Advertisement
ಭಾರತೀಯರಕಾರು ಕನಸನ್ನು ಈಡೇರಿಸಿದ್ದು ಮಾರುತಿ 800. ಸರಿಸುಮಾರು37 ವರ್ಷಗಳ ಹಿಂದೆ ಭಾರತದ ರಸ್ತೆಗಿಳಿದ ಈ ಕಾರು, ಈಗಲೂ ಹಲವರಿಗೆ ಬಹುಪ್ರಿಯವಾದಕಾರು. ಈ ಕಾರಿನ ಬಗ್ಗೆ ನಿಮಗೆ ಗೊತ್ತಿಲ್ಲದಕೆಲವು ಸಂಗತಿಗಳು ಇಲ್ಲಿವೆ.
Related Articles
Advertisement
ಇವತ್ತು ನಿಮಗೆಕಾರು ಬೇಕು ಎಂದರೆ, ಒಂದೆರಡು ದಿನದಲ್ಲೇ ಸಿಗಬಹುದು.ಕೆಲವೊಂದು ವಾರಗಟ್ಟಲೇ ಹಿಡಿಯಬಹುದು. ಆದರೆ,1980-90ರ ದಶಕದಲ್ಲಿ ಮಾರುತಿ 800ಕಾರು ಸಿಗಬೇಕು ಎಂದರೆ ವರ್ಷಗಟ್ಟಲೇಕಾಯಬೇಕಾಗಿತ್ತು. ಆರಂಭದಲ್ಲಿಕಾರುಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಿ ನೀಡಲಾಗುತ್ತಿತು.
2.7ದಶ ಲಕ್ಷ ಕಾರು ಮಾರಾಟ :
ಭಾರತದಲ್ಲಿ27 ಲಕ್ಷ ಮಾರುತಿ 80 0ಕಾರುಗಳು ಮಾರಾಟವಾಗಿವೆ.1980ರ ವೇಳೆಗೆ 40 ಸಾವಿರ ಕಾರುಗಳು ಮಾರಾಟವಾಗಿದ್ದವು. ನಂತರದಲ್ಲಿ ಪ್ರತಿ ವರ್ಷ 1 ಲಕ್ಷ ಕಾರುಗಳು ಮಾರಾಟವಾಗುತ್ತಿದ್ದವು. ಹೀಗಾಗಿಯೇ 1997 ರ ವೇಳೆಗೆ ದೇಶದ ಟಾಪ್10ಕಾರುಗಳಲ್ಲಿ ಮಾರುತಿ ಕಂಪನಿಯ 8 ಕಾರುಗಳಿದ್ದವು.
ಮಾರುತಿ ಬ್ರ್ಯಾಂಡ್ ವಿದೇಶಗಳಿಗೆ ರಫ್ತು :
ಮಾರುತಿ 800ಕಾರಿನ ಮೂಲ ಬ್ರ್ಯಾಂಡ್ ಜಪಾನ್‌ನ ಸುಜುಕಿ. ಈ ಬ್ರ್ಯಾಂಡ್ ನಲ್ಲೇ ವಿದೇಶಗಳಿಗೆ ರಫ್ತಾಗುತ್ತಿತ್ತು. ಆದರೆ, ಭಾರತದಲ್ಲಿ ಮಾರುತಿ ಬ್ರ್ಯಾಂಡ್ ಯಶಸ್ವಿಯಾದ ಮೇಲೆ ಫ್ರಾನ್ಸ್, ಇಂಗ್ಲೆಂಡ್, ಇಟಲಿ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಿಗೆ ಇದೇ ಹೆಸರಿನಲ್ಲಿಯೇ ರಫ್ತು ಮಾಡಲಾಯಿತು. ವಿಶೇಷ ವೆಂದರೆ, ಸುಜುಕಿ ಎಂಬ ಹೆಸರನ್ನೇ ತೆಗೆಯಲಾಯಿತು.
2014ರಲ್ಲಿ ಮಾರುತಿ 800 ಜಮಾನ ಅಂತ್ಯ :
ಹೊಸ ತಂತ್ರಜ್ಞಾನದೊಂದಿಗೆ ಕಾರುಗಳು ಮಾರುಕಟ್ಟೆಗೆ ಬರಲು ಶುರುವಾದವು, ಮಾರುತಿ ಸುಜುಕಿ ಕೂಡ ಬೇರೆ ಬೇರೆ ಮಾದರಿಯ ಕಾರುಗಳನ್ನು ಬಿಡುಗಡೆ ಮಾಡಿತು. ಹೀಗಾಗಿ,2014ರಲ್ಲಿ ಈ ಕಾರಿನ ಉತ್ಪಾದನೆ ನಿಲ್ಲಿಸಲಾಯಿತು.
ಸೋಮಶೇಖರ ಸಿ.ಜೆ.