Advertisement

ಮಾರುತಿ ಸುಜುಕಿ ಕಾರು ಮಾರಾಟದಲ್ಲಿ ಶೇ.3.6ರಷ್ಟು ಕುಸಿತ

10:08 AM Mar 02, 2020 | sudhir |

ನವದೆಹಲಿ: ಭಾರತದ ಅತಿ ದೊಡ್ಡ ಕಾರು ಉತ್ಪಾದಕ ಸಂಸ್ಥೆ ಮಾರುತಿ ಸುಜುಕಿಯ ಕಾರು ಮಾರಾಟ ಪ್ರಮಾಣದಲ್ಲಿ ಕುಸಿತ ಕಂಡುಬಂದಿದೆ. 2020ರ ಫೆಬ್ರವರಿಯಲ್ಲಿ ಕಂಪನಿಯ 134,150 ಕಾರುಗಳು ಬಿಕರಿಯಾಗಿದ್ದು, ಮಾರಾಟ ಪ್ರಮಾಣ ಶೇ.3.6ರಷ್ಟು ಕುಸಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸ್ಥಳೀಯ ಮಾರುಕಟ್ಟೆಯಲ್ಲಿ 1,39,100 ಮಾರುತಿ ಕಾರುಗಳು ಮಾರಾಟವಾಗಿದ್ದವು.

Advertisement

ಇನ್ನೊಂದೆಡೆ ಕಂಪನಿಯ ರಫ್ತು ಪ್ರಮಾಣ ಶೇ.7.1ರಷ್ಟು ಪ್ರಗತಿ ಕಂಡಿದ್ದು, ಫೆಬ್ರವರಿಯಲ್ಲಿ 10,261 ಕಾರುಗಳು ಹೊರದೇಶಗಳಿಗೆ ರವಾನೆಯಾಗಿವೆ. ಕಳೆದ ವರ್ಷ ಫೆಬ್ರವರಿಯಲ್ಲಿ ಸಂಸ್ಥೆಯು 9582 ಕಾರುಗಳನ್ನು ರಫ್ತು ಮಾಡಿತ್ತು. ಇದೇ ವೇಳೇ ಆಲ್ಟೋ ಮತ್ತು ಎಸ್‌-ಪ್ರಸ್ಸೋ ರೀತಿಯ ಸಣ್ಣ ಕಾರುಗಳ ಮಾರಾಟ ಶೇ.11ರಷ್ಟು ಪ್ರಗತಿ ಕಂಡಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next