Advertisement

BS VI ಸ್ಟಾಂಡರ್ಡ್‌ ಮಾದರಿಯಲ್ಲಿ ಮಾರುತಿ ಹೊರತರುತ್ತಿರುವ ಕಾರುಗಳ ಮಾಹಿತಿ

09:34 AM Nov 23, 2019 | Hari Prasad |

ಹೊಸದಿಲ್ಲಿ: ದೇಶದ ಪ್ರಮುಖ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ, ಬ್ರೆಜ್ಜಾ ಮತ್ತು ಎಸ್‌-ಕ್ರಾಸ್‌ ಮಾದರಿಯ ಕಾರುಗಳುನ್ನು ಅನ್ನು ಬಿಎಸ್‌-VI ಪೆಟ್ರೋಲ್‌ ಆವೃತ್ತಿಗೆ ಉನ್ನತೀಕರಿಸಿ ಮಾರುಕಟ್ಟೆಗೆ ಪರಿಚಯಿಸಲಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ.

Advertisement

ನೂತನ ಭಾರತ್‌ ಸ್ಟೇಜ್‌-VI (ಬಿಎಸ್‌VI) ಇಂಧನ ಹೊರಸೂಸುವಿಕೆಯ ಮಾನದಂಡಗಳು 2020ರ ಏಪ್ರಿಲ್‌ 1ರಿಂದ ಜಾರಿಗೆ ಬರಲಿದ್ದು, ಈ ಹಿನ್ನಲೆ ಬಹುತೇಕ ಕಂಪನಿಗಳು ತಮ್ಮ ವಾಹನಗಳ ಇಂಧನ ಕಾರ್ಯಕ್ಷಮತೆ ತಂತ್ರಜ್ಞಾನವನ್ನು ಇದಕ್ಕೆ ಅನುಗುಣವಾಗಿ ಮೇಲ್ದರ್ಜೆಗೆ ಏರಿಸುತ್ತಿವೆ.

ಕಂಪನಿಯು ಶೀಘ್ರದಲ್ಲೇ ಬ್ರೆಜ್ಜಾ , ಎಸ್‌- ಕ್ರಾಸ್‌ ಮತ್ತು ಬಿಎಸ್‌ -VI ಸ್ಟಾಂಡರ್ಡ್‌ ಮಾದರಿಯ ವಾಹನಗಳನ್ನು ಬಿಎಸ್‌-6 ಪೆಟ್ರೋಲ್‌ ಆವೃತ್ತಿಯ ರೂಪಾಂತರದಲ್ಲಿ ಮಾರುಕಟ್ಟೆಗೆ ತರಲಿದ್ದು, ಹೊಗೆ ಹೊರಸೂಸುವಿಕೆಯ ನೂತನ ಮಾನದಂಡಗಳಿಗೆ ಅನುಗುಣವಾಗಿ ಕಾರುಗಳ ಇಂಧನ ಕಾರ್ಯಕ್ಷಮತೆಯನ್ನು ಉನ್ನತೀಕರಿಸಲಿದೆ.

2020ರ ಏಪ್ರಿಲ್‌ 1ರಿಂದ ಈ ನಿಯಮ ಜಾರಿಗೆ ಬರಲಿದ್ದು, ನಾಲ್ಕನೇ ತ್ತೈಮಾಸಿಕದಲ್ಲಿ (ಹಣಕಾಸು ವರ್ಷದ ಜನವರಿ- ಮಾರ್ಚ್‌) ಬಿಎಸ್‌ -6 ಪೆಟ್ರೋಲ್‌ ಶ್ರೇಣಿಯ ಬ್ರೆಜ್ಜಾ ಮತ್ತು ಎಸ್‌- ಕ್ರಾಸ್‌ ಅನ್ನು ಪರಿಚಯಿಸಲಿದ್ದೇವೆ ಎಂದು ಮಾರುತಿ ಸುಜುಕಿ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್‌ ಶ್ರೀವಾಸ್ತವ ತಿಳಿಸಿದ್ದಾರೆ.

ಪ್ರಸ್ತುತ ಕಂಪನಿಯು ಬ್ರೆಜ್ಜಾ ಮತ್ತು ಎಸ್‌- ಕ್ರಾಸ್‌ನ ಡೀಸೆಲ್‌ ಶ್ರೇಣಿಯ ಕಾರುಗಳನ್ನು ಮಾತ್ರವೇ ಮಾರಾಟ ಮಾಡುತ್ತಿದ್ದು, ಮಾರುಕಟ್ಟೆ ಟ್ರೆಡಿಂಗ್‌ ಅನ್ನು ಗಮನದಲ್ಲಿ ಇರಿಸಿಕೊಂಡು ಬಿಎಸ್‌- VI ಮಾನದಂಡಗಳಿಗೆ ಅನುಗುಣವಾಗಿ ಮಾರುಕಟ್ಟೆಗೆ ಕಾರುಗಳು ಪರಿಚಯಿಸಲ್ಲಿದೆ ಎಂದು ಕಂಪನಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next