ಮುಂಬಯಿ : ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಬಲೆನೊ ಎಸ್-ಸಿಎನ್‌ಜಿಯನ್ನು ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇದರೊಂದಿಗೆ ದೇಶದಲ್ಲಿ ಮಾರುತಿ ಸುಜುಕಿ ಕಂಪೆನಿಯ ಸಿಎನ್‌ಜಿ ಆವೃತ್ತಿಯಲ್ಲಿ ಮಾರುಕಟ್ಟೆಗೆ ತಂದಂತಹ ಎರಡನೇ ನೆಕ್ಸಾ ಕಾರು ಇದಾಗಿದೆ.
ವಿನ್ಯಾಸ ಮತ್ತು ವೈಶಿಷ್ಟ್ಯಗಳ ವಿಷಯದಲ್ಲಿ, ಪ್ರೀಮಿಯಂ ಹ್ಯಾಚ್‌ಬ್ಯಾಕ್ ಪೆಟ್ರೋಲ್ ಮೋಡ್‌ನಂತೆಯೇ ಇರಲಿದೆ. ಹೊಸ ಮಾರುತಿ ಸುಜುಕಿ ಬಲೆನೊ ಸಿಎನ್‌ಜಿ ಕೇವಲ ಒಂದು ಮ್ಯಾನುವಲ್ ಟ್ರಾನ್ಸ್‌ಮಿಷನ್ ಆಯ್ಕೆಯಲ್ಲಿ ಲಭ್ಯವಿದ್ದು ಮತ್ತು ದೇಶದ ಅತಿದೊಡ್ಡ ಕಾರು ತಯಾರಕರ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನೊಂದಿಗೆ ಮಾರಾಟವಾಗಲಿದೆ.
ಮಾರುತಿ ಸುಜುಕಿ ಬಲೆನೊ ಎಸ್-ಸಿಎನ್‌ಜಿ 1.2-ಲೀಟರ್ ಡ್ಯುಯಲ್‌ಜೆಟ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ, ಇದು ಕಂಪೆನಿಯಲ್ಲಿ ಅಳವಡಿಸಲಾದ ಸಿಎನ್‌ಜಿ ಕಿಟ್‌ನೊಂದಿಗೆ ಸಂಯೋಜಿಸಿದಾಗ 76 ಬಿಹೆಚ್‌ಪಿ ಪವರ್ ಮತ್ತು 98.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದ್ದು ಜೊತೆಗೆ MT ಆವೃತ್ತಿಯಲ್ಲಿ 22.35 kmpl ಮತ್ತು AT ವೇರಿಯಂಟ್‌ನಲ್ಲಿ 22.94 kmpl ಮೈಲೇಜ್ ಸಿಗಲಿದ್ದು, ಅದೇ CNG ನಲ್ಲಿ ಓಡಿಸಿದಾಗ 30.61 kmpl ಮೈಲೇಜ್ ಸಿಗಲಿದೆಯಂತೆ.
ಹೊಸ ಮಾರುತಿ ಸುಜುಕಿ ಬಲೆನೊ ಎಸ್-ಸಿಎನ್‌ಜಿಯು ತನ್ನ ವಿಭಾಗದಲ್ಲಿನ ಏಕೈಕ ಪ್ರೀಮಿಯಂ ಸಿಎನ್‌ಜಿ ಹ್ಯಾಚ್‌ಬ್ಯಾಕ್ ವಾಹನವಾಗಿದ್ದು, ಗ್ರಾಹಕರಿಗೆ ಸುಜುಕಿ ಕನೆಕ್ಟ್‌ನ 40ಕ್ಕೂ ಹೆಚ್ಚಿನ ಸಂಪರ್ಕಿತ ವೈಶಿಷ್ಟ್ಯಗಳೊಂದಿಗೆ 7-ಇಂಚಿನ ಸ್ಮಾರ್ಟ್ ಪ್ಲೇ ಪ್ರೊ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ ಆನ್-ಬೋರ್ಡ್ 6-ಏರ್‌ಬ್ಯಾಗ್‌ಗಳನ್ನು ಒಳಗೊಂಡಿದೆ.
ಕಾರಿನಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ವ್ಯವಸ್ಥೆ ಹೊಂದಿದ್ದು, ಸಿಎನ್‌ಜಿ ಸ್ಪೆಲ್ ಸ್ಕ್ರೀನ್‌ನೊಂದಿಗೆ ಮಿಡ್ ಡಿಸ್ಪ್ಲೇ, ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, 60:40 ರಿಯರ್ ಸ್ಪ್ಲಿಟ್ ಸೀಟ್ ಮತ್ತು ಇನ್ನೂ ಅನೇಕ ಆಧುನಿಕ ಸುಧಾರಿತ ವೈಶಿಷ್ಟ್ಯಗಳನ್ನು ಈ ಕಾರು ಒಳಗೊಂಡಿದೆ.
ಈ ಮಾರುತಿ ಸಿಎನ್‌ಜಿ ಕಾರಿಗೆ ದೆಹಲಿಯ ಎಕ್ಸ್ ಶೋರೂಂ ಪ್ರಕಾರ ರೂ.8.28 ಲಕ್ಷದಿಂದ ರೂ.9.21 ಲಕ್ಷದವರೆ ಬೆಲೆಯನ್ನು ಹೊಂದಿದೆ.
ಇದನ್ನೂ ಓದಿ : ವಿಡಿಯೋ… ಮನುಷ್ಯನ ರುಂಡವನ್ನು ಬಾಯಿಯಲ್ಲಿ ಹಿಡಿದು ನಗರ ತುಂಬಾ ಓಡಾಡಿದ ಬೀದಿ ನಾಯಿ