ದೇವನಹಳ್ಳಿ: ಕೋವಿಡ್ ಸೋಂಕಿನ ಕುರಿತು ಆತಂಕಗೊಳ್ಳದೆ ಉತ್ತಮ ಚಿಂತನೆ, ಯೋಗ, ಧ್ಯಾನ ಮತ್ತು ಮನೆಯಲ್ಲಿ ಕ್ರಿಯಾಶೀಲರಾಗಿರಬೇಕು ಎಂದು ಬೆಂಗಳೂರು ದಕ್ಷಿಣ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮುಖ್ಯಸ್ಥ ಬಸಂತ್ ಕುಮಾರ್ ತಿಳಿಸಿದರು.
ತಾಲೂಕಿನ ಜಿಲ್ಲಾಡಳಿತ ಭವನದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಕೆ.ಮಂಜುಳಾದೇವಿ ಅವರಿಗೆ ಪಂಚಾಬ್ ನ್ಯಾಷನಲ್ ಬ್ಯಾಂಕ್ ದೇವನಹಳ್ಳಿ ವಿಭಾಗ ವತಿಯಿಂದ ಉಚಿತ ಸ್ಯಾನಿಟೈಸರ್, ಮಾಸ್ಕ್, ಗ್ಲೌಸ್ ಪರಿಕರ ಹಸ್ತಾಂತರಿಸಿ ಮಾತನಾಡಿದರು.
ಜಿಲ್ಲೆಯ ಜನತೆಗೆ ಅನುಕೂಲವಾಗುವ ದೃಷ್ಟಿಯಿಂದ ಬ್ಯಾಂಕ್ ವತಿಯಿಂದ ಸ್ಯಾನಿ ಟೈಸರ್, ಮಾಸ್ಕ್ ಮತ್ತು ಇತರೆ ಪರಿಕರ ನೀಡುತ್ತಿದ್ದೇವೆ. ಹೊರಗಿನಿಂದ ಬಂದನಂತರ ಮನೆಯೊಳಗೆ ಹೋಗುವ ಮೊದಲು ತಮ್ಮ ಶರೀರದ ಸ್ವತ್ಛತೆ ಕಡೆ ಗಮನ ಹರಿಸಬೇಕು, ಪೌಷ್ಟಿಕ ಆಹಾರ ಸೇವನೆ ಹಾಗೂ ಚಟುವಟಿಕೆಯಿಂದ ಇರುವ ಜೀವನ ಶೈಲಿ ಕೊರೊನಾ ತಡೆಯಲು ಸಹಕಾರಿ ಎಂದರು.
ಪಂಜಾಬ್ ನ್ಯಾಷನಲ್ ಬ್ಯಾಂಕ್ ದೇವನಹಳ್ಳಿ ವಿಭಾಗದ ವ್ಯವಸ್ಥಾಪಕಿ ಸೌಮ್ಯಾ ಮಾತನಾಡಿ, ಒಬ್ಬರಿಂದ ಇನ್ನೊಬ್ಬರಿಗೆ ಬಹು ಬೇಗ ಹರಡುವ ವೈರಸ್‌ನಿಂದ ಜಾಗೃತರಾಗಬೇಕು. ಪ್ರತಿ ಬಾರಿ ಕೈಗಳಿಗೆ ಸ್ಯಾನಿಟೈಸರ್, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದು ಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಸಮಾಜ ಸೇವಕ ದ್ಯಾವರಹಳ್ಳಿ ವಿ.ಶಾಂತಕುಮಾರ್, ಸಾವ ಕನಹಳ್ಳಿ ಡೇರಿ ಅಧ್ಯಕ್ಷ ಎಸ್.ಪಿ.ಮುನಿ ರಾಜು, ಬ್ಯಾಂಕಿನ ಸಿಬ್ಬಂದಿಗಳಾದ ಅಮರನಾಥ್, ಪ್ರಭಾಕರ್, ಹಿಮ ಸಾಗರ್ ಮತ್ತಿತರರು ಇದ್ದರು.