Advertisement

ಮತಗಟ್ಟೆಗಳಲ್ಲಿ ಮಾಸ್ಕ್ ಕಡ್ಡಾಯ: ಜಿಲ್ಲಾಧಿಕಾರಿ

03:47 PM Oct 06, 2020 | Suhan S |

ಯಾದಗಿರಿ: ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದ ಮತಗಟ್ಟೆಗಳಲ್ಲಿ ಈಗಾಗಲೇಮೂಲಭೂತ ಸೌಕರ್ಯ ವ್ಯವಸ್ಥೆ ಮಾಡಲಾಗಿದೆ ಹಾಗೂ ಮತಗಟ್ಟೆಗಳಲ್ಲಿ ಥರ್ಮಲ್‌ ಸ್ಕ್ರೀನಿಂಗ್‌, ಸಾನಿಟೈಸರ್‌, ಮಾಸ್ಕ್ ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಆರ್‌. ಹೇಳಿದರು.

Advertisement

ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಒಟ್ಟು 7 ಮತಗಟ್ಟೆಗಳಿವೆ. ಒಟ್ಟು 1763 ಶಿಕ್ಷಕ ಮತದಾರರು ಇದ್ದಾರೆ. ಇದರಲ್ಲಿ ಯಾದಗಿರಿ ತಾಲೂಕಿನಲ್ಲಿ 402, ಗುರುಮಠಕಲ್‌ 152, ಶಹಾಪುರ ಮತ್ತು ವಡಗೇರಾ 584, ಸುರಪುರ 383, ಹುಣಸಗಿ 71 ಹಾಗೂ ಕೆಂಭಾವಿಯಲ್ಲಿ 104, ಕೊಡೇಕಲ್‌ನಲ್ಲಿ 67 ಮತದಾರರಿದ್ದಾರೆ ಎಂದು ತಿಳಿಸಿದರು.

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರಗಳ ನಮೂನೆಗಳನ್ನು ಪ್ರಾದೇಶಿಕ ಆಯುಕ್ತರ ಕಾರ್ಯಾಲಯದ ಚುನಾವಣೆ ಶಾಖೆಯಿಂದ ಪಡೆದು. ಭರ್ತಿ ಮಾಡಿ ಚುನಾವಣಾಧಿಕಾರಿ, ಪ್ರಾದೇಶಿಕ ಆಯುಕ್ತರ ಕಾರ್ಯಾಲಯದ ಕಾನ್ಫೆರೆನ್ಸ್‌ ಹಾಲ್‌, 2ನೇ ಮಹಡಿ, ಮಿನಿ ವಿಧಾನಸೌಧ, ಕಲಬುರಗಿ ಇಲ್ಲಿ ಅ.1ರಿಂದ 8ರವರೆಗೆ ಸಾರ್ವತ್ರಿಕ ರಜಾ ದಿನ ಹೊರತುಪಡಿಸಿ ಬೆಳಗ್ಗೆ 11 ಗಂಟೆಯಿಂದ ಅಪರಾಹ್ನ 3 ಗಂಟೆಯವರೆಗೆ ಸಲ್ಲಿಸಬೇಕು ಎಂದು ಹೇಳಿದರು.

ಬಹಿರಂಗ ಪ್ರಚಾರ ನಿಷೇಧ: ಮತದಾನ ಅ.28ರಂದು ನಿಗದಿಯಾಗಿರುವುದರಿಂದ ಮತದಾನ ಪ್ರಾರಂಭವಾಗುವುದಕ್ಕಿಂತ 48 ಗಂಟೆಗಳ ಮುಂಚೆ ಅ.26ರ ಸಂಜೆ 6 ಗಂಟೆಯಿಂದ ಬಹಿರಂಗ ಪ್ರಚಾರ ಮಾಡುವುದು ಕೊನೆಗೊಳ್ಳುತ್ತದೆ. ಚುನಾವಣೆಗೆ ಸಂಬಂಧಿಸಿದ ಸಾರ್ವಜನಿಕ ಸಭೆ, ಸಮಾರಂಭ, ಮೆರವಣಿಗೆ ಇತ್ಯಾದಿಗಳನ್ನು ನಡೆಸುವಂತಿಲ್ಲ, ಮತದಾರರಿಗೆ ಮೊಬೈಲ್‌ನಲ್ಲಿ ಎಸ್‌ಎಂಎಸ್‌, ಎಂಎಂಎಸ್‌,ವಾಟ್ಸ್‌ಆ್ಯಪ್‌ ಇತ್ಯಾದಿ ಮೂಲಕ ಚುನಾವಣಾ ಪ್ರಚಾರ ಮಾಡತಕ್ಕದ್ದಲ್ಲ, ಎಫ್‌ಎಂ ರೇಡಿಯೋ, ಟಿವಿ ಚಾನಲ್‌ಗ‌ಳ ಮೂಲಕ ಪ್ರಚಾರ ಮಾಡತಕ್ಕದ್ದಲ್ಲ ಎಂದು ಹೇಳಿದರು.

ಮತದಾನದ ದಿನ ಮತಗಟ್ಟೆಯ 100 ಮೀಟರ್‌ ಒಳಗಡೆ ಮೊಬೈಲ್‌ ತರುವುದು,ವಿಡಿಯೋ ಮಾಡುವುದನ್ನು ನಿಷೇಧಿಸಲಾಗಿದೆ. ಈ ಎಲ್ಲ ಅಂಶಗಳ ಉಲ್ಲಂಘನೆಯು ಪ್ರಜಾ ಪ್ರಾತಿನಿಧ್ಯ ಅಧಿ ನಿಯಮ, 1951ರ ಪ್ರಕರಣ 126 ಹಾಗೂ ಭಾರತೀಯ ದಂಡ ಸಂಹಿತೆಯ ಪ್ರಕರಣ 171 ರಡಿ ಶಿûಾರ್ಹ ಅಪರಾಧ ಎಂದು ಹೇಳಿದರು.

Advertisement

ಚುನಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ದೂರು ಮತ್ತು ಕುಂದುಕೊರತೆ ಸಲ್ಲಿಕೆಗೆ ಸಹಾಯಕ ಚುನಾವಣಾ ಧಿಕಾರಿ ಕಚೇರಿಯಾದಗಿರಿಯಲ್ಲಿ 24/7 ಸಹಾಯವಾಣಿ ಸ್ಥಾಪಿಸಲಾಗಿದೆ. ದೂ.08473-253705 ಸಂಖ್ಯೆಗೆ ಕರೆ ಮಾಡಬಹುದಾಗಿದೆ. ಸಾರ್ವಜನಿಕರಿಂದ ಬರುವ ದೂರುಗಳನ್ನು ಹಾಗೂ ಕುಂದುಕೊರತೆಗಳನ್ನು ದಾಖಲಿಸಿಕೊಳ್ಳಲು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆಹಾರ ಮತ್ತು ಸುರಕ್ಷತೆ ಉಪನಿರ್ದೇಶಕರಾದ ಡಾ| ಪುಣ್ಯಕೋಟೆ ಅವರನ್ನು ನೋಡಲ್‌ ಅಧಿಕಾರಿಯಾಗಿ ನಿಯೋಜಿಸಲಾಗಿದೆ. ಮೊ.8310632137 ಗೆ ಸಂಪರ್ಕಿಸಬಹುದು ಎಂದು ಹೇಳಿದರು. ಅ ಸಭೆಯಲ್ಲಿ ಅಧಿಕಾರಿಗಳು ಮತ್ತು ರಾಜಕೀಯ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next