Advertisement

Recipe: ಭಿನ್ನ ರುಚಿಯ ದೋಸೆ ತಿನ್ನಬೇಕು ಅನ್ನಿಸಿದ್ರೆ ಈ ತರ ದೋಸೆ ಟ್ರೈ ಮಾಡಿ…

06:23 PM Oct 21, 2024 | ಶ್ರೀರಾಮ್ ನಾಯಕ್ |

ದಿನಾ ಒಂದೇ ರೀತಿಯ ತಿಂಡಿ ಮಾಡಿ ಮಾಡಿ ಬೇಜಾರಾಗಿದ್ದರೆ ಚಿಂತಿಸ್ಬೇಡಿ ನಾವೊಂದು ನಿಮಗೆ ಸಿಂಪಲ್ ಆಗಿ ಸ್ಪೆಷಲ್ ದೋಸೆಯೊಂದನ್ನು ಮಾಡುವ ವಿಧಾನ ಹೇಳ್ತೇವೆ. ದೋಸೆ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಕೆಲವರಿಗೆ ಮಸಾಲಾ ದೋಸೆ ,ರವೆ ದೋಸೆ ಇಷ್ಟವಾದರೆ ಇನ್ನು ಕೆಲವರಿಗೆ ಈರುಳ್ಳಿ ದೋಸೆ ಇಷ್ಟವಾಗುತ್ತದೆ. ಆದರೆ ನಾವು ಇಂದು ಹತ್ತರಿಂದ ಹದಿನೈದು ನಿಮಿಷದಲ್ಲಿ ಸುಲಭದಲ್ಲಿ ಮಾಡಬಹುದಾದ ಮಸಾಲ ನೀರ್ ದೋಸೆ ಮಾಡುವುದು ಹೇಗೆ ಎಂಬುದನ್ನು ಸುಲಭ ರೀತಿಯಲ್ಲಿ ಹೇಳಿಕೊಡುತ್ತೇವೆ.

Advertisement

ಬನ್ನಿ ಹಾಗಾದರೆ ಮತ್ಯಾಕೆ ತಡ “ಮಸಾಲ ನೀರ್ ದೋಸೆ” ಮಾಡುವುದು ಹೇಗೆಂಬುದನ್ನು ತಿಳಿದುಕೊಂಡು ಬರೋಣ…

ಮಸಾಲ ನೀರ್ ದೋಸೆ
ಬೇಕಾಗುವ ಸಾಮಗ್ರಿಗಳು
ಬೆಳ್ತಿಗೆ ಅಕ್ಕಿ-2ಕಪ್‌,ಒಣಮೆಣಸು-4,ಕೊತ್ತಂಬರಿ ಬೀಜ-1ಚಮಚ,ಜೀರಿಗೆ-ಅರ್ಧ ಚಮಚ, ಹುಳಿ-ಸ್ವಲ್ಪ,ಬೆಲ್ಲ-ಸ್ವಲ್ಪ,ತೆಂಗಿನ ತುರಿ-ಅರ್ಧ ಕಪ್‌,ತೆಂಗಿನೆಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ
ಮೊದಲಿಗೆ ಬೆಳ್ತಿಗೆ ಅಕ್ಕಿಯನ್ನು 3ರಿಂದ4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟುಕೊಳ್ಳಿ. ನಂತರ ನೆನೆಸಿಟ್ಟ ಅಕ್ಕಿಯನ್ನು ಚೆನ್ನಾಗಿ ತೊಳೆದು ಮಿಕ್ಸಿಜಾರಿಗೆ ಹಾಕಿ,ಅದಕ್ಕೆ ಕೊತ್ತಂಬರಿ ಬೀಜ, ಜೀರಿಗೆ, ಹುಳಿ, ಬೆಲ್ಲ, ಒಣಮೆಣಸು ಮತ್ತು ತುರಿದಿಟ್ಟ ತೆಂಗಿನ ತುರಿಯನ್ನು ಹಾಕಿ,ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.ತದನಂತರ ಉಪ್ಪನ್ನು ಹಾಕಿ, ಚೆನ್ನಾಗಿ ಮಿಶ್ರಣ ಮಾಡಿರಿ.ಆಬಳಿಕ ಹಿಟ್ಟನ್ನು 5ರಿಂದ10ನಿಮಿಷಗಳ ಕಾಲ ಹಾಗೆ ಬಿಡಿ.ನಂತರ ದೋಸೆ ಕಾವಲಿಗೆ ತೆಂಗಿನೆಣ್ಣೆಯನ್ನು ಸವರಿ ಮಾಡಿಟ್ಟ ಹಿಟ್ಟನ್ನು ಹಾಕಿ ಚೆನ್ನಾಗಿ ಕಾಯಿಸಿರಿ.

ಈಗ ನಿಮ್ಮ ಇಷ್ಟದ ಮಸಾಲ ನೀರ್ ದೋಸೆ ಸವಿಯಲು ಸಿದ್ದ. ಇದನ್ನು ಯಾವುದೇ ಚಟ್ನಿಯೊಂದಿಗೆ ತಿನ್ನಲು ಬಹಳ ರುಚಿಯಾಗುತ್ತದೆ.

Advertisement

-ಶ್ರೀರಾಮ್ ಜಿ . ನಾಯಕ್

Advertisement

Udayavani is now on Telegram. Click here to join our channel and stay updated with the latest news.

Next