Advertisement
ಶಿರಸಿ ತಹಶೀಲ್ದಾರ್ ಕಚೇರಿ ಮೂಲಕ ಘಟ್ಟದ ಮೇಲ್ಭಾಗದ ಆರು ತಾಲೂಕುಗಳಿಗೆ ವಿತರಿಸಲು ತರಿಸಲಾಗಿದ್ದ 200 ಬಾಕ್ಸ್ ಗುಣಮಟ್ಟದ ಮಾಸ್ಕ್ ಇನ್ನೂ ಬಾಕ್ಸ್‌ನಲ್ಲೇ ಕೊಳೆಯುತ್ತಿದೆ. ತಾಲೂಕು ಆಡಳಿತದ ನಿರ್ಲಕ್ಷ್ಯದಿಂದ ಕಳೆದ ವರ್ಷದಿಂದ ಗೋಡಾನ್ ಒಂದರಲ್ಲಿ ತುಂಬಿಯೇ ಉಳಿದಿದ್ದು, ಈಗ ಸ್ವತಃ ಅಧಿಕಾರಿಗಳಿಗೂ ಮುಜುಗರಕ್ಕೆ ಕಾರಣವಾಗುತ್ತಿದೆ.
Related Articles
Advertisement
ಬನಿಯನ್ ಬಟ್ಟೆಯ ಗುಣಮಟ್ಟದ ಮಾಸ್ಕ್ಗಳು ಒಂದು ಲಕ್ಷಕ್ಕೆ ಕಡಿಮೆ ಇಲ್ಲದಷ್ಟು ಇಲ್ಲಿವೆ. ರೆಡ್‌ಕ್ರಾಸ್ ಮೂಲಕ ಮಾಸ್ಕ್ ವಿತರಣೆ ಬಗ್ಗೆ ವಿವರಣೆ ಕೇಳಿದಾಗಲೇ ಮರಳಿ ಈ ಬಾಕ್ಸ್‌ಗಳು ಹೆಗಿದ್ದವೋ ಹಾಗೆ ಸಿಕ್ಕಿವೆ! ಅಧಿಕಾರಿಗಳ ನಿರ್ಲಕ್ಷ್ಯದಿಂದ ಘಟ್ಟದ ಮೇಲಿನ ತಾಲೂಕಿನ ಜನರ ಅಗತ್ಯ ಬಳಕೆಗೆ ಬೇಕಿದ್ದವೂ ನೆರವಿಗೆ ಸಿಗದಂತೆ ಆಗಿದೆ.
ನಾನೂ ಹೊಸತಾಗಿ ಬಂದಿರುವೆ. ಮಾಸ್ಕ್ಗಳು ಹಾಗೇ ಉಳಿದಿದೆ ಎಂದು ಗೊತ್ತಾದ ತಕ್ಷಣ ಅದನ್ನು ಆಯಾ ತಾಲೂಕಿಗೆ ಹಂಚಿಕೆ ಮಾಡಲು ಸೂಚನೆ ನೀಡಿರುವೆ. –ಶ್ರೀಧರ ಮುಂದಲಮನಿ, ತಹಶೀಲ್ದಾರ್, ಶಿರಸಿ
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇನ್ನೇನು ಹಾಗೇ ಇವೆಯೋ ಹುಡಕಬೇಕು. ಮಾಸ್ಕ್ ಗಳನ್ನು ಶಿಕ್ಷಣ ಇಲಾಖೆ ಮೂಲಕ ಹವಾಮಾನ ವ್ಯತ್ಯಾಸದಿಂದ ಆಗುವ ಥಂಡಿ, ಕೆಮ್ಮು ಆದ ಮಕ್ಕಳಾದರೂ ಬಳಸಲು ಸೂಚಿಸಬೇಕು. -ಕಮಲಾಕರ ನಾಯ್ಕ, ಪಾಲಕ
-ರಾಘವೇಂದ್ರ ಬೆಟ್ಟಕೊಪ್ಪ