Advertisement

ಮಾಸ್ಕ್ ಕಡ್ಡಾಯ: ಎಸ್ಪಿ ವೇದಮೂರ್ತಿ

08:52 AM Jun 29, 2020 | Suhan S |

ರಾಯಚೂರು: ಕೋವಿಡ್ ವೈರಸ್‌ ಹರಡದಂತೆ ಸರ್ಕಾರ ಸಾಕಷ್ಟು ಶ್ರಮಿಸುತ್ತಿದ್ದು, ಸಾರ್ವಜನಿಕರು ಕೂಡ ತಮ್ಮ ಜವಾಬ್ದಾರಿ ಅರಿತು ನಡೆದುಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಸಿ.ಬಿ.ವೇದಮೂರ್ತಿ ತಿಳಿಸಿದರು.

Advertisement

ನಗರದ ಡಾ| ಅಂಬೇಡ್ಕರ್‌ ವೃತ್ತದಲ್ಲಿ ಮಾಸ್ಕ್ ಧರಿಸದ ವಾಹನ ಸವಾರರಿಗೆ ದಂಡ ಹಾಕುವುದರ ಜತೆಗೆ ಮಾಸ್ಕ್ ವಿತರಿಸುವ ಮೂಲಕ ಜಾಗೃತಿ ಮೂಡಿಸಿದರು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಇದರಿಂದ ಸೋಂಕು ಹರಡುವುದನ್ನುತಡೆಯಬಹುದು. ಅದರ ಜತೆಗೆ ಸ್ಯಾನಿಟೈಸರ್‌ ಬಳಸುವುದು, ಸಾಮಾಜಿಕ ಮತ್ತು ದೈಹಿಕ ಅಂತರ ಕಾಪಾಡಿಕೊಳ್ಳುವುದು ಮುಖ್ಯ. ಸಾಕಷ್ಟು ವಾಹನ ಸವಾರರು ಮಾಸ್ಕ್ ಹಾಕಿಕೊಳ್ಳದೇ ವಾಹನ ಓಡಿಸುತ್ತಿರುವುದು ಬೇಸರದ ಸಂಗತಿ ಎಂದರು.

ಒಮ್ಮೆ ಮಾಸ್ಕ್ ಧರಿಸದೇ ವಾಹನ ಚಲಾಯಿಸಿದರೆ 200 ರೂ. ದಂಡ ವಿಧಿಸಲಾಗುವುದು. ಪಾದಚಾರಿಗಳೂ ಮಾಸ್ಕ್ ಧರಿಸಬೇಕು. ವ್ಯಾಪಾರ ವಹಿವಾಟು ನಡೆಸುವಾಗ ಗ್ರಾಹಕರು ಮತ್ತು ವರ್ತಕರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಎಂದರು. ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ಜಿಲ್ಲಾ ಸಂಚಾಲಕ ದಂಡಪ್ಪ ಬಿರಾದಾರ, ಡಿಎಸ್‌ಪಿ ಶಿವನಗೌಡ ಪಾಟೀಲ ಸೇರಿ ಪೊಲೀಸ್‌ ಅಧಿಕಾರಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next