Advertisement
ಅದೇ ಕಾರಣದಿಂದ ಸಿನಿಮಾಗಳ ನಿರ್ದೇಶಕರುಗಳು ಕೂಡಾ ಮೊದಲು ಮಾಸ್ ಆಡಿಯನ್ಸ್‌ನ ತೃಪ್ತಿಪಡಿಸುತ್ತಾರೆ. ಏಕೆಂದರೆ ಸಿನಿಮಾವನ್ನು ಮೊದಲು ಕೈ ಹಿಡಿಯೋರು ಅವರೇ. ಸಿನಿಮಾ ರಿಲೀಸ್‌ಗೆ ಕಾದು ಫಸ್ಟ್ ಡೇ ಫಸ್ಟ್ ಶೋ ನೋಡೋರು, ಹೀರೋಗೆ ಜೈಕಾರ ಹಾಕೋರು, ಕಟೌಟ್‌ಗೆ ಹಾಲಿನಾಭಿಷೇಕ ಮಾಡುವ ಮನಸ್ಸು ಮಾಸ್ ಸಿನಿಮಾ ಪ್ರಿಯರದ್ದು. ಹಾಗಾಗಿ, ಸಿನಿಮಾಗಳ ಟ್ರೇಲರ್, ಟೀಸರ್‌ನಲ್ಲಿ ಮಾಸ್ ಡೈಲಾಗ್‌ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ನಾಲ್ಕು ಸಿನಿಮಾಗಳು ತಮ್ಮ ಮಾಸ್ ಡೈಲಾಗ್ ಮೂಲಕ ಮಾಸ್ ಆಡಿಯನ್ಸ್‌ಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದೆ.
Related Articles
Advertisement
ಪೊಗರು
*ಅಡ್ರೆಸ್ ತಿಳ್ಕೊಂಡು ಸರ್ವಿಸ್ ಮಾಡೋಕೆ ಕೊರಿಯರ್ ಹುಡುಗ ಅಂದ್ಕೊಂಡೇನೋ…. ಫೈಟರ್… ಹೊಡೆದ್ರೆ ಯಾವನೂ ಅಡ್ರೆಸ್‌ಗೆ ಇರಲ್ಲ.. ಹೋಗಿ ಅವನಿಗೆ ನನ್ನ ಅಡ್ರೆಸ್ ಹೇಳು, ಅವನು ಮಾಡ್ತಿರೋದನ್ನೆಲ್ಲಾ ನೋಡಿ ಸುಮ್ನೆ ಕೂರೋದಕ್ಕೆ ಆ ಶಿವನ ಮುಂದೆ ಕೂತಿರೋ ನಂದಿ ಅಲ್ಲ… ಆ ದುರ್ಗಿನಾ ಹೊತ್ಕೊಂಡು ತಿರುಗಾಡೋ ಸಿಂಹ ನಾನು ಅಂತ ಹೇಳು… ಅವನಿಗಿರೋ ಪವರ್‌ನೆಲ್ಲಾ ಯೂಸ್ ಮಾಡ್ಲಿ, ಅವನಿಗಿರೋ ಜನರನ್ನೆಲ್ಲಾ ಯೂಸ್ ಮಾಡ್ಲಿ, ಅವನಿಗೇನಾದ್ರು ಧಮ್ ಅನ್ನೋದು ಇದ್ರೆ ಅದನ್ನೂ ಯೂಸ್ ಮಾಡಿದ್ರು ಸರಿ… ಐಯಾಮ್ ರೆಡಿ ಟು ಫೇಸ್
* ಒಬ್ನೇ ಬರ್ತೀನಿ..ಏನಾಯ್ತು ಅಂತ ನೋಡಿ ತಲೆಗೆ ಹತ್ತೋಷ್ಟರಲ್ಲಿ ಎಲ್ಲಾ ಮುಗಿಸಿ ಹೋಗ್ತಾ ಇರ್ತೀನಿ… ಮಕ್ಳ, ಸಿಂಪಲ್ಲಾಗಿ ಮೂರ್ ಹೊಡೆದಿದ್ದಕ್ಕೇನೇ ಸೀರಿಯಸ್ ಆಗಿದ್ದೀರಾ.. ಇನ್ನು ಸೀರಿಯಸ್ ಆಗಿ ಹೊಡೆದ್ರೆ ಸೀದಾ ಸುಡುಗಾಡೇ
* ತೋಳ್ ತುಂಬಾ ತಾಕತ್ ಇದ್ರು ತಕರಾರು ಮಾಡಲ್ಲ.. ಎದೆ ತುಂಬಾ ನಿಯತ್ತು ಇದ್ರು ಗುಲಾಮ ಆಗಿರಲ್ಲ.. ಗೂಳಿ ಸೈಲೆಂಟ್ ಆಗಿದೆ ಅಂತ ಗಾಂಚಾಲಿ ಮಾಡೋಕೆ ಬಂದ್ರೆ ಗುಧ್ದೋ ಏಟಿಗೆ ಗೂಗಲ್‌ನಲ್ಲಿ ಹುಡುಕಿದ್ರು ಟ್ರೀಟ್‌ಮೆಂಟ್ ಸಿಗಲ್ಲ… ಐಯಾಮ್ ನಟೋರಿಯಸ್
ರಾಬರ್ಟ್
*ನನ್ನನ್ನು ಸಂಹಾರ ಮಾಡ್ತೀನಿ ಅಂತ ಬರೋನು ನನಿಗಿಂತ ದೊಡ್ಡ ಕ್ರಿಮಿನಲ್ ಆಗಿರ್ಬೇಕು, ನನಿಗಿಂತ ಟೆರರ್ ಆಗಿರ್ಬೇಕು, ನನಿಗಿಂತ ವೈಲೆಂಟ್ ಆಗಿರ್ಬೇಕು…ಆ ತರಹದೋನು ಈ ಭೂಮಿ ಮೇಲೆ ಇದ್ದಾನಾ
* ನಾವು ನೋಡೋಕ್ ಮಾತ್ರ ಕ್ಲಾಸು.. ವಾರ್‌ಗೆ ಇಳಿದ್ರೆ ಫುಲ್ ಮಾಸ್,
*ಏ ತುಕಾಲಿ, ನೀನು ಮಾಸ್ ಆದ್ರೆ ನಾನು ಆ ಮಾಸ್‌ಗೆ ಬಾಸ್..
* ಸಾಮಾನ್ಯವಾಗಿ ಮನುಷ್ಯ ನಡುಗೋದು 2 ಬಾರಿ ಮಾತ್ರ… ಒಂದು ಅತಿಯಾದ ಚಳಿ ಆದಾಗ, ಇನ್ನೊಂದು ಅತಿಯಾದ ಭಯ ಆದಾಗ
* ಈ ಕೈಗೆ ಶಬರಿ ಮುಂದೆ ಸೋಲೋದೂ ಗೊತ್ತು, ರಾವಣನ ಮುಂದೆ ಗೆಲ್ಲೋದು ಗೊತ್ತು..!
ಇದನ್ನೂ ಓದಿ: ಯಾರಿಗುಂಟು ಯಾರಿಗಿಲ್ಲ…ಕೋವಿಡ್ ಫಾಸಿಟಿವ್ ಬಂದವರಿಗೆ ಈ ರೆಸಾರ್ಟ್ ಲ್ಲಿ ಉಚಿತ ರೂಂ
ಯುವರತ್ನ
*ಈ ದುನಿಯಾದಲ್ಲಿ ಮೂರು ತರಹ ಗಂಡಸ್ರು ಇರ್ತಾರೆ. ರೂಲ್‌ನ ಫಾಲೋ ಮಾಡೋರು, ರೂಲ್‌ನ ಬ್ರೇಕ್ ಮಾಡೋರು, ಮೂರನೇಯವರು ನನ್ನ ತರಹ… ರೂಲ್ ಮಾಡೋರು
*ಗಂಡಸ್ತನ, ಛರ್ಬಿ, ಮೀಟರ್, ಮಾರ್ಕೇಟ್ ಇವೆಲ್ಲ ಇರೋನೊಬ್ಬ ಬೇಕು? ಸಿಗ್ತಾನಾ
* ಸೀಟ್ಗಾಗಿ ಹೊಡೆದಾಡೋನು ಡಾನ್, ಅದರ ಮೇಲೆ ಕುಳಿತುಕೊಳ್ಳೋನು..
* ಬ್ಯಾಟು-ಬಾಲ್ ಇದೆ ಅಂಥ ಫೀಲ್ಡಿಗೆ ಇಳಿದೋನಲ್ಲ ನಾನು, ಹೊಡಿತೀವಿ ಅಂತ ಕಾನ್ಫಿಡೆನ್ಸ್ ಇರೋದ್ರಿಂದಲೇ ಫೀಲ್ಡಿಗೆ ಇಳಿತಿರೋದು…
ಸಲಗ
* ವರ್ಲ್ಡ್ ಯಾವುದೇ ಕಲರ್‌ನಲ್ಲಿದ್ರೂ ಈ ಅಂಡರ್‌ವರ್ಲ್ಡ್ ಮಾತ್ರ ಕೆಂಪು ಕಲರ್‌ನಲ್ಲೇ ಇರಬೇಕು..
* ನಾನು ಹೊಡಿಬೇಕು ಅಂತ ಡಿಸೈಡ್ ಮಾಡಿದ್ರೆ ಸೈನ್ಯ ಎಷ್ಟೇ ದೊಡ್ಡದಾಗಿರ್ಲಿ ನುಗ್ಗಿ ಒಬ್ನೇ ಹೊಡಿತೀನಿ…
ರವಿ ಪ್ರಕಾಶ್ ರೈ