Advertisement

ಮರವಂತೆ: ಸ್ವಚ್ಛ ,ಸುಂದರಗೊಳಿಸಲು ಸಹಕರಿಸಿ

11:15 PM Jul 07, 2019 | Sriram |

ಉಪ್ಪುಂದ: ಮರವಂತೆ ಗ್ರಾಮ ಪಂಚಾಯತ್‌ ಊರನ್ನು ಸ್ವಚ್ಛ ಮತ್ತು ಸುಂದರವಾಗಿಸುವ ಸಂಕಲ್ಪ ತೊಟ್ಟಿದ್ದು, ಆ ನಿಟ್ಟಿನಲ್ಲಿ ಘನತ್ಯಾಜ್ಯ ನಿರ್ವಹಣೆ ಮಾಡುತ್ತಿದೆ. ಸಾರ್ವಜನಿಕರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ ಮನೆಮನೆಗೆ ಬರುವ ಸ್ವಚ್ಛತಾ ಸಿಬಂದಿಗೆ ನೀಡಬೇಕು. ವ್ಯವಸ್ಥೆಯ ಸುಸೂತ್ರ ನಿರ್ವಹಣೆಗಾಗಿ ನಿಗದಿಪಡಿಸಿದ ಮಾಸಿಕ ಶುಲ್ಕವನ್ನು ಪಾವತಿಸಬೇಕು ಎಂದು ಅಧ್ಯಕ್ಷೆ ಅನಿತಾ ಆರ್‌. ಕೆ. ಹೇಳಿದರು.

Advertisement

ಮರವಂತೆ ಪಂಚಾಯತ್‌ನ ಸುವರ್ಣ ಸಭಾಭವನದಲ್ಲಿ ನಡೆದ ಮೊದಲ ಸುತ್ತಿನ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆಕ್ಷೇಪ
ಗ್ರಾಮಸಭೆಯ ಆರಂಭದಲ್ಲಿ ಸಭೆಯ ಕರೆಯೋಲೆಯ ಕಾರ್ಯಸೂಚಿಯಲ್ಲಿ ಕೇವಲ ಎರಡು ವಿಷಯ ಮಾತ್ರವೇ ಮುದ್ರಿಸಿರುವುದರ ಬಗ್ಗೆ ಮತ್ತು ಕಳೆದ ವರ್ಷ ಎರಡನೆ ಸುತ್ತಿನ ಗ್ರಾಮ ಸಭೆ ನಡೆಸದಿರುವ ಬಗ್ಗೆ ಆಕ್ಷೇಪ ವ್ಯಕ್ತವಾಯಿತು. ಅಧ್ಯಕ್ಷರು ಮುಂದೆ ಅಂತಹ ತಪ್ಪುಗಳಾಗದಂತೆ ಎಚ್ಚರ ವಹಿಸುವ ಭರವಸೆ ನೀಡಿ, ಬಳಿಕ ಸಭೆ ಮುಂದುವರಿಸಿದರು.

ರಸ್ತೆ, ಬೀದಿ ದೀಪ ಸರಿ ಇಲ್ಲ
ವಿಜಯ್‌ ಕ್ರಾಸ್ತಾ ಮತ್ತು ಮಂಜುನಾಥ ಮಧ್ಯಸ್ಥ ಸಂಪೂರ್ಣ ಕೆಟ್ಟುಹೋಗಿರುವ ನಾಗಪ್ಪಯ್ಯ ಹೊಳೆಬಾಗುÉ ರಸ್ತೆ ದುರಸ್ತಿಯಾಗಬೇಕು ಎಂದು, ಮಾಜಿ ಅಧ್ಯಕ್ಷ ಎಸ್‌. ಜನಾರ್ದನ ಅವರು ಸೋಲಾರ್‌ ಬೀದಿದೀಪ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿ ಇರಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸನ್ಮಾನ್‌ ಶೆಟ್ಟಿ ಆಯುಷ್ಮಾನ್‌ ಭಾರತ ಮತ್ತು ಆರೋಗ್ಯ ಕರ್ನಾಟಕ ಯೋಜನೆಯ ಮಾಹಿತಿ ನೀಡಿದರು. ಕೇಂದ್ರಕ್ಕೆ ಬರುವ ಎಲ್ಲ ರೋಗಿಗಳಿಗೆ ಉಚಿತ ಔಷಧ ನೀಡಬೇಕೆಂದು ನಾರಾಯಣ ದೇವಾಡಿಗ ಆಗ್ರಹಿಸಿದರು. ಶೇಖರ ಕುಂದರ್‌ ಸಂಜೆ ಕೇಂದ್ರ ಮುಚ್ಚುವ ಸಮಯವನ್ನು ಬದಲಿಸಬೇಕು ಎಂದರು. ವೈದ್ಯಾಧಿಕಾರಿ ಇರುವ ನಿಯಮವನ್ನು ವಿವರಿಸಿದರು. ಮೆಸ್ಕಾಂ ಇಂಜಿನಿಯರ್‌ ವಿಜಯೇಂದ್ರ ಆಚಾರ್‌ ಗ್ರಾಮದಲ್ಲಿ ಎರಡು ಹೊಸ ಪರಿವರ್ತಕ ಅಳವಡಿಸಿ, ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್‌ ಒದಗಿಸಲಾಗುತ್ತಿದೆ. ಮುಂದೆ ಬಿಲ್‌ಗ‌ಳನ್ನು ಆನ್‌ಲೈನ್‌ ಮೂಲಕ ಪಾವತಿಸಬೇಕು ಎಂದು ವಿನಂತಿಸಿದರು.

Advertisement

ಪಶು ವೈದ್ಯಾಧಿಕಾರಿ ಡಾ| ಅರುಣ ಆಡು ಸಾಕಣೆ ಯೋಜನೆಯ ವಿವರ ನೀಡಿದರು. ಕೃಷಿ ಅಧಿಕಾರಿ ಪರಶುರಾಮ ಇಲಾಖೆಯ ಕೃಷಿ ಅಭಿಯಾನ, ಕಿಸಾನ್‌ ಸಮ್ಮಾನ್‌, ಕೃಷಿ ಭಾಗ್ಯ, ಕೃಷಿ ಹೊಂಡ ಯೋಜನೆಗಳ ಮಾಹಿತಿ ನೀಡಿದರು. ಮೀನುಗಾರಿಕೆ ಇಲಾಖೆಯ ಮೇಲ್ವಿಚಾರಕ ವಿಶ್ವನಾಥ್‌, ಶಿಕ್ಷಣ ಇಲಾಖೆಯ ಬಗ್ಲೆ ನಾಗರಾಜ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸವಿತಾ ಶೆಟ್ಟಿ, ಸಾಮಾಜಿಕ ಅರಣ್ಯ ವಿಭಾಗದ ಉಪ ವಲಯ ಅರಣ್ಯಾಧಿಕಾರಿ ಶಿವಲೀಲಾ, ಸಿಡಬ್ಲ್ಯುಸಿಯ ದಿಲಾÏದ್‌ ತಮ್ಮ ಇಲಾಖೆಗಳ ಕುರಿತು ಮಾಹಿತಿ ನೀಡಿದರು.

ಅಭಿವೃದ್ಧಿ ಅಧಿ ಕಾರಿ ವೀರಶೇಖರ ಸ್ವಾಗತಿಸಿದರು. ಕರಸಂಗ್ರಾಹಕ ಶೇಖರ ಮರವಂತೆ ಮತ್ತು ಕಂಪ್ಯೂಟರ್‌ ನಿರ್ವಾಹಕ ಗುರುರಾಜ ಬಿಲ್ಲವ, ಹಿಂದಿನ ವರ್ಷದ ವರದಿ, ಕಳೆದ ಗ್ರಾಮ ಸಭೆಯ ನಡಾವಳಿ, ಗ್ರಾಮಸಭೆಯ ಪೂರ್ವದಲ್ಲಿ ನಡೆದಿದ್ದ ವಾರ್ಡ್‌ಸಭೆಗಳ ನಡಾವಳಿಗಳನ್ನು ವಾಚಿಸಿದರು. ಕಾರ್ಯದರ್ಶಿ ಹರಿಶ್ಚಂದ್ರ ಆಚಾರ್‌ ನಿರೂಪಿಸಿ, ವಂದಿಸಿದರು.

ಆಯ್ಕೆ ಮಾಡಿಲ್ಲ
ಸಭೆಯ ಬಹುಕಾಲ ಅಧಿಕಾರಿಗಳಿಂದ ಮಾಹಿತಿ ನೀಡಿಕೆಗೆ ವ್ಯಯವಾದ ಕಾರಣ ಗ್ರಾಮಸಭೆಯಲ್ಲಿ ಮುಖ್ಯವಾಗಿ ಆಗಬೇಕಾಗಿದ್ದ ಪಂಚಾಯತ್‌ನ ಹಿಂದಿನ ವರ್ಷದ ಸಾಧನೆ, ಮುಂದಿನ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚೆ, ಫಲಾನುಭವಿಗಳ ಆಯ್ಕೆ ನಡೆಯಲಿಲ್ಲ.

          
Advertisement

Udayavani is now on Telegram. Click here to join our channel and stay updated with the latest news.

Next