ಧಾರವಾಡ: ಮಳಿ-ಬೆಳಿ ಸಂಪೈತ್ರಿಪಾ..ಗುಡುಗು ಸಿಡ್ಲು ಭಾಳ ಐತ್ರಿಪಾ..ರಕ್ತದ ಕಾವಲಿ ಹರಿತೇತ್ರಿಪಾ..ನನ್ನ ತಂಗೀಗೆ ಐದು ವಾರಾ ಬಿಡ್ರಿಪಾ..ಹುಟ್ಟಿದ ಮಗೂಗೆ ಬಲಾ ಇಲ್ರಿಪಾ..
ಇದಕ್ಕೂ ಮುನ್ನ ಬೆಳಗ್ಗೆ ಬಸವಣ್ಣ (ನಂದೀಶ್ವರ) ದೇವರ ಶಿಲಾ ವಿಗ್ರಹಕ್ಕೆ ಏಕಾದಶ ಮಹಾರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ, ಅಲಂಕಾರ ಪೂಜೆ ಮತ್ತು ಮಹಾಮಂಗಳಾರತಿಯು ಹಿರಿಯ ವೈದಿಕರಾಗಿರುವ ತಿಪ್ಪಯ್ಯಸ್ವಾಮಿ ಯರಗಂಬಳಿಮಠ ಮತ್ತು ಶೇಖಯ್ಯಸ್ವಾಮಿ ಹಿರೇಮಠ ಸೇರಿದಂತೆ ದೇವಾಲಯದ ಅರ್ಚಕ ಬಳಗದ ವೈದಿಕತ್ವದಲ್ಲಿ ನಡೆದವು.
ಸಂಜೆ 5:30 ಗಂಟೆಗೆ ವಿವಿಧ ಜನಪದ ವಾದ್ಯ-ಮೇಳಗಳೊಂದಿಗೆ ಅಲಂಕೃತ ರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ಭಕ್ತಗಣ ಉತ್ತತ್ತಿ, ಬಾಳಿಹಣ್ಣು, ಲಿಂಬೆಹಣ್ಣುಗಳನ್ನು ರಥಕ್ಕೆ ಎಸೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಜಾತ್ರೆ ಅಂಗವಾಗಿ ಅಹೋರಾತ್ರಿ ಆನಂದ ಕರಾಡೆ ಹಾಗೂ ಮಹಾಂತೇಶ ಹಡಪದ ಜಂಟಿ ನೇತೃತ್ವದಲ್ಲಿ ಸವಾಲ್-ಜವಾಬ್ ಭಜನಾ ಸ್ಪರ್ಧೆ ಜರುಗಿತು.
Advertisement
ಇದು ಮರೇವಾಡ ಬಸವಣ್ಣ (ನಂದೀಶ್ವರ) ದೇವರ ವಾರ್ಷಿಕ ಜಾತ್ರಾ ಮಹೋತ್ಸವ ಕೊನೆಯಲ್ಲಿ ಕೇಳಿ ಬಂದ ಕಾರ್ಣಿಕ. ರಥೋತ್ಸವ ಸಂಪನ್ನಗೊಂಡ ಬಳಿಕ ಅಮ್ಮಿನಬಾವಿಯ ಬಸವಣ್ಣ ದೇವರ ದೇವಾಲಯದ ಪ್ರಧಾನ ಅರ್ಚಕ ಬಸವರಾಜ ಧರ್ಮಪ್ಪ ಪೂಜಾರ ಅವರು ಕಾರ್ಣಿಕ ಹೇಳಿ ವರ್ಷದ ಭವಿಷ್ಯ ನುಡಿದರು.