Advertisement

ಬಿ. ಮಂಜುನಾಥ ಪೈ ಅವರ105ನೇ ಜನ್ಮ ದಿನಾಚರಣೆ

11:31 AM Feb 09, 2018 | Team Udayavani |

ಮಂಗಳೂರು: ಮಂಗಳೂರಿನ 30 ಮಾರ್ಕಿನ ಬೀಡಿ ತಯಾರಕರಾದ ಮೆ| ಭಾರತ್‌ ಬೀಡಿ ವರ್ಕ್ಸ್ ಪ್ರೈ.ಲಿ.ಯ ಸ್ಥಾಪಕ ಬಿ. ಮಂಜುನಾಥ ಪೈ ಅವರ 105ನೇ ಜನ್ಮ ದಿನವನ್ನು ಕದ್ರಿಯಲ್ಲಿರುವ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಿವಾನಂದ ಪೈ ಅವರು ಪ್ರಸ್ತಾವನೆಗೈದು, ಸಂಸ್ಥೆ ಹಾಗೂ ಸಂಸ್ಥೆಯ ಸ್ಥಾಪಕ ಬಿ. ಮಂಜುನಾಥ ಪೈ ಅವರ ಬಗ್ಗೆ ವಿವರಿಸಿದರು.

Advertisement

ಸಂಸ್ಥೆಯ ನಿರ್ದೇಶಕ ಅನಂತ್‌ ಜಿ. ಪೈಯವರು ಸಂಸ್ಥೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಮರ್ಪಿಸಿ, ಬೀಡಿ ಉದ್ಯಮದ ಇಂದಿನ ಆಗುಹೋಗುಗಳ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯಪಾಲಕ ನಿರ್ದೇಶಕರಾದ  ಬ್ರಾಯ ಎಂ. ಪೈ, ನಾಗೇಂದ್ರ ಡಿ. ಪೈ, ಆನಂದ್‌ ಜಿ. ಪೈ, ವೆಂಕಟೇಶ್‌ ಎಂ. ಪೈ, ಕಾರ್ಪೊರೇಶನ್‌ ಬ್ಯಾಂಕಿನ ವಿಭಾಗೀಯ ವ್ಯವಸ್ಥಾಪಕ ಎ.ಕೆ. ವಿನೋದ್‌, ಸಿಂಡಿಕೇಟ್‌ ಬ್ಯಾಂಕಿನ ಉಪ ಮಹಾಪ್ರಬಂಧಕ ಸೋಮಯಾಜಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ಸಂಸ್ಥೆಯ ಮತ್ತೋರ್ವ ನಿರ್ದೇಶಕರಾದ ಸುಧೀರ್‌ ಎಂ. ಪೈ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next