Advertisement

ಬಡ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ

02:14 PM Oct 24, 2021 | Team Udayavani |

ಗೌರಿಬಿದನೂರು: ಗ್ರಾಮೀಣ ಬಡ ಗರ್ಭಿಣಿಯರಿಗೆ ಜಯ ಕರ್ನಾಟಕ ಸಂಘಟನೆಯಿಂದ ಸಾಮೂಹಿಕ ಸೀಮಂತ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘ ನೀಯ ಎಂದು ಪಿಎಸ್‌ಐ ಚಂದ್ರಕಲಾ ತಿಳಿಸಿದರು. ತಾಲೂಕಿನ ಹುದೂತಿ ಗ್ರಾಮದಲ್ಲಿ ಜಯ ಕರ್ನಾಟಕ ತಾಲೂಕು ಘಟಕದಿಂದ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ, ಒಬ್ಬಟ್ಟಿನ ಊಟ, ಪೌಷ್ಟಿಕಾಂಶವುಳ್ಳ ಹಣ್ಣು ಹಂಪಲು ವಿತರಿಸುವ ಕಾರ್ಯಕ್ರಮ ಅರ್ಥಪೂರ್ಣ.

Advertisement

 ಇದರಿಂದ ಬಡ ಹೆಣ್ಣು ಮಕ್ಕಳಿಗೆ ಹುಟ್ಟುವ ಮಕ್ಕಳು ಆರೋಗ್ಯಪೂರ್ಣವಾಗಿ ಇರುತ್ತವೆ ಎಂದು ವಿವರಿಸಿದರು. ಪ್ರಾಥಮಿಕ ಹಿರಿಯ ಆರೋಗ್ಯ ಸುರûಾಧಿಕಾರಿ ರತ್ನಮ್ಮ ಮಾತನಾಡಿ, ಗರ್ಭಿಣಿಯರು ಸಾಧ್ಯವಾದಷ್ಟೂ ಸತ್ವಪೂರ್ಣ, ಬಿಸಿ ಆಹಾರವನ್ನೇ ಸೇವಿಸಬೇಕು. ಇದರಿಂದಾಗಿ ಮಗುವಿಗೆ ಬೇಕಾದ ಪೌಷ್ಟಿಕಾಂಶಗಳು ಸುಲಭವಾಗಿ ದೊರೆಯಲಿದೆ. ಅದಕ್ಕಾಗಿ ಆರಂಭದಿಂದ ಮಗುವಿನ ಬೆಳವಣಿಗೆಯು ಪ್ರತಿ ಹಂತದಲ್ಲೂ ಗರ್ಭಿಣಿಯರ ಚಲನ ವಲನಗಳ ಬಗ್ಗೆ ಜಾಗೃತಿ ವಹಿಸಬೇಕು ಎಂದು ವಿವರಿಸಿದರು.

ಇದನ್ನೂ ಓದಿ:- ಅನ್ಯಭಾಷೆ ನಾಮಫಲಕ ತೆರವುಗೊಳಿಸದಿದ್ರೆ ಹೋರಾಟ: ರಾಮೇಗೌಡ

ಪೋಷಕರಿಗೆ ಜನಿಸುವ ಪ್ರತಿ ಮಗುವಿಗೆ ಉತ್ತಮ ಸಂಸ್ಕಾರ ನೀಡಬೇಕು. ಇದರಿಂದಾಗಿ ಕೌಟುಂಬಿಕವಾಗಿ ಅಲ್ಲದೇ, ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು. ನಗರಸಭೆ ಸದಸ್ಯೆ ರಂಗಮ್ಮ ಲಕ್ಷ್ಮೀಪತಿ, ಗರ್ಭಿಣಿಯರು ತಮ್ಮ ಅಗತ್ಯಗಳಿಗಾಗಿ, ವೈದ್ಯರನ್ನು ಸಂಪರ್ಕಿಸಬೇಕು. ಅಲ್ಲದೇ, ಕಾಲಕಾಲಕ್ಕೆ ವೈದ್ಯರು ಸೂಚಿಸುವ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಿ ಆರೋಗ್ಯವಂತರಾಗಿ ಇರಲು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಪ್ರದೀಪ್‌, ತಾಲೂಕು ಸಂಘಟನೆ ಸಲಹೆಗಾರ ಲೋಕೇಶ್‌, ತಾಲೂಕು ಅಧ್ಯಕ್ಷ ಅರುಣ್‌, ಉಪಾಧ್ಯಕ್ಷ ಮುರಳಿ, ಮಹದೇವ್‌, ಅರುಣ್‌, ದೇವು, ಸುನೀಲ್‌, ಪಾರಿಜಾತಾ ಇತರರು ಭಾಗಿಯಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next