Advertisement

ವರ್ಷಾಂತ್ಯಕ್ಕೆ ಮಾರುತಿ ಸುಜುಕಿಯಿಂದ ಅಗ್ಗದ ಕಾರುಗಳು ಮಾರುಕಟ್ಟೆಗೆ

10:09 AM Mar 04, 2020 | sudhir |

ಮುಂಬೈ: ದೇಶದ ಅತ್ಯಂತ ದೊಡ್ಡ ಕಾರು ಉತ್ಪಾದಕ ಸಂಸ್ಥೆ ಮಾರುತಿ ಸುಜುಕಿ ಎರಡು ಹೊಸ ಮಾದರಿಯ ಕಾರುಗಳ ಅಭಿವೃದ್ಧಿಯಲ್ಲಿ ತೊಡಗಿದೆ. ಹೊಸ ಸುರಕ್ಷತಾ ನಿಯಮಗಳು ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ವ್ಯವಸ್ಥೆಯಿಂದ ಕೂಡಿರುವ ಎರಡು ಕಾರುಗಳು 5 ಲಕ್ಷ ರೂ.ಗಳಿಗಿಂತಲೂ ಕಡಿಮೆ ಮೊತ್ತದ್ದಾಗಿರಲಿವೆ ಎಂದು “ದ ಇಕನಾಮಿಕ್‌ ಟೈಮ್ಸ್‌’ ವರದಿ ಮಾಡಿದೆ.

Advertisement

ಮೊದಲನೇ ಕಾರು 800 ಸಿಸಿ ಸಾಮರ್ಥ್ಯ ಹೊಂದಿದ್ದರೆ, ಎರಡನೇಯದ್ದು 1 ಲೀಟರ್‌ ಎಂಜಿನ್‌ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗಿದೆ. ಸುಜುಕಿ ಮೋಟರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಕೆನಿಚಿ ಅಯುಕವಾ ಈ ಬಗ್ಗೆ ಮಾಹಿತಿ ನೀಡಿ, 800 ಸಿಸಿ ಸಾಮರ್ಥ್ಯದ ಹೊಸ ಮಾದರಿಯ ಕಾರು ಅಭಿವೃದ್ಧಿಯ ಬಗ್ಗೆ ಕಂಪನಿ ಈಗಾಗಲೇ ಕೆಲಸ ಶುರು ಮಾಡಿದೆ ಎಂದ ನಿರ್ದೇಶಕ ಕಡಿಮೆ ವೆಚ್ಚದಲ್ಲಿ ಕಾರು ಮಾರುಕಟ್ಟೆಗೆ ಬಿಡುಗಡೆ ಮಾಡುವುದೇ ಸವಾಲಿನದ್ದು ಎಂದಿದ್ದಾರೆ. ಮೊದಲ ಕಾರು ಈ ವರ್ಷಾಂತ್ಯಕ್ಕೆ ಮತ್ತು ಎರಡನೇ ಮಾದರಿಯದ್ದು 2021ರಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ಹ್ಯುಂಡೈ ಮೋಟರ್‌ ಇಂಡಿಯಾ ಮತ್ತು ಟಾಟಾ ಮೋಟರ್ಸ್‌ ಆರಂಭಿಕ ಹಂತದ ಕಾರುಗಳ ಉತ್ಪಾದನೆ ಮಾಡುವುದರ ಬಗ್ಗೆ ಸದ್ಯ ಆಸಕ್ತಿ ವಹಿಸದೇ ಇರುವಾಗ ಮಾರುತಿ ಸುಜುಕಿ, ಆ ಅವಕಾಶ ಸದುಪಯೋಗ ಮಾಡಲು ಉದ್ದೇಶಿಸಿದೆ. ಇದರ ಜತೆಗೆ ಸಣ್ಣ ಅಥವಾ ಆರಂಭಿಕ ಹಂತದ ಕಾರುಗಳ ಮಾರುಕಟ್ಟೆ ವ್ಯಾಪ್ತಿಯೂ ಕುಂಠಿತವಾಗುತ್ತಿದ್ದು . 2010ರಲ್ಲಿ ಶೇ.25ರಷ್ಟು ಈ ವಿಭಾಗದ ಮಾರುಕಟ್ಟೆ ಇದ್ದದ್ದು ಪ್ರಸ್ತುತ ಅದರ ಪ್ರಮಾಣ ಶೇ.8ಕ್ಕೆ ಇಳಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next