Advertisement

ಡೀಸೆಲ್ ಕಾರುಗಳಿಗೆ ಮಾರುತಿ ಗುಡ್‌ಬೈ

04:36 AM Apr 26, 2019 | mahesh |
ಹೊಸದಿಲ್ಲಿ: 2020ರ ಎ. 1ರಿಂದ ಭಾರತದಲ್ಲಿ ಕೆಳ ಶ್ರೇಣಿಗಳಲ್ಲಿನ ಡೀಸೆಲ್ ಕಾರುಗಳ ಮಾರಾಟ ಸ್ಥಗಿತಗೊಳಿಸಲು ಮಾರುತಿ ಸುಝುಕಿ ತೀರ್ಮಾನಿಸಿದೆ. ಕಂಪನಿಯು, ಡಿಝೈರ್‌, ಬಲೆನೋ, ಸ್ವಿಫ್ಟ್, ಬ್ರೆಝಾ ಸೇರಿದಂತೆ ಎಸ್‌-ಕ್ರಾಸ್‌, ಸಿಯಾಝ್ ಮಾದರಿಗಳಲ್ಲಿ ಡೀಸೆಲ್ ಕಾರುಗಳನ್ನು ತಯಾರಿಸುತ್ತಿದೆ. ಸರಕಾರ ನಿಯಮದಂತೆ, ಮುಂದಿನ ವರ್ಷದಿಂದ ‘ಭಾರತ್‌-4’ ಮಾದರಿ ಇಂಜಿನ್‌ ಕಡ್ಡಾಯ ಅಳವಡಿಸಬೇಕಿರುವುದ ರಿಂದ ಅದು ಕೆಳ ಶ್ರೇಣಿಗಳ ಡೀಸೆಲ್ ಕಾರುಗಳ ತಯಾ ರಿಕಾ ವೆಚ್ಚವನ್ನು ಹೆಚ್ಚಿಸುತ್ತದೆ. ಹಾಗಾಗಿ, ಆ ಶ್ರೇಣಿಗಳ ಡೀಸೆಲ್ ಕಾರು ಮಾರಾಟ ಸ್ಥಗಿತಗೊಳಿಸಲು ತೀರ್ಮಾನಿ ಸಲಾಗಿದೆ. ಉನ್ನತ ಶ್ರೇಣಿಗಳಾದ ಎಸ್‌-ಕ್ರಾಸ್‌, ಸಿಯಾಝ್ ಮಾದರಿಗಳ ಡೀಸೆಲ್ ಕಾರುಗಳ ಮಾರಾಟ ಮುಂದುವರಿಯಲಿದೆ.
Advertisement

Udayavani is now on Telegram. Click here to join our channel and stay updated with the latest news.

Next