ಮಸ್ಕಿ: ಚಿರತೆಗೆ ಹೋಲುವ ಕಾಡಿನ ಬೆಕ್ಕು ಪ್ರತ್ಯಕ್ಷ ಆಗಿದ್ದು, ಜಮೀನಿಗೆ ತೆರಳುವ ಆತಂಕ ಉಂಟಾಗುತ್ತಿದೆ, ಇದು ತಾಲೂಕಿನ ಡಬ್ಬೇರಮಡು-ಭಟ್ರಹಳ್ಳಿ ಗ್ರಾಮದ ಜನರು ಹೇಳುವ ಮಾತಿದು.
ಮಸ್ಕಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಡಬ್ಬೇರಮಡು ಗ್ರಾಮದ ಹೊರವಲಯದ ಜಮೀನುಗಳಲ್ಲಿ ಚಿರತೆಗೆ ಹೋಲುವ ಕಾಡಿನ ಬೆಕ್ಕು ಪ್ರತ್ಯಕ್ಷ ವಾಗಿದ್ದು, ಸುತ್ತಲಿನ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಡಬ್ಬೇರಮಡು, ಮಾರಲದಿನ್ನಿ ತಾಂಡಾ, ಮಾರಲದಿನ್ನಿ, ಭಟ್ರಹಳ್ಳಿ, ಕುಣಿಕೆಲ್ಲೂರು, ಮೂಡಲದಿನ್ನಿ, ಸುಲ್ತಾನಪುರ, ಗೊಲ್ಲರಹಟ್ಟಿ, ಮೂಡಲದಿನ್ನಿ ತಾಂಡಾದ ನಿವಾಸಿಗಳು ಕೃಷಿ ಚಟುವಟಿಕೆಗಾಗಿ ಹೊಲಗಳಿಗೆ ತೆರಳಲು ಹಿಂದೇಟು ಹಾಕುವಂತಾಗಿದೆ. ಇನ್ನು ಹೊಲಗಳಲ್ಲಿ ಗುಡಿಸಲು ಹಾಕಿಕೊಂಡಿರುವ ಹಲವು ಕುಟುಂಬಗಳು ಆತಂಕದಿಂದ ದಿನದೂಡುತ್ತಿವೆ. ಈ ಭಾಗದಲ್ಲಿ ಕಾಡು ಕರಡಿ ದಾಳಿ ಮಾಡಿ ವ್ಯಕ್ತಿಯೋರ್ವನ ಮೇಲೆ ದಾಳಿ ಮಾಡಿ ಕಣ್ಣು ಕಳೆದುಕೊಂಡಿದ್ದರು. ಮಾರಲದಿನ್ನಿ ತಾಂಡಾದ ಕರೆಗುಡ್ಡದಲ್ಲಿ ಚಿರತೆ ಪ್ರತ್ಯೇಕ್ಷವಾಗಿ ಆಕಳು ಕರು ತಿಂದು ಹಾಕಿತ್ತು, ಈ ಘಟನೆ ಇನ್ನೂ ಮಾಸುವ ಮುನ್ನವೇ ಪುನಃ ಕಾಡು ಬೆಕ್ಕು ಪ್ರತ್ಯಕ್ಷವಾಗಿರುವುದು ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.
ಕಾಡು ಬೆಕ್ಕು ಇದಕ್ಕೆ ಸಿವೇಟ್ ಬೆಕ್ಕು ಎನ್ನುತ್ತಾರೆ, ಕಾಡಿನ ಬೆಕ್ಕು ಪ್ರತ್ಯಕ್ಷವಾದ ಬಗ್ಗೆ ಜನರಿಂದ ಮಾಹಿತಿ ಪಡೆದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಕಾಡಿನ ಬೆಕ್ಕು ಪಲಾಯನ ಪ್ರಾಣಿ ಆಗಿದ್ದರಿಂದ ಅದು ಬೋನಿನಲ್ಲಿ ಬಿಳುವುದಿಲ್ಲ, ಎರಡ್ಮೂರು ದಿನಗಳ ಹಿಂದೆ ತೊಡಕಿ ಗ್ರಾಮದ ಕಡೆ ಕಂಡು ಬಂದಿತ್ತು, ಡಬ್ಬೇರಮಡು ಗ್ರಾಮದಿಂದ ಮುದಗಲ್ಲ ಭಾಗದ ಬನ್ನಿಗೋಳ ಗ್ರಾಮದ ಕಂಡು ಬಂದಿದೆ ಎನ್ನಲಾಗಿದೆ.
ಡಬ್ಬೇರಮಡು ಗ್ರಾಮದ ಹೊರ ವಲಯದಲ್ಲಿ ಚಿರತೆ ಬಂದಿದೆ, ಎಂದು ಜನರು ಮಾಹಿತಿ ನೀಡಿದ್ದರೆ, ಸ್ಥಳಕ್ಕೆ ತೆರಳಿ ಹೆಜ್ಜೆ ಗುರುತು ಪರಿಶೀಲನೆ ಮಾಡಿದ್ದೇವೆ, ಅದು ಚಿರತೆ ಹೆಜ್ಜೆ ಅಲ್ಲ, ಕಾಡಿನ ಪ್ರಾಣಿ, ಚಿರತೆಗೆ ಸಿವೇಟ್ ಬೆಕ್ಕು ಆಗಿದೆ.ಇದು ಪಲಾಯನ ಪ್ರಾಣಿ ಆಗಿದ್ದು, ಜನರ ಮೇಲೆ ದಾಳಿ ಮಾಡುವುದಿಲ್ಲ, ಬದಲಾಗಿ,ಕೋಳಿ, ಉಡ, ಇಲಿ ತಿನ್ನುತ್ತದೆ. ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲ ಜನತೆ ಆತಂಕ ಪಡುವ ಅಗತ್ಯ ಇಲ್ಲ
-ಹುಸೇನಬಾಷಾ. ಉಪಲಯ ಅರಣ್ಯ ಅಧಿಕಾರಿ
-ವಿಠ್ಠಲ ಕೆಳೂತ್