Advertisement

ಮಾರುತಿ ಸುಜುಕಿಗೆ ಲಾಭ ಶೇ. 66 ಕುಸಿತ

08:34 PM Oct 27, 2021 | Team Udayavani |

ನವದೆಹಲಿ : ಮಾರುತಿ ಸುಜುಕಿ ಸಂಸ್ಥೆಯ 2ನೇ ತ್ರೈಮಾಸಿಕದ ವರದಿ ಬುಧವಾರದಂದು ಬಿಡುಗಡೆಯಾಗಿದೆ. ಸಂಸ್ಥೆಗೆ ಕಳೆದ ವರ್ಷದ 2ನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ವರ್ಷದ 2ನೇ ತ್ರೈಮಾಸಿಕದಲ್ಲಿ ಶೇ. 66 ಕಡಿಮೆ ಲಾಭವಾಗಿದೆ.

Advertisement

2021ರ ಕ್ಯೂ2ರಲ್ಲಿ ಸಂಸ್ಥೆಗೆ 1,420 ಕೋಟಿ ರೂ. ಲಾಭವಾಗಿತ್ತು. ಅದು 2022ರ ಕ್ಯೂ2ರಲ್ಲಿ 487 ಕೋಟಿ ರೂ.ಗೆ ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗಿರುವ ಚಿಪ್‌ ಕೊರತೆಯಿಂದಾಗಿ ಸಂಸ್ಥೆಯ ಆದಾಯಕ್ಕೆ ಹೊಡೆತ ಬಿದ್ದಿದೆ.

ಈ ಅವಧಿಯಲ್ಲಿ 3,70,619 ವಾಹನಗಳನ್ನು ಮಾರಾಟ ಮಾಡಿದ್ದು, 18,756 ಕೋಟಿ ರೂ. ಆದಾಯ ಗಳಿಸಿತ್ತು. ಕಳೆದ ವಿತ್ತೀಯ ವರ್ಷದ ಇದೇ ಅವಧಿಯಲ್ಲಿ 3,20,133 ವಾಹನ ಮಾರಾಟವಾಗಿದ್ದು, ಆದಾಯ 20,551 ಕೋಟಿ ರೂ. ಆಗಿದೆ. ವಾಹನ ಮಾರಾಟದಲ್ಲಿ ಶೇ. 3 ಇಳಿಕೆಯಾಗಿದೆ. ಈ ವರ್ಷದ 2ನೇ ತ್ರೈಮಾಸಿಕದ ಅಂತ್ಯದ ವೇಳೆಗೆ ಸುಮಾರು 2 ಲಕ್ಷ ಗ್ರಾಹಕರ ಹೊಸ ಕಾರಿನ ಬೇಡಿಕೆಯನ್ನು ಪೂರೈಸುವಲ್ಲಿ ಸಂಸ್ಥೆ ವಿಫ‌ಲವಾಗಿದ್ದಾಗಿ ತಿಳಿಸಲಾಗಿದೆ.

ಇದನ್ನೂ ಓದಿ : ಭಿಕ್ಷಾಟನೆ ಜೊತೆಗೆ ದುಷ್ಟಟಗಳಿಗೆ ಒಳಗಾಗಿದ್ದ 15 ಮಂದಿಯನ್ನು ರಕ್ಷಿಸಿದ ನ್ಯಾಯಾಧೀಶರು

Advertisement

Udayavani is now on Telegram. Click here to join our channel and stay updated with the latest news.

Next