Advertisement
ಬೆಂಗಳೂರು: ಕೊರೊನಾ ವಿರುದ್ಧ ಹೋರಾಡಲು ಮಾಸ್ಕ್ ಬ್ರಹ್ಮಾಸ್ತ್ರ ಎಂದು ಜಗತ್ತಿನ ತಜ್ಞರು ಮತ್ತೆ ಮತ್ತೆ ಸಾರುತ್ತಿ ದ್ದರೂ ರಾಜ್ಯದಲ್ಲಿ ನಿರ್ಲಕ್ಷ್ಯ ಇರುವುದು “ಉದಯವಾಣಿ’ ಕೈಗೊಂಡ ಸಹಾ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಮಾಸ್ಕ್ ಧಾರಣೆ ಯಲ್ಲಿ ಕರುನಾಡು ಜಸ್ಟ್‌ಪಾಸ್!
ಕೊರೊನಾ ನಿಯಮ ಉಲ್ಲಂ ಸಿದ ಮಹಾ ನಗರ ಪೈಕಿ ಬೆಂಗಳೂರು ಮುಂಚೂಣಿ. ಇಲ್ಲಿ ಮಾಸ್ಕ್ ಧರಿಸಿದವರು ಶೇ.18! ಅನಂತರದ ಸ್ಥಾನಗಳನ್ನು ಮೈಸೂರು (ಶೇ.29) ಮತ್ತು ಬಳ್ಳಾರಿ (ಶೇ.30) ಪಡೆದಿವೆ. ಮಾಸ್ಕ್ಗೆ ಹೆಚ್ಚು ಮರ್ಯಾದೆ ಕೊಟ್ಟಿದ್ದು ಮಲೆನಾಡು ಮತ್ತು ಕರಾವಳಿ ಭಾಗ. ಪರಿಪೂರ್ಣ ಮಾಸ್ಕ್ಧಾರಣೆ ಪೈಕಿ ಶಿವಮೊಗ್ಗ ಶೇ.48.57 ಅಂಕಗಳಿಂದ ಪ್ರಥಮ, ಉಡುಪಿ (ಶೇ.43) ದ್ವಿತೀಯ, ಮಂಗ ಳೂರು (ಶೇ.40) ತೃತೀಯ ಸ್ಥಾನದಲ್ಲಿದೆ.
Related Articles
ಹುಬ್ಬಳ್ಳಿಯ ಜನಸಂದಣಿ ತಾಣಗಳಲ್ಲಿ ದಂಡ ತೆತ್ತವರ ಸಂಖ್ಯೆ ಹೆಚ್ಚಿತ್ತು. ಮಾಸ್ಕ್ ಧರಿಸದವರಿಂದ ಇಲ್ಲಿ ನಿತ್ಯ ಸರಾಸರಿ 50 ಸಾ. ರೂ. ದಂಡ ಸಂಗ್ರಹಿಸ ಲಾ ಗುತ್ತಿತ್ತು. ಉಡುಪಿ, ಮಂಗಳೂರಿನ ವಿವಿಧೆಡೆ ದಂಡ ವಿಧಿಸುವ ಸಿಬಂದಿ ಎದುರೇ ಕೋವಿಡ್ ನಿಯಮಗಳು ಉಲ್ಲಂಘನೆಯಾಗುತ್ತಿದ್ದವು.
Advertisement
ಸುಶಿಕ್ಷಿತರಿಂದಲೇ ನಿರ್ಲಕ್ಷ್ಯವಿಚಾರವಂತರ ನೆಲ ಎನ್ನಿಸಿಕೊಂಡ ಮೈಸೂರು, “ವಿದ್ಯಾಕಾಶಿ’ ಗರಿ ಮುಡಿದ ಧಾರವಾಡದಲ್ಲೂ ಮಾಸ್ಕ್ ಇಲ್ಲದ ಮುಖಗಳೇ ಹೆಚ್ಚು ಕಾಣುತ್ತಿದ್ದವು. ಕಲಿತವರು, ಯುವಕರು ಹೆಚ್ಚಿರುವ ಕೆಲವು ಕಾಲೇಜು ಆವರಣಗಳಲ್ಲಿ ಮಾಸ್ಕ್ ಸಂಸ್ಕೃತಿಯೇ ನಾಪತ್ತೆ ಆಗಿತ್ತು. ಕೊರೊನಾ ಮಾರ್ಗಸೂಚಿ ಪಾಲಿಸಿ ಆದರ್ಶವಾಗಬೇಕಿದ್ದ ಅಧಿಕಾರಿಗಳೇ ಬೇಜವಾಬ್ದಾರಿತನ ಪ್ರದರ್ಶಿಸುತ್ತಿದ್ದ ದೃಶ್ಯ ಎಲ್ಲೆಡೆ ಇತ್ತು. ಇದೇನು ಭಂಡತನ!
ಸಮೀಕ್ಷೆಯಲ್ಲಿ ಅಸಹಜ ಸಂಗತಿಗಳೇ ರಾರಾಜಿಸಿದ್ದವು. ವಿಜಯಪುರ ಸಹಿತ ಹಲವೆಡೆ ಮಾಸ್ಕ್ನ್ನು ಗಲ್ಲ ಮತ್ತು ಕೊರಳಲ್ಲಿ ಧರಿಸಿಕೊಂಡದ್ದು ಹೆಚ್ಚಾಗಿ ಕಂಡು ಬಂತು. ಇಡೀ ರಾಜ್ಯದಲ್ಲಿ ಅರೆಬರೆ ಮಾಸ್ಕ್ನ ಟ್ರೆಂಡ್ ಶೇ.30.34ರಷ್ಟಿದೆ. ಶಿವಮೊಗ್ಗದ ಜನಸಂದಣಿ ಪ್ರದೇಶಗಳಲ್ಲಿ ಕೆಲವರ ಅಂಗಿ- ಪ್ಯಾಂಟ್ ಜೇಬಿನೊಳ ಗಿಂದ ಮಾಸ್ಕ್ ಇಣುಕುತ್ತಿತ್ತು. “ಮಾಸ್ಕ್ ಹಾಕ್ಕೊಳಿÅà’ ಎಂದು ಗದರಿಸುತ್ತಿದ್ದ ತುಮಕೂರಿನ ಪೊಲೀಸ್ ಸಿಬಂದಿಯೇ ಅರೆಬರೆ ಮಾಸ್ಕ್ನಲ್ಲಿದ್ದರು! ಕಲಬುರಗಿ, ಮಂಗಳೂರಿನ ಕೆಲವೆಡೆ ಸೀನುವಾಗ ಮಾಸ್ಕ್ ತೆಗೆಯುತ್ತಿದ್ದರು! ಉದಯವಾಣಿ ಕಾಳಜಿ
1. ಸರಕಾರ ನಿಯಮ ಸಡಿಲಗೊಳಿಸುವುದು ಕೇವಲ ಆರ್ಥಿಕ ಚಟುವಟಿಕೆಯ ಉತ್ತೇಜನ ಕ್ಕಷ್ಟೇ. ಕೋವಿಡ್ ನಿಯಮ ಉಲ್ಲಂಘನೆಗಲ್ಲ.
2.ಕೊರೊನಾ ಅಲೆ ತಗ್ಗುವವರೆಗೂ ಮಾಸ್ಕ್ ಧರಿಸುವುದು ನಮಗೇ ಕ್ಷೇಮ.
3.ಮೂಗು, ಬಾಯಿ ಮುಚ್ಚುವಂತೆ ಮಾಸ್ಕ್ ಧರಿ ಸಿದರಷ್ಟೇ ಪ್ರಯೋ ಜನ.
4.ಜನದಟ್ಟಣೆ ಇರುವ ಕಡೆಗಳಲ್ಲಿ ಸಾಮಾಜಿಕ ಅಂತರ ಪಾಲನೆ ಮುಖ್ಯ.
5. “ನಮ್ಮಿಂದ ಇನ್ನೊಬ್ಬರಿಗೆ ತೊಂದರೆ ಆಗದಿರಲಿ’ ಎಂಬ ಕಾಳಜಿ ನಮ್ಮೊಳಗಿರಲಿ.