Advertisement

ದೈವ ಪರಿಚಾರಕರಿಗೆ ಮಾಸಾಶನ: ಪ್ರಮೋದ್‌ ಭರವಸೆ

08:34 AM Jan 27, 2017 | Harsha Rao |

ಉಡುಪಿ: ದೈವಗಳ ಪರಿಚಾರಕರಾದ ಪಾಣ, ನಲ್ಕೆ, ಪರವ, ಪಂಬದರಿಗೆ ಮಾಸಾಶನ ಕೊಡಿಸುವ ಕುರಿತು ಪ್ರಯತ್ನಿಸುವುದಾಗಿ ಸಚಿವ ಪ್ರಮೋದ್‌ ಮಧ್ವರಾಜ್‌ ಭರವಸೆ ನೀಡಿದರು.

Advertisement

ತಿಂಗಳೆ ಪ್ರತಿಷ್ಠಾನದಿಂದ ಉಡುಪಿಯ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಮಂಗಳವಾರ ನಡೆದ ತುಳುನಾಡ ಗರಡಿಗಳ ಎರಡನೇ ಮಹಾಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಬೇಡಿಕೆಗಳ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಮತ್ತು ಮುಖ್ಯಮಂತ್ರಿ ಅವರಲ್ಲಿ ಮಾತನಾಡುವೆ ಎಂದರು.

ಸಮ್ಮಾನ: ಹಂಪಿ ವಿ.ವಿ. ಸಹಪ್ರಾಧ್ಯಾಪಕ ಡಾ| ಎ. ಶ್ರೀಧರ ಸಮಾರೋಪ ಭಾಷಣ ಮಾಡಿದರು. ಮಂಗಳೂರಿನ ಉಮೇಶ ಪಂಬದ, ಬಂಟ್ವಾಳ ತಾಲೂಕು ಕಾಪು ಮಜಲಿನ ಬಾಬು ಪರವ, ಎಲ್ಲೂರಿನ ನಾರಾಯಣ ಪಾಣ, ಮಾಳದ ಲೀಲಾ ಶೆಡ್ತಿ, ತತ್ರ ಕಲಾವಿದ ಕೊರಗ ಪಾಣ ಅವರನ್ನು ಸಮ್ಮಾನಿಸಲಾಯಿತು.

ಮುಂಬಯಿ ಬಿಲ್ಲವ ಜಾಗೃತಿ ಬಳಗದ ಅಧ್ಯಕ್ಷ ಎನ್‌.ಟಿ. ಪೂಜಾರಿ ಉಪಸ್ಥಿತರಿದ್ದರು. “ಭೂತಾರಾಧನೆ ಅವಲೋಕನ’ ಗೋಷ್ಠಿಯಲ್ಲಿ ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ, ಡಾ| ಯು.ಪಿ. ಉಪಾಧ್ಯಾಯ, ಹರಿಕೃಷ್ಣ ಬಂಟ್ವಾಳ ಅವರನ್ನು ಸಮ್ಮಾನಿಸಲಾಯಿತು.

“ದೈವಾರಾಧನೆ ಭವಿಷ್ಯದ ಸವಾಲುಗಳು’ ಗೋಷ್ಠಿ ಯಲ್ಲಿ ಕೇಂಜ ಶ್ರೀಧರ ತಂತ್ರಿ, ಆಡಳಿತೆದಾರರಾದ ಕಂಡೆವು ಆದಿತ್ಯ ಮುಕ್ಕಾಲ್ದಿ, ಅಂಡಾರು ಮಹಾವೀರ ಹೆಗ್ಡೆ, ಶಿಬರೂರು ಉಮೇಶ ಶೆಟ್ಟಿ, ಕೋಲ ಕಟ್ಟುವವರಾದ ರವಿ ಪಾಣಾರ, ಕೆರುವಾಸೆ ಉಗ್ಗಪ್ಪ ಪರವ, ಹಂಡೇಲು ಗಂಗಯ್ಯ ಪರವ, ಸುಳ್ಯ ಮಜಲಿನ ಜಯರಾಮ ಬೊಳಿಯ, ಗಣ್ಯರಾದ ಉಪ್ಪಿನಂಗಡಿಯ ಡಾ| ನಿರಂಜನ ರೈ, ಮಂಗಳೂರು ವಿ.ವಿ.ಯ ಡಾ| ರಾಜಶ್ರೀ, ಶೇಣಿಯ ಡಾ| ಕಿಶೋರ ಕುಮಾರ್‌ ರೈ, ಸುಳ್ಯದ ಡಾ| ಸುಂದರ ಕೋಣಾಜೆ, ಮರಿಕೆಯ ಡಾ| ನವೀನ್‌ ಕುಮಾರ್‌, ಮದಿಪುವಿನವರಾದ ನಿಟ್ಟೂರು ಮಹಾಬಲ ಶೆಟ್ಟಿ, ಅಬೂಬಕ್ಕರ್‌ ಉಡುಪಿ, ಕೆ.ಕೆ. ಪೇಜಾವರ, ಪಾತ್ರಿಗಳಾದ ಅಣ್ಣಿ ಶೆಟ್ಟಿ ಮುಕ್ಕಾಲ್ದಿ, ಕೆರ್ಜಾಡಿ ದೂಮ ಪೂಜಾರಿ, ದೊಂಡೆರಂಗಡಿಯ ಬಚ್ಚ ಪೂಜಾರಿ ಪಾಲ್ಗೊಂಡಿದ್ದರು.

Advertisement

ಡಾ| ವೈ.ಎನ್‌. ಶೆಟ್ಟಿ, ಡಾ| ಅಶೋಕ್‌ ಆಳ್ವ, ಕೆ.ಎಲ್‌. ಕುಂಡಂತಾಯ ಸಂಯೋಜಿಸಿದರು.
ಸಚಿವರನ್ನು ಸಮಿತಿ ಸಂಚಾಲಕ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಗೌರವಿಸಿದರು. ಸಮಿತಿ ಅಧ್ಯಕ್ಷ ಗುರ್ಮೆ ಸುರೇಶ ಶೆಟ್ಟಿ ಸ್ವಾಗತಿಸಿದರು.

ನಂಬಿಕೆ-ಮೂಢನಂಬಿಕೆ !
ಭೂತಾರಾಧನೆ ಎನ್ನುವ ಬದಲು ದೈವಾರಾಧನೆ, ಬ್ರಹ್ಮಕಲಶ ಎನ್ನುವ ಬದಲು ಜೀರ್ಣೋ ದ್ಧಾರ ಎನ್ನಬೇಕು. ಕೋಟಿ ಚೆನ್ನಯರು ಸತ್ಯ, ಧರ್ಮ, ನ್ಯಾಯಕ್ಕಾಗಿ ಹೋರಾಡಿದವರು. ಈ ಹಿನ್ನೆಲೆಯಲ್ಲಿ ಸತ್ಯದ ಇತಿಹಾಸ, ಚರಿತ್ರೆಯನ್ನು ತಿರುಚುವುದು ಮಣ್ಣಿಗೆ ಮಾಡುವ ಅಪಚಾರ. ಕೊರಗ ಸಮುದಾಯದವರು ಕಲೆಯಿಂದ ದೂರ ಉಳಿಯಬಾರದೆಂದೇ ನಾನು ಆಳ್ವಾಸ್‌ ವಿರಾಸತ್‌, ನುಡಿಸಿರಿಯಲ್ಲಿ ಡೋಲು ಕಲೆಗೆ ಆದ್ಯತೆ ನೀಡಿದೆ. ಪರವ, ಪಂಬದ, ನಲ್ಕೆಯವರಿಗೆ ನಾನು ಎರಡು ವರ್ಷಗಳಿಂದ 500 ರೂ. ಮಾಸಾಶನ ನೀಡುತ್ತಿದ್ದೇನೆ. ಇವರಿಗೆ ಜೀವವಿಮೆ ಯೋಜನೆಯನ್ನೂ ಅಳವಡಿಸಬೇಕು. ಇವರ ಮಕ್ಕಳಿಗೆ ಆಧುನಿಕ ಶಿಕ್ಷಣ ನೀಡುವ ಜತೆ ದೈವಾರಾಧನೆಯ ಒಳಹೊರಗು ಕಲಿಸಬೇಕು ಎಂದು  ಡಾ| ಎಂ. ಮೋಹನ ಆಳ್ವ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next