ಮಸ್ಕಿ: ಚುನಾವಣೆ ಕರ್ತವ್ಯ ನಿರತ ಪೌರ ಕಾರ್ಮಿಕ ಸ್ನಾನಕ್ಕೆ ತೆರಳಿದ್ದ ವೇಳೆ ಕಾಲುವೆಯಲ್ಲಿ ಜಾರಿ ಬಿದ್ದು ಕೊಚ್ಚಿಹೋದ ಘಟನೆ ಶುಕ್ರವಾರ ಬೆಳಿಗ್ಗೆ ಪಟ್ಟಣದ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ನಡೆದಿದೆ.
ಪೌರ ಕಾರ್ಮಿಕ ಜಂಬಯ್ಯ ರಾಯಚೂರು (45) ಎಂದು ಗುರುತಿಸಲಾಗಿದೆ.
ಕೆಲ ದಿನಗಳ ಹಿಂದೆಯಷ್ಟೇ ನಡೆದ ಆನ್ ಲೈನ್ ನೇಮಕಾತಿಯಲ್ಲಿ ಆಯ್ಕೆಯಾಗಿ ಪಟ್ಟಣದ ಪುರಸಭೆಯಲ್ಲಿ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಗುರುವಾರ ರಾತ್ರಿ ರಾಯಚೂರಿನಿಂದ ಮತಯಂತ್ರಗಳನ್ನು ತೆಗೆದುಕೊಂಡು ಬಂದು ಪಟ್ಟಣದ ದೇವನಾಂಪ್ರಿಯ ಕಾಲೇಜ ನಲ್ಲಿಯ ಸ್ಟ್ರಾಂಗ್ ರೂಮ್ ನಲ್ಲಿ ಇಳಿಸಿದ ನಂತರ ಶುಕ್ರವಾರ ಬೆಳಿಗ್ಗೆ ತನ್ನ ಮತ್ತೊಬ್ಬ ಸಿಬ್ಬಂದಿಯ ಜೊತೆ ಸ್ನಾನಕ್ಕೆಂದು ಕಾಲುವೆಗೆ ತೆರಳಿದ್ದಾರೆ.
ಕಾಲು ಜಾರಿ ಬಿದ್ದ ನೀರಿಗೆ ಹರಿಯುವ ನೀರಿಗೆ ಕೊಚ್ಚಿ ಹೋಗಿದ್ದಾನೆ. ಜೊತೆಯಲ್ಲಿದ್ದ ಮತ್ತೊಬ್ಬ ಕಾರ್ಮಿಕ ಹರಿದು ಹೋಗುತ್ತಿದ್ದ ಪೌರ ಕಾರ್ಮಿಕನ ರಕ್ಷಣೆ ಮಾಡಲು ಯತ್ನಿಸಿದರು ಪ್ರಯೋಜನವಾಗಿಲ್ಲ.
ಸುದ್ದಿ ತಿಳಿಯುತ್ತಲೇ ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಲಿಂಗಸುಗೂರು ಹಾಗೂ ಸಿಂಧನೂರಿನಿಂದ ಆಗ್ನಿ ಶಾಮಕ ತಂಡಗಳು ಹಾಗೂ ಪೌರ ಕಾರ್ಮಿಕರು ಕಾಲುವೆಯಲ್ಲಿ ನಾಪತ್ತೆಯಾದ ಜಂಬಯ್ಯ ಅವರ ಶೋಧ ಕಾರ್ಯ ನಡೆಸಿದ್ದಾರೆ.