ಮುಂಬೈ: ಮಾರುತಿ ಸುಜುಕಿ(Maruti Suzuki) ಭಾರತದಲ್ಲಿ ನೂತನ ಡಿಜೈರ್ ಕಾಂಪ್ಯಾಕ್ಟ್ ಸೆಡಾನ್ (Sedan) ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದ್ದು, ನವೆಂಬರ್ 11ರಂದು ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಸಂದರ್ಭದಲ್ಲಿ ಕಾರಿನ ಬೆಲೆಯನ್ನು ಅಧಿಕೃತವಾಗಿ ಘೋಷಿಸುವುದಾಗಿ ತಿಳಿಸಿದೆ.
ನೂತನ ಡಿಜೈರ್ ಹೊಸ ವಿನ್ಯಾಸ ಹೊಂದಿದ್ದು, ಇತ್ತೀಚೆಗಷ್ಟೇ ಸೋರಿಕೆಯಾದ ನೂತನ ಡಿಜೈರ್ ನ ಮಾಹಿತಿ ಪ್ರಕಾರ, ಅತ್ಯಾಧುನಿಕ ಮುಂಭಾಗದ ಡಿಸೈನ್, ಸ್ಟೈಲಿಶ್ ಆದ ಕಪ್ಪು ಗೆರೆಗಳ ವಿನ್ಯಾಸದೊಂದಿಗೆ ಗ್ರಾಹಕರನ್ನು ಆಕರ್ಷಿಸುವ ವೈಶಿಷ್ಟ್ಯಗಳನ್ನು ಹೊಂದಿರುವುದಾಗಿ ವರದಿ ತಿಳಿಸಿದೆ.
ಹೊಸದಾಗಿ ದೇಶದ ಮಾರುಕಟ್ಟೆಯನ್ನು ಪ್ರವೇಶಿಸಲು ಸಜ್ಜಾಗಿರುವ ಮಾರುತಿ ಸುಜುಕಿ ಡಿಜೈರ್ Diamond cut alloy ಚಕ್ರಗಳು, ಕಣ್ಣು ಸೆಳೆಯುವ ಎಲ್ ಇಡಿ ಲೈಟ್ಸ್, ಸ್ಟೈಲಿಶ್ ಔಟ್ ಲೈನ್ಸ್ ಸೇರಿದಂತೆ ಅಪ್ ಗ್ರೇಡೆಡ್ ಫೀಚರ್ಸ್ ಅನ್ನು ಹೊಂದಿದೆ.
ನೂತನ ಸ್ವಿಫ್ಟ್ ನಲ್ಲಿ ಲಭ್ಯವಾಗುವ 1.2 ಲೀಟರ್ ಝಡ್ ಸೀರೀಸ್ ಪೆಟ್ರೋಲ್ ಎಂಜಿನ್ ಹೊಸ ಡಿಜೈರ್ ನಲ್ಲೂ ಇರಲಿದೆ.
ಈ ಎಂಜಿನ್ ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ. ಡಿಜೈರ್ ಪೆಟ್ರೋಲ್ ಹಾಗೂ ಸಿಎನ್ ಜಿ ಆಯ್ಕೆಯ ಆಫರ್ ನೀಡಿದೆ.