Advertisement

ತವರಿಗೆ ಆಗಮಿಸಿದ ವೀರಯೋಧ ಕಾಶಿರಾಯ ಪಾರ್ಥಿವ ಶರೀರ: ಪಂಚಭೂತಗಳಲ್ಲಿ ಲೀನ

01:41 PM Jul 04, 2021 | Team Udayavani |

ವಿಜಯಪುರ: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ವಿರುದ್ದದ ಗುಂಡಿನ‌ ಕಾಳಗದಲ್ಲಿ ಹುತಾತ್ಮರಾದ ಬಸವನಾಡಿನ ವೀರಯೋಧ ಕಾಶಿರಾಯ ಪಾರ್ಥೀವ ಶರೀರ ಭಾನುವಾರ ತವರಿಗೆ ಆಗಮಿಸಿತು.

Advertisement

ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಕಾಶೀರಾಯ ಬೊಮ್ಮನಹಳ್ಳಿ ಅವರ ಪಾರ್ಥಿವ ಶರೀರ ಬೆ.11ಕ್ಕೆ ಸ್ವಗ್ರಾಮಕ್ಕೆ ಆಗಮಿಸಿದಾಗ ಕುಟುಂಬ ಸದಸ್ಯರ ದುಃಖದ ಕಟ್ಟೆ ಒಡೆದು, ಆಕ್ರಂದ ಮುಗಿಲು ಮುಟ್ಟಿತ್ತು.

ಗ್ರಾಮಸ್ಥರು ಪರಾಕ್ರಮಿ ವೀರಪುತ್ರನ ಶರೀರವನ್ನು ದೇಶಭಕ್ತಿಯ ಘೋಷಣೆಗಳೊಂದಿಗೆ ಸ್ವಾಗತಿಸಿದರು. ಹುತಾತ್ಮ ವೀರಯೋಧನ ಕಳೇಬರವನ್ನು ಗ್ರಾಮದಲ್ಲಿ ‌ಮೆರವಣಿಗೆ ಮಾಡಿ, ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿರುವ ಸರಕಾರಿ ಪ್ರಾಥಮಿಕ ಶಾಲೆಗೆ ತರಲಾಯಿತು.

ರಾಜ್ಯ ಸರಕಾರದ ಪರವಾಗಿ ಪೊಲೀಸರು, ಸೇನೆಯ ಪರವಾಗಿ ಕಳೇಬರದೊಂದಿಗೆ ಬಂದಿದ್ದ ಸೇನೆಯ ಜವಾನರು ಗೌರವ ಸಲ್ಲಿಸಿದರು.

Advertisement

ಇದನ್ನೂ ಓದಿ:ಕೋವಿಡ್ ಸೋಂಕನ್ನು ಹೊರದೇಶದಿಂದ ತಂದಿದ್ದು ನರೇಂದ್ರ ಮೋದಿ: ಧ್ರುವನಾರಾಯಣ್

ನಂತರ ನಡೆದ ಸಾರ್ವಜನಿಕರ ದರ್ಶನ ಕಾರ್ಯಕ್ರಮದಲ್ಲಿ ಯರನಾಳ ಮಠದ ಗುರುಸಂಗನಬಸವ ಶ್ರೀಗಳು, ಬಸವನಬಾಗೇವಾಡಿ ಶಾಸಕ ಶಿವಾನಂದ  ಪಾಟೀಲ,  ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಸಹಾಯಕ ಆಯುಕ್ತ ಬಲರಾಮ ಲಮಾಣಿ, ಡಿಎಸ್ಪಿ ಅನಿಲಕುಮಾರ ಕೋಳೂರು, ತಹಶಿಲ್ದಾರರ ಎಂ.ಎನ್. ಬಳಿಗಾರ  ಸೇರಿದಂತೆ ಜಿಲ್ಲೆಯ ಗಣ್ಯರು ಹುತಾತ್ಮ ವೀರಯೋಧನಿಗೆ ಅಂತಿಮ‌ ನಮನ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next