Advertisement
ಇಲ್ಲಿನ ಸರ್ಕಾರಿ ಶಾಲೆಯಲ್ಲಿ 70ಕ್ಕೂ ಹೆಚ್ಚಿನ ಮಕ್ಕಳು ಇದ್ದು, ಮಕ್ಕಳಿಗೆ ಮೂತ್ರ ವಿಸರ್ಜನೆಗೆ ಅನುಕೂಲವಾಗಲೆಂದು ನರೇಗಾ ಯೋಜನೆ ಅಡಿಯಲ್ಲಿ 5ಲಕ್ಷ ರೂ.ವೆಚ್ಚದಲ್ಲಿ ಶೌಚಾಲಯ ಕಟ್ಟಡ ನಿರ್ಮಿಸಿ ಗುತ್ತಿಗೆದಾರರು ಅರ್ಧಕ್ಕೆ ಬಿಟ್ಟಿರುವುದರಿಂದ ಶೌಚಾಲಯ ಗೋಡೆ ಶಿಥಿಲಾವಸ್ಥೆಗೆ ತಲುಪಿದ್ದು, ಮೂತ್ರ ವಿಸರ್ಜನೆಗೆ ಶಾಲಾ ಮಕ್ಕಳು ಶಿಕ್ಷಕರು ಪರದಾಡುವಂತಾಗಿದೆ.
ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಶೌಚಾಲಯ ಕಟ್ಟಡ ಕಾಮಗಾರಿ ನೆನೆಗುದಿಗೆ ಬಿದ್ದಿರುವುದರಿಂದ ಶಾಲೆಯ ಆವರಣದಲ್ಲಿನ ಹಳೆ ಕಟ್ಟಡದಲ್ಲಿ ಶಾಲಾ ಮಕ್ಕಳು ಮೂತ್ರ ವಿಸರ್ಜನೆ ಮಾಡುತ್ತಿದ್ದು, ಶಿಕ್ಷಕರು ಹೊರ ಹೋಗುವ ಪರಿಸ್ಥಿತಿ ನಿರ್ಮಾಣ ಆಗಿದೆ. ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಸಲುವಾಗಿ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿದೆ. ಅದರೇ ಅನುದಾನ ಬಿಡುಗಡೆಯಾದರು , ಸಹ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶೌಚಾಲಯ ಕಾಮಗಾರಿ ಅರ್ಧಕ್ಕೆ ಮೊಟಕು ಗೊಳಿಸಲಾಗಿದೆ.
Related Articles
ಶೌಚಾಲಯ ಕಟ್ಟಡವನ್ನು ತರಗತಿ ಕೋಣೆ, ಶಾಲಾ ಮುಖ್ಯದ್ವಾರದಿಂದ ಅಂತರದಲ್ಲಿ ಶೌಚಾಲಯ ಕಟ್ಟಡ ಕಟ್ಟಬೇಕಿತ್ತು, ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆದಿಂದಾಗಿ ಶಾಲೆಯ ಕಾಂಪೌಂಡ್ ಗೇಟಿನ ಮುಂಭಾಗದಲ್ಲಿ ಕಟ್ಟಲಾಗಿದೆ. ಶೌಚಾಲಯ ಬಳಕೆ ಮಾಡಿದ ಬಳಿಕ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಗಬ್ಬು ವಾಸನೆ ಬೀರುವ ಸಾಧ್ಯತೆಗಳಿದೆ. ಅರ್ಧ ಕಟ್ಟಿರುವ ಶೌಚಾಲಯ ಕಟ್ಟಡವನ್ನು ತೆರವುಗೊಳಿಸಿ ಸೂಕ್ತ ಜಾಗದಲ್ಲಿ ಶೌಚಾಲಯ ಕಟ್ಟಡ ನಿರ್ಮಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Advertisement
ಮಸ್ಕಿ ತಾಲೂಕಿನ ಮಾರಲದಿನ್ನಿ ತಾಂಡಾದ ಸರ್ಕಾರಿ ಶಾಲೆಯಲ್ಲಿ ಕಟ್ಟಿರುವ ಶೌಚಾಲಯ ಕಟ್ಟಡ ಪರಿಶೀಲಿಸಿ, ಕಟ್ಟಡ ಬೇಗನೆ ಮುಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.-ಶಿವಾನಂದರೆಡ್ಡಿ , ನರೇಗಾ.ಎಡಿ