆಲಸವಾಗಿದೆ. ಆರ್‌.ಕೆ. ಕಮಲಮ್ಮ ಬಸಣ್ಣ ಕುಟುಂಬ ಸಾಮೂಹಿಕ ವಿವಾಹ ಆಯೋಜಿಸಿ ಸಮಾಜ ಸೇವೆ ಮಾಡಿದ್ದು ಶ್ರೇಷ್ಠ ಕಾರ್ಯ ಎಂದು ನವಲಕಲ್ಲು ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ಆರ್‌.ಕೆ. ಕಮಲ್ಲಮ್ಮ ಬಸಣ್ಣ ಕುಟುಂಬದ ವತಿಯಿಂದ ವೆಂಕಟೇಶ್ವರ ದೇವಸ್ಥಾನದಲ್ಲಿ ಗುರುವಾರ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಸಾಮೂಹಿಕ ವಿವಾಹಗಳು ಬಡ ಕುಟುಂಬಗಳಿಗೆ ವರವಾಗಿವೆ.. ಬಡವರು ಸಾಲದ ಹೊರೆಯಿಂದ ಪಾರಾಗುವಂತಾಗಿದೆ. ಮಹಾತ್ಮರ ಆಶೀರ್ವಾದದಿಂದ ಸಾಮೂಹಿಕ ವಿವಾಹದಲ್ಲಿ ಮದುವೆಯಾದ ಅನೇಕ ಜೋಡಿಗಳು ಸುಖ ಸಂಸಾರ ನಡೆಸುತ್ತಿವೆ ಎಂದರು.

ಮಾನ್ವಿ ಕಲ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಠ ಮಾನ್ಯಗಳಂತೆ ಆರ್‌.ಕೆ.ಕಮಲಮ್ಮ ಬಸಣ್ಣ ಕುಟುಂಬ ಕಳೆದ ಮೂರು ವರ್ಷಗಳಿಂದ ಸಾಮೂಹಿಕ ವಿವಾಹ ನಡೆಸುತ್ತಿರುವುದು ಶ್ಲಾಘನೀಯ ಎಂದ ಅವರು, ನವದಂಪತಿಗಳು ಅನ್ಯೋನ್ಯದಿಂದ ಸುಖ ಸಂಸಾರ ನಡೆಸಬೇಕು ಎಂದು ಸಲಹೆ ನೀಡಿದರು. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 26 ಜೋಡಿ ನವಜೀವನಕ್ಕೆ ಕಾಲಿಟ್ಟರು. ನೀಲಗಲ್ಲು ಬೃಹನ್ಮಠದ ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ, ಗಬ್ಬೂರಿನ ಬೂದಿ ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ, ಆರ್‌.ಕೆ. ಕಮಲ್ಲಮ್ಮ, ಆರ್‌.ಕೆ. ಅಮರೇಶ ಸಾಹುಕಾರ, ಎನ್‌. ಗಿರಿಜಾಶಂಕರ, ಅರ್‌.ಕೆ. ಚನ್ನಬಸವ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next