ದೊಡ್ಡಬಳ್ಳಾಪುರ : ಗ್ರಾಮೀಣ ಮಟ್ಟದಲ್ಲಿನ ಭ್ರಷ್ಟಾಚಾರ ಮಟ್ಟ ಹಾಕಲು ಮುಂದಿನ ಹಂತವಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಸಂಪರ್ಕ ಸಭೆ ಆಯೋಜಿಸಲಾಗುವುದು ಎಂದು ಭ್ರಷ್ಟಾಚಾರ ನಿಗ್ರಹ ದಳದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ತಿಳಿಸಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿಬೆಂಗಳೂರು ಗ್ರಾಮಾಂತರ ಜಿಲ್ಲೆ ಭ್ರಷ್ಟಾಚಾರ ನಿಗ್ರಹ ದಳದಿಂದ ಆಯೋಜಿಸಲಾಗಿದ್ದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು. ಲೋಕಾಯುಕ್ತದಂತೆಯೇ ಭ್ರಷ್ಟಾಚಾರ ನಿಗ್ರಹ ದಳದಿಂದಲೂ ಸಹ ಲಂಚಕೋರರ ಮಟ್ಟಹಾಕುವಲ್ಲಿ ಕಾರ್ಯನಿರವಾಗಿದೆ.
ಇಂದಿಗೂ ಜನರಲ್ಲಿ ಲೋಕಾಯುಕ್ತ ಇಲಾಖೆ ಬಗ್ಗೆ ಹೆಚ್ಚು ಜನಪ್ರಸಿದ್ಧಿ ಪಡೆದಿದ್ದು,ಅದರ ಬದಲಾಗಿ ಭ್ರಷ್ಟಾಚಾರ ನಿಗ್ರಹ ದಳದ ಕಾರ್ಯ ಚಟುವಟಿಕೆ ಕುರಿತು ಅರಿವು ಮೂಡಿಸಲಾಗುತ್ತಿದೆ.ಸಾರ್ವಜನಿಕರು ಭ್ರಷ್ಟಾಚಾರನಿಗ್ರಹ ದಳದ ಕಾಯ್ದೆಗೆ ಒಳಪಡುವ ದೂರುಗಳನ್ನು ಮಾತ್ರ ನೀಡಬೇಕಿದೆ ಹಾಗೂ ಸಲಹೆ ಸೂಚನೆ ಇಲಾಖೆಯ ಬಾಗಿಲು ಸದಾ ತೆರೆದಿರುತ್ತದೆ.
ಕೆಲವೆ ತಿಂಗಳ ಹಿಂದಷ್ಟೆ ಜಿಲ್ಲಾ ಆರೋಗ್ಯಾಧಿಕಾರಿ,ನಗರದ ತಾಲೂಕು ಕಚೇರಿಯಲ್ಲಿನ ಸಿಬ್ಬಂದಿ ಸೇರಿದಂತೆ ಹಿರಿಯ ಅಥವಾ ಕಿರಿಯ ಯಾರೇ ಅಧಿಕಾರಿಯಾಗಲಿ ಲಂಚ ಪಡೆಯುವ ಕುರಿತು ಸಾರ್ವಜನಿಕರು ದೂರು ನೀಡಿದರೆ ಕ್ರಮಕೈಗೊಳ್ಳಲಾಗುವುದು.ಹಾಗೆಂದು ದೂರು ಬಂದಾಕ್ಷಣ ಅಧಿಕಾರಿಗಳ ಮೇಲೆ ಕೈಗೊಳ್ಳುವುದಿಲ್ಲ,ಇಲಾಖೆ ಸಹ ತನಿಖೆ ನಡೆಸುತ್ತದೆ ಹಾಗೂ ಲಂಚ ಪಡೆಯದ ನಿಷ್ಟಾವಂತ ಅಧಿಕಾರಿಗಳನ್ನುರಕ್ಷಿಸುವ ಕೆಲವನ್ನು ಮಾಡುತ್ತದೆ.ಹೀಗಾಗಿ ತಪ್ಪು ಮಾಡದ ಅಕಾರಿಗಳು ಹೆದರಬೇಕಿಲ್ಲ ಆದರೆ ಸಾರ್ವಜನಿಕರಿಂದ ಲಂಚ ಪಡೆಯುವುದು,ವಿಳಂಭ ಮಾಡುವುದು,ಅಕ್ರಮ ಸಂಪಾದನೆಯ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದರು.
ಈ ವೇಳೆ ನಗರದ ಸರ್ಕಾರಿ ತೆಲುಗು ಶಾಲೆಯ ಆವರಣದಲ್ಲಿ ಅಕ್ರಮವಾಗಿ ಕಲ್ಯಾಣ ಮಂಟಪ ನಿರ್ಮಾಣದ ಕುರಿತು ಕಳೆದ ಸಭೆಯಲ್ಲಿ ಆನಂದರೆಡ್ಡಿ ಎನ್ನುವವರು ನೀಡಲಾಗಿದ್ದ ದೂರಿಗೆ ತ್ವರಿತವಾಗಿ ಕ್ರಮಕೈಗೊಳ್ಳುವಂತೆ ತಹಶೀಲ್ದಾರ್ ಶಿವರಾಜ್‌ಅವರಿಗೆ ಸೂಚನೆ ನೀಡಿದರು.
ಕಾಡನೂರು ಗ್ರಾಪಂನಲ್ಲಿ ಅಕ್ರಮ ಖಾತೆ ಕುರಿತು ದೂರು,ಜಮೀನು ಭೂ ಪರಿವರ್ತನೆ ಮಾಡದಿದ್ದರೂ ಅಕ್ರಮವಾಗಿ ಇಟ್ಟಿಗೆ ಕಾರ್ಖಾನೆ ನಡೆಸುತ್ತಿರುವ ಕುರಿತು ದೂರು ನೀಡಿದರು. ಸಭೆಯಲ್ಲಿ ತಹಶೀಲ್ದಾರ್ ಶಿವರಾಜ್,ತಾಪಂ ಇಒ ದ್ಯಾಮಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು