ನವದೆಹಲಿ: ಭಾರತದ ಪ್ರಸಿದ್ಧ ಮೋಟಾರು ವಾಹನ ಸಂಸ್ಥೆಯಾದ ಮಾರುತಿ ಸುಜುಕಿ ಸಂಸ್ಥೆಯು ತನ್ನ ಎಲ್ಲ ಮಾಡೆಲ್ ಕಾರುಗಳ ಬೆಲೆಯನ್ನು ಶೇ.0.1ರಿಂದ ಶೇ.4.3 ಏರಿಕೆ ಮಾಡಿದೆ.
Advertisement
ಜ.15ರಿಂದಲೇ ಹೊಸ ದರ ಅನ್ವಯವಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಕಾರು ತಯಾರಿಕೆಗೆ ಬಳಸಲಾಗುವ ಕಚ್ಚಾ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾರುಗಳ ಬೆಲೆಯನ್ನೂ ಏರಿಸಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ.
ಸಂಸ್ಥೆಯು 2021ರಲ್ಲಿ ಮೂರು ಬಾರಿ ಬೆಲೆ ಏರಿಕೆ ಮಾಡಿತ್ತು. ಜನವರಿಯಲ್ಲಿ ಶೇ.1.4, ಏಪ್ರಿಲ್‌ನಲ್ಲಿ ಶೇ.1.6 ಮತ್ತು ಸೆಪ್ಟೆಂಬರ್‌ನಲ್ಲಿ ಶೇ.1.9 ಬೆಲೆ ಏರಿಕೆ ಮಾಡಲಾಗಿತ್ತು.