Advertisement

ಮಾಸ್ಕ್-ಸ್ಯಾನಿಟೈಸರ್‌ ವಿತರಣೆ

11:56 AM Jun 05, 2021 | Team Udayavani |

ಬೀರೂರು: ಕೋವಿಡ್ ಸೋಂಕು ತಡೆಗಟ್ಟುವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಬಹುಮುಖ್ಯವಾದುದು. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದು, ಅವರ ಆರೋಗ್ಯದ ಇಂಚಿಂಚು ವರದಿ ಕಲೆ ಹಾಕಿ ತಜ್ಞರಗಮನಕ್ಕೆ ತರುವುದರಿಂದ ಮುಂಜಾಗ್ರತಾಕ್ರಮಗಳ ಬಗ್ಗೆ ಎಚ್ಚರವಿರಲಿ ಎಂದು ಗ್ರಾಪಂ ಅಧ್ಯಕ್ಷೆ ನಾಗಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಹುಲ್ಲೇಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ, ಪಂಚಾಯಿತಿ ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್‌ ಹಾಗೂ ಫೇಸ್‌ ಶೀಲ್ಡ್‌ವಿತರಿಸಿ ಮಾತನಾಡಿದರು. ಪಿಡಿಒ ಮಂಜುನಾಥ್‌ ಮಾತನಾಡಿ, ಹುಲ್ಲೇಹಳ್ಳಿ ಪಂಚಾಯಿತಿಗೆ ಸೇರಿದ 8 ಗ್ರಾಮಗಳಲ್ಲಿಒಟ್ಟು 51 ಪಾಸಿಟಿವ್‌ ಪ್ರಕರಣಗಳಿದ್ದು, ಅದರಲ್ಲಿ 46 ಮಂದಿ ಸಂಪೂರ್ಣ ಗುಣಮುಖರಾಗಿದ್ದು, ಇನ್ನುಳಿದ 5 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ. ಕೆಲವೇ ದಿನಗಳಲ್ಲಿ ಅವರು ಗುಣಮುಖರಾಗುತ್ತಾರೆ.

ಎಲ್ಲಾ ಗ್ರಾಮಗಳಿಗೂ ಸ್ಯಾನಿಟೈಸ್‌ ಮಾಡಿಸುತ್ತಿದ್ದು, ಹೋಂ ಐಸೋಲೇಷನ್‌ನಲ್ಲಿರುವವರ ಮನೆಗಳ ಬಳಿಎರಡು ದಿನಗಳಿಗೊಮ್ಮೆ ಸ್ಯಾನಿಟೈಸ್‌ ಮಾಡಿಸಲಾಗುತ್ತಿದೆ ಎಂದರು. ಪಂಚಾಯಿತಿ ಉಪಾಧ್ಯಕ್ಷೆ  ಶಾಂತ, ಸದಸ್ಯರಾದ ಹುಲ್ಲೇಹಳ್ಳಿ ಲಕ್ಷ್ಮಣ,ನರಸಿಂಹಮೂರ್ತಿ, ಎನ್‌.ಮೂರ್ತಿ,ಸೌಭಾಗ್ಯ, ಧನಲಕ್ಷ್ಮಿ, ಯರೇಹಳ್ಳಿ ಲೋಕೇಶ್‌, ಗ್ರಾಮಸ್ಥರಾದ ಸುರೇಶ್‌,ವೆಂಕಟೇಶ್‌, ಕುಮಾರ್‌, ಧನಪಾಲ್‌, ಆಶಾ ಕಾರ್ಯಕರ್ತೆಯರಾದ ಅಂಬಿಕ,ಮೀನಾಕ್ಷಿ, ಹೇಮಾವತಿ ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next