ಮಂಗಳೂರು : ಮಾರುತಿ ಸುಜುಕಿ 3ನೇ ಆವೃತ್ತಿಯ ಸ್ವಿಫ್ಟ್ ಕಾರನ್ನು ನಗರದ ಕುಂಟಿಕಾನ ಜಂಕ್ಷನ್‌ನ ಭಾರತ್ ಆಟೋ ಕಾರ್ ಕಚೇರಿಯಲ್ಲಿ ಗುರುವಾರ ಬಿಡುಗಡೆ ಮಾಡಲಾಯಿತು.
ಭಾರತ್ ಆಟೋ ಕಾರ್ ಮಂಗಳೂರು ಆಡಳಿತ ನಿರ್ದೇಶಕ ಸುಧೀರ್ ಎಂ. ಪೈ ಮಾತನಾಡಿ, ಸ್ವಿಫ್ಟ್ ಮೊದಲ ಆವೃತ್ತಿಯನ್ನು 2005 ರಲ್ಲಿ ಬಿಡುಗಡೆ ಮಾಡಿದ್ದೆವು. ಮಂಗಳೂರಿ ನಲ್ಲಿ ಸುಮಾರು 10,000 ಸ್ವಿಫ್ಟ್ ಕಾರು ಚಲಿಸುತ್ತಿವೆ. 3ನೇ ಆವೃತ್ತಿಯ ಸ್ವಿಫ್ಟ್ ಕಾರು ಈಗ ಬಿಡುಗಡೆಗೊಂಡಿದ್ದು, ಈಗಾಗಲೇ 150ಕ್ಕೂ ಹೆಚ್ಚಿನ ಕಾರುಗಳು ಬುಕ್ಕಿಂಗ್ ಆಗಿವೆ ಎಂದರು.
ಸೀನಿಯರ್ ಸೇಲ್ಸ್ ಮ್ಯಾನೇಜರ್ ಡೆನ್ನಿಸ್ ಗೊನ್ಸಾಲ್ವಿಸ್ ಮಾತನಾಡಿ, ಬಿಡುಗಡೆಯಾದ ಮೊದಲ ವರ್ಷವೇ 60,000 ಸ್ವಿಫ್ಟ್ ಕಾರುಗಳು ಮಾರಾಟವಾಗಿವೆ. ಎರಡು ಬಾರಿ ಇಂಡಿಯನ್ ಕಾರ್ ಎಟ್ ದಿ ಇಯರ್ ಅವಾರ್ಡ್‌ಲಭಿಸಿದೆ. 2017ರಲ್ಲಿ ಒಟ್ಟು 16 ಲಕ್ಷ ಸ್ವಿಫ್ಟ್ ಕಾರು ಮಾರಾಟವಾಗಿವೆ ಎಂದರು.
ಕಾರ್ತಿಕ್ ಪುತ್ರನ್ ಕಾರಿನ ವೈಶಿಷ್ಟವನ್ನು ವಿವರಿಸಿ, ಸ್ವಿಫ್ಟ್ 3ನೇ ಆವೃತ್ತಿಯ ಕಾರು ಅತ್ಯಾಧುನಿಕ ವೈಶಿಷ್ಟ್ಯವನ್ನು ಹೊಂದಿದೆ. 7 ಇಂಚ್ ಟಚ್ ಸ್ಕ್ರೀನ್ ರಿವರ್ಸ್ ಕೆಮರಾ, ಫೋಟಿಂಗ್ ರೂಫ್, ಪೊಲೋಮಿ ಹೋಮ್ ಹೆಡ್ ಲ್ಯಾಂಪ್, ಆಟೋಮ್ಯಾಟಿಕ್ ಎ.ಸಿ., ಬ್ಲಾಕ್ ಕಾರ್ಬನ್ ಕಾಕ್‌ಪಿಟ್ ಡಿಸೈನ್, ಎಲ್‌ಇಡಿ ಕಾಂಬಿನೇಷನ್ ಟೈಲ್ ಲೈಟ್, ಅಟೋಮ್ಯಾಟಿಕ್ ಮ್ಯಾನುವಲ್ ಗೇರ್ ಹೊಂದಿದೆ ಎಂದು ವಿವರಿಸಿದರು.
ಉದ್ಯಮಿ ಬಿ.ಎಸ್. ಶೆಟ್ಟಿ, ಭಾರತ್ ಆಟೋ ಕಾರ್ನ ಅಧ್ಯಕ್ಷ ಸುಬ್ರಾಯ ಎಂ. ಪೈ, ನಿರ್ದೇಶಕ ಆನಂದ್ ಜಿ. ಪೈ, ಪ್ರಧಾನ ವ್ಯವಸ್ಥಾಪಕ ವಿಶ್ವ ಕುಮಾರ್, ಸೇಲ್ಸ್ ಮ್ಯಾನೇಜರ್ ಶಿವಕೀರ್ತಿ ಮೊದಲಾದವರು ಉಪಸ್ಥಿತರಿದ್ದರು. ಸುಜ್ಞಾನ್ ಜೆ. ಶಾಂತಿ ನಿರೂಪಿಸಿ, ಕಿಶೋರ್ ಕುಮಾರ್ ವಂದಿಸಿದರು.