Advertisement

ನೂತನ ಸ್ವಿಫ್ಟ್, ಡಿಝೈರ್ ಸೇರಿ 1279 ಕಾರು ವಾಪಸ್; ಮಾರುತಿ ಸುಜುಕಿ

01:28 PM Jul 25, 2018 | Sharanya Alva |

ನವದೆಹಲಿ:ಭಾರತದ ಬಹುದೊಡ್ಡ ಕಾರು ತಯಾರಿಕಾ ಸಂಸ್ಥೆಯಾದ ಮಾರುತಿ ಸುಜುಕಿ ಸುಮಾರು 1,279 ಹೊಸ ಸ್ವಿಫ್ಟ್ ಹಾಗೂ ಡಿಝೈರ್ ಮಾದರಿ ಕಾರುಗಳನ್ನು ಸ್ವಯಂ ಆಗಿ ವಾಪಸ್ ಪಡೆಯುತ್ತಿರುವುದಾಗಿ ಬುಧವಾರ ತಿಳಿಸಿದೆ.

Advertisement

ಏರ್ ಬ್ಯಾಗ್ ಕಂಟ್ರೋಲರ್ ಯೂನಿಟ್ ನಲ್ಲಿ ಇದ್ದಿರಬಹುದಾದ ಸಮಸ್ಯೆಯನ್ನು ಪರೀಕ್ಷಿಸುವ ನಿಟ್ಟಿನಲ್ಲಿ ಹ್ಯಾಚ್ ಬ್ಯಾಕ್ ಹಾಗೂ ಸ್ವಿಫ್ಟ್ ಡಿಝೈರ್ ಸೆಡಾನ್ ಮಾದರಿ ಕಾರುಗಳನ್ನು ಮುಂಜಾಗ್ರತೆಯಾಗಿ ವಾಪಸ್ ಪಡೆಯಲಾಗಿದೆ ಎಂದು ಸುಜುಕಿ ಸಂಸ್ಥೆ ವಿವರಣೆ ನೀಡಿದೆ.

2018ರ ಮೇ 7 ಹಾಗೂ 2018ರ ಜುಲೈ 5ರ ನಡುವೆ ತಯಾರಾದ 566 ಹೊಸ ಸ್ವಿಫ್ಟ್ ಹಾಗೂ 713 ಹೊಸ ಡಿಝೈರ್ ಕಾರುಗಳು ವಾಪಸ್ ಪಡೆಯುವ ಅಭಿಯಾನದಲ್ಲಿ ಸೇರಿದೆ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next