Advertisement

ಕಾರುಗಳ ಬೆಲೆ ಹೆಚ್ಚಿಸದಿರಲು ಮಾರುತಿ ನಿರ್ಧಾರ

08:03 PM Nov 07, 2021 | Team Udayavani |

ನವದೆಹಲಿ: ಕಾರುಗಳ ಬಿಡಿಭಾಗಗಳ ಬೆಲೆ ಕ್ರಮೇಣ ಏರುತ್ತಿದ್ದರೂ ಅದರ ಬಿಸಿಯನ್ನು ಗ್ರಾಹಕರಿಗೆ ಈಗಲೇ ವರ್ಗಾಯಿಸದಿರಲು ಮಾರುತಿ ಸುಝುಕಿ ಇಂಡಿಯಾ ನಿರ್ಧರಿಸಿದೆ.

Advertisement

“ಪ್ರತಿಯೊಂದು ಕಾರಿನ ಒಟ್ಟಾರೆಯಲ್ಲಿ ಶೇ. 70ರಿಂದ 75ರಷ್ಟು ಬೆಲೆ, ಬಿಡಿಭಾಗಗಳ ಬೆಲೆಯಾಗಿರುತ್ತದೆ. ಪ್ರಸಕ್ತ ವರ್ಷದ ಎರಡನೇ ತ್ತೈಮಾಸಿಕದಲ್ಲಿ ನಮ್ಮ ಬಿಡಿಭಾಗಗಳ ಬೆಲೆಗಳು ಶೇ. 80ಕ್ಕೆ ಏರಿದೆ. ಹಿಂದೆಂದೂ ಕಾಣದಂಥ ಬೆಳವಣಿಗೆಯಿದು. ಬಿಡಿಭಾಗಗಳ ಬೆಲೆಗಳನ್ನು ನಿಯಂತ್ರಿಸುವ ಕುರಿತಂತೆ ನಾವು ನಿರ್ಧಾರ ಕೈಗೊಳ್ಳಲಾಗುತ್ತದೆ’ ಎಂದು ಕಂಪನಿಯ ಹಿರಿಯ ಕಾರ್ಯನಿರ್ವಹಣಾಧಿಕಾರಿ ಶಶಾಂಕ್‌ ಶ್ರೀವಾಸ್ತವ ತಿಳಿಸಿದ್ದಾರೆ.

ಇದನ್ನೂ ಓದಿ:ಪಕ್ಷ ಮತ್ತು ಸಾಮಾನ್ಯ ಜನರ ನಡುವೆ ನಂಬಿಕೆಯ ಸೇತುವೆಯಾಗಿ :ಪ್ರಧಾನಿ ಮೋದಿ

ಬಿಡಿಭಾಗಗಳ ಬೆಲೆಯೇರಿಕೆ ಹಿನ್ನೆಲೆಯಲ್ಲಿ ಇದೇ ಸೆಪ್ಟಂಬರ್‌ನಲ್ಲಿ ಕಂಪನಿ ತನ್ನ ಕಾರುಗಳ ಬೆಲೆಗಳಲ್ಲಿ ಶೇ. 1.9ರಷ್ಟು ಏರಿಕೆ ಮಾಡಿತ್ತು. ಅದೇ ರೀತಿ 2022ರ ಆರಂಭದಲ್ಲೂ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ ನೇರ ಉತ್ತರ ನೀಡಿದ ಅವರು, “ಸದ್ಯದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದೆ. ಬೆಲೆಯೇರಿಕೆಗೆ ಅಥವಾ ಇಳಿಕೆಗೆ ಅನುಗುಣವಾಗಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next