Advertisement

ರೈತರಿಗೆ ಸ್ಯಾನಿಟೈಸರ್‌, ಮಾಸ್ಕ್ ವಿತರಣೆ

02:50 PM Apr 07, 2020 | Suhan S |

ಬಂಗಾರಪೇಟೆ: ದೇಶದ ಬೆನ್ನಲು ಬಾಗಿರುವ ರೈತರು ತಪ್ಪದೇ ಕೊರೊನಾ ವೈರಸ್‌ ಸೋಂಕಿಗೆ ದೂರವಾಗಿ ಎಚ್ಚರಿಕೆಯಿಂದ ಜೀವನ ನಡೆಸಬೇಕಾಗಿದ್ದು, ಪ್ರಪಂಚದಲ್ಲಿಯೇ ಮಾರಕವಾಗಿರುವ ಕೋವಿಡ್ 19 ವೈರಸ್‌ನ್ನು ರೈತರು ತಾತ್ಸಾರ ಮಾಡದೇ ಸರ್ಕಾರ ಸೂಚನೆ ನೀಡಿರುವ ಕ್ರಮಗಳನ್ನು ಅನುಸರಿಸಬೇಕೆಂದು ಎಪಿಎಂಸಿ ಅಧ್ಯಕ್ಷ ಎಸ್‌.ನಾರಾಯಣ  ಗೌಡ ಕರೆ ನೀಡಿದರು.

Advertisement

ಪಟ್ಟಣದ ಬೆಳಗಿನ ಜಾವ ನಡೆಯುವ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಗಳನ್ನು ಮಾರಾಟ ಮಾಡಲು ಬರುವ ರೈತರಿಗೆ, ವ್ಯಾಪಾರಿಗಳಿಗೆ ಉಚಿತವಾಗಿ ಸ್ಯಾನಿಟೈಸರ್‌ ಹಾಗೂ ಮಾಸ್ಕ್ಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು, ದೇಶದಲ್ಲಿ ಕೊರೊನಾ ವೈರಸ್‌ ಭಾರೀ ದುಷ್ಪರಿಣಾಮ ಬೀರುವ ರೋಗವಾಗಿದ್ದು, ಈ ರೋಗಕ್ಕೆ ಯಾವುದೆ ಔಷಧಿ ಇಲ್ಲ. ಇದರಿಂದ ರೈತರು ಎಚ್ಚೆತ್ತು ಕೊಂಡು ರೋಗ ಬರದಂತೆ ಎಚ್ಚರವಹಿಸಿ ವುದೇ ದೊಡ್ಡ ಔಷಧಿಯಾಗಿದೆ ಎಂದರು. ಎಪಿಎಂಸಿ ನಿರ್ದೇಶಕರು ಗಳಾದ ಜಿ.ರಾಜಾರೆಡ್ಡಿ. ಎಸ್‌.ಶಿವ ಶಂಕರ್‌, ಕುಪ್ಪನಹಳ್ಳಿ ನಾರಾಯಣಸ್ವಾಮಿ, ಹೆಚ್‌.ಎನ್‌. ಚಂಗಾರೆಡ್ಡಿ, ಡೋಲು ನಾರಾಯಣಸ್ವಾಮಿ ಸೇರಿದಂತೆ ಎಪಿಎಂಸಿ ಅಧಿಕಾರಿ ಸಿಬ್ಬಂದಿ ಹಾಜರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next