Advertisement

ಹುತಾತ್ಮ ಯೋಧನ ಅಂತ್ಯಕ್ರಿಯೆ

09:31 AM Nov 29, 2017 | |

ಧಾರವಾಡ: ಮಹಾರಾಷ್ಟ್ರದ ಗಡಚಿರೊಲಿ ಅರಣ್ಯದಲ್ಲಿ ನಕ್ಸಲರ ಕೂಂಬಿಂಗ್‌ ನಡೆಸುವಾಗ ಹುತಾತ್ಮನಾದ ಸಿಆರ್‌ಪಿಎಫ್‌ ಯೋಧ ಮನಗುಂಡಿ ಗ್ರಾಮದ ಮಂಜುನಾಥ ಶಿವಲಿಂಗಪ್ಪ ಜಕ್ಕಣ್ಣವರ ಅವರ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ ಮನಗುಂಡಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

Advertisement

ನಾಗಪುರದಿಂದ ಪುಣೆವರೆಗೆ ವಿಮಾನ ಮೂಲಕ ಹಾಗೂ ಪುಣೆಯಿಂದ ಧಾರವಾಡವರೆಗೆ ವಾಹನದ ಮೂಲಕ ಯೋಧನ ಪಾರ್ಥಿವ ಶರೀರವನ್ನು ತರಲಾ  ಯಿತು. ನಗರದ ಆರ್‌.ಎನ್‌.ಶೆಟ್ಟಿ ಮೈದಾನದ ಮುಂಭಾಗ ಬೆಳಗ್ಗೆ 11:00 ಗಂಟೆಗೆ ಆಗಮಿಸಿದ ಪಾರ್ಥಿವ
ಶರೀರವನ್ನು ಜಿಲ್ಲಾಡಳಿತ ಬರಮಾಡಿಕೊಂಡು ಗೌರವ ಸಲ್ಲಿಸಿತು. ಮಧ್ಯಾಹ್ನ 12:00 ಗಂಟೆವರೆಗೆ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.

ನಂತರ ಬೈಕ್‌ ರ್ಯಾಲಿ ಮೂಲಕ ಮನಗುಂಡಿ ಗ್ರಾಮದ  ವರೆಗೆ ಪಾರ್ಥಿವ ಶರೀರ ಕೊಂಡೊಯ್ಯಲಾಯಿತು. ಪಾರ್ಥಿವ ಶರೀರವನ್ನು ಮನೆಯಲ್ಲಿ ಕೆಲ ಕಾಲ ಇರಿಸಿ, ಸಂಪ್ರದಾಯ ಪ್ರಕಾರ ತಂದೆ ಶಿವಲಿಂಗಪ್ಪ, ತಾಯಿ ರತ್ನವ್ವ, ಪತ್ನಿ ಲಲಿತಾ, ಮೂರೂವರೆ ವರ್ಷದ ಮಗ ಗಣೇಶ, ಎರಡು ವರ್ಷದ ಮಗಳು ಲಕ್ಷ್ಮೀ ಸೇರಿ ಕುಟುಂಬದ ಸದಸ್ಯರು ಪೂಜೆ ಸಲ್ಲಿಸಿದರು. ಗ್ರಾಮದ ಸರಕಾರಿ ಹಿರಿಯ
ಪ್ರೌಢಶಾಲೆ ಆವರಣದಲ್ಲಿ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು. ಗ್ರಾಮದ ಹೊರವಲಯದ ರುದ್ರಭೂಮಿಯಲ್ಲಿ ಸಿಆರ್‌ ಪಿಎಫ್‌ ಯೋಧರು ಗಾಳಿಯಲ್ಲಿ ಮೂರು ಸುತ್ತು ಕುಶಾಲ ತೋಪು ಸಿಡಿಸಿ ಅಂತಿಮ ನಮನ ಸಲ್ಲಿಸಿದರು.

25 ಲಕ್ಷ ರೂ. ಪರಿಹಾರ ಘೋಷಣೆ
ಬೆಂಗಳೂರು: ನಕ್ಸಲರ ಗುಂಡಿನ ದಾಳಿಗೆ ಹುತಾತ್ಮರಾದ ಧಾರವಾಡ ಜಿಲ್ಲೆ ಮನಗುಂಡಿ ಗ್ರಾಮದ ವೀರ ಯೋಧ ಮಂಜುನಾಥ ಜಕ್ಕನ್ನವರ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರದ ವತಿಯಿಂದ 25 ಲಕ್ಷ ರೂ.ಪರಿಹಾರ ನೀಡಲಾಗುವುದು ಎಂದು ಸಿಎಂ  ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next