Advertisement
ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬುಧವಾರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ನೆರವೇರಿದ 50ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಅವರು ಶುಭ ಹಾರೈಸಿದರು.
Related Articles
ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಆಶೀರ್ವದಿಸಿ, ಹಿಂದೆ ವಿವಾಹದ ದುಂದುವೆಚ್ಚದಿಂದ ಸಾಲ ಮಾಡಿ ಜೀತಕ್ಕೆ ತುತ್ತಾಗುತ್ತಿದ್ದರು. ಅಂದು ಸರಕಾರ ಜೀತಮುಕ್ತರನ್ನಾಗಿ ಮಾಡಿತ್ತು. ಹಾಗಾಗಿ ಸಾಮೂಹಿಕ ವಿವಾಹ ಸರಳ ಜೀವನಕ್ಕೆ ನಾಂದಿಯಾಗಬೇಕು. ಮದುವೆಯ ಹೆಸರಿನಲ್ಲಿ ದುಂದು ವೆಚ್ಚ ಸಲ್ಲ. ಅದಕ್ಕಾಗಿ ಸಾಮೂಹಿಕ ವಿವಾಹ ಯೋಜನೆಯನ್ನು ಧರ್ಮಸ್ಥಳದಲ್ಲಿ ಆರಂಭಿಸಲಾಯಿತು ಎಂದರು. 50ನೇ ವರ್ಷದ ಈ ಕಾರ್ಯ ಕ್ರಮದಲ್ಲಿ 24 ತಾಲೂಕಿನ 53 ಜಾತಿಯವರು ಇದ್ದು, 60 ಜೊತೆ ಅಂತರ್ಜಾತೀಯ ವಿವಾಹವಾಗಿದ್ದಾರೆ ಎಂದು ಉಲ್ಲೇಖೀಸಿ ಮೆಚ್ಚುಗೆ ವ್ಯಕ್ತಪಡಿಸಿದರು.
Advertisement
ಬೆಂಗಳೂರಿನ ಶಾಸಕರು ಹಾಗೂ ಒಕ್ಕಲಿಗ ಗೌಡರ ಸಂಘದ ರಾಜ್ಯಾಧ್ಯಕ್ಷ ಕೃಷ್ಣಪ್ಪ, ಶಾಸಕ ಹರೀಶ್ ಪೂಂಜ, ಡಾ| ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ಹಷೇìಂದ್ರ ಕುಮಾರ್ ಮತ್ತು ಸುಪ್ರಿಯಾ ಹಷೇìಂದ್ರ ಕುಮಾರ್ ಉಪಸ್ಥಿತರಿದ್ದರು.
ಡಿ. ಹರ್ಷೇಂದ್ ಕುಮಾರ್ ಸ್ವಾಗತಿಸಿ ದರು. ಗಣೇಶ್ ಕಾಮತ್ ವಂದಿಸಿದರು. ಬಾರಕೂರಿನ ದಾಮೋದರ ಶರ್ಮಾ ಕಾರ್ಯಕ್ರಮ ನಿರ್ವಹಿಸಿದರು.
ಮನೆಬಾಗಿಲಿಗೆ ಸರಕಾರದ ಸೇವೆರಾಜ್ಯ ಸರಕಾರ ಜನಪರ ಯೋಜನೆಯಡಿ ಗ್ರಾಮವಾಸ್ತವ್ಯ ನಡೆಸಿ ಮನೆಬಾಗಿಲಿಗೆ ಸೇವೆ ಒದಗಿಸುತ್ತಿದೆ. ಮುಂದಿನ 15 ದಿನಗಳಲ್ಲಿ ವೃದ್ಧಾಪ್ಯ ವೇತನವನ್ನು ದೂರವಾಣಿ ಮೂಲಕ ಆಧಾರ್ ಮಾಹಿತಿ ನೀಡಿದರೆ 72 ತಾಸಿನಲ್ಲಿ ಮನೆಬಾಗಿಲಿಗೆ ತಲುಪಿಸುವ ಕಾರ್ಯವಾಗಲಿದೆ. ಪಡಿತರ ಸೇರಿದಂತೆ ಎಲ್ಲ ಸೇವೆ ಮನೆಬಾಗಿಲಿಗೆ ನೀಡುವ ಕಾರ್ಯಕ್ಕೆ ಸದ್ಯದಲ್ಲೇ ಚಾಲನೆ ದೊರೆಯಲಿದೆ ಎಂದು ಸಚಿವ ಅಶೋಕ್ ತಿಳಿಸಿದರು.