Advertisement

ಸತತ 8ನೇ ತಿಂಗಳು ಕಾರು ಉತ್ಪಾದನೆ ಕಡಿತಗೊಳಿಸಿದ ಮಾರುತಿ ಸುಝುಕಿ

09:46 AM Nov 10, 2019 | Hari Prasad |

ಮುಂಬಯಿ: ಮಾರುಕಟ್ಟೆಯಲ್ಲಿ ಬೇಡಿಕೆ ಕೊರತೆ ಹಿನ್ನೆಲೆಯಲ್ಲಿ ದೇಶದ ಅತಿ ದೊಡ್ಡ ಕಾರು ತಯಾರಿಕೆ ಕಂಪೆನಿ ಮಾರುತಿ ಸುಝುಕಿ ಉತ್ಪಾದನೆಯನ್ನು ಕಡಿತಗೊಳಿಸಿದೆ.
ಸತತ 8ನೇ ತಿಂಗಳೂ ಉತ್ಪಾದನೆ ಕಡಿತವಾಗಿದ್ದು, ಕಳೆದ ತಿಂಗಳು 1,19,337ಕ್ಕೆ ಉತ್ಪಾದನೆ ಕುಸಿದಿದೆ.

Advertisement

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇದು 1,50,497 ಆಗಿತ್ತು. ಇದರೊಂದಿಗೆ ಪ್ರಯಾಣಿಕ ವಾಹನಗಳ ಉತ್ಪಾದನೆಯೂ ಇಳಿಕೆಯಾಗಿದೆ. 1,17,383 ಕಳೆದ ತಿಂಗಳಿನ ಉತ್ಪಾದನೆಯಾಗಿದ್ದರೆ, ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇದು 1,48,318 ಆಗಿತ್ತು. ವ್ಯಾನ್‌ ಉತ್ಪಾದನೆಯೂ ಅರ್ಧಕ್ಕರ್ಧ ಕಡಿತಗೊಂಡಿದೆ. ಕಳೆದ ವರ್ಷ ಇದು 13,817 ಇದ್ದರೆ ಕಳೆದ ತಿಂಗಳು 7,661 ಆಗಿತ್ತು. ಸಣ್ಣ ಕಾರುಗಳ ಉತ್ಪಾದನೆ ಸೆಪ್ಟೆಂಬರ್‌ನಲ್ಲಿ 34,295 ಆಗಿದ್ದರೆ, ಕಳೆದ ತಿಂಗಳು ಇದು 20,985 ಆಗಿತ್ತು.

ಆದಾಗ್ಯೂ ಮಾರುಕಟ್ಟೆ ಮಾರುತಿ ಸುಝುಕಿ ಕಾರುಗಳ ಮಾರಾಟ ತುಸು ಚೇತರಿಕೆ ಕಂಡಿದೆ. ಅಕ್ಟೋಬರ್‌ನಲ್ಲಿ 1,44,277 ಕಾರುಗಳ ಮಾರಾಟವಾಗಿದ್ದು, ಕಳೆದ ವರ್ಷ ಇದೇ ಅವಧಿಗಿಂತ ಶೇ.4.5 ಏರಿಕೆ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next